ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ಡಿವೈಎಸ್ಪಿ ರಾಜೀನಾಮೆ: ಐಜಿಪಿ ನಂಜುಂಡಸ್ವಾಮಿ ವಿರುದ್ಧ ಆಡಿಯೋ ವೈರಲ್

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಅಕ್ಟೋಬರ್ 24: ಬಳ್ಳಾರಿ ಜಿಲ್ಲೆಯ ಹಂಪಿ ಡಿವೈಎಸ್ಪಿ ಕಾಶಿಗೌಡ ಅವರು ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಐಜಿಪಿ ನಂಜುಂಡಸ್ವಾಮಿ ಅವರ ಕುರಿತು ಆರೋಪ ಮಾಡಲಾಗಿದೆ.

ಐಜಿಪಿ ನಂಜುಂಡಸ್ವಾಮಿ ಪ್ರತಿ ಸ್ಟೇಷನ್ ನಿಂದ ಏಳೂವರೆ ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಪಿಎಸ್ಐ ಗಳು ನೇರವಾಗಿ ಐಜಿಪಿ ಜೊತೆ ಶಾಮೀಲಾಗಿದ್ದಾರೆ. ಐಜಿ ಕಡೆಯ ಏಜೆಂಟ್ ಗಳೇ ಬಂದು ಪಿಎಸ್ಐಗಳ ಬಳಿ ಕಮಿಷನ್ ಕಲೆಕ್ಟ್ ಮಾಡಿಕೊಂಡು ಹೋಗ್ತಾರೆ. ಐಜಿ, ನೀವು ಅಕ್ರಮಗಳನ್ನು ತಡೆದಿಲ್ಲ ಎಂದರು. ಆಗ ನಾನು ಅಕ್ರಮಗಳ ಮೂಲ ಆಧಾರವೇ ನಿಮ್ಮ ಆಫೀಸ್ ಎಂದೆ. ನಂತರ ರಾಜೀನಾಮೆ ನೀಡುವಂತೆ ಹೇಳಿದರು ಎಂದು ಆಡಿಯೋದಲ್ಲಿ ದೂರಿದ್ದಾರೆ.

ಜೊತೆಗೆ ನನ್ನ ಸ್ಟೇಷನ್ ಗೆ ಪ್ರತೀ ತಿಂಗಳು 7500 ಫಿಕ್ಸ್ ಮಾಡಿದ್ದಾರೆ. ನೇರವಾಗಿ ಅಕ್ರಮದಲ್ಲಿ ಅವರೇ ಭಾಗಿಯಾದಾಗ ಅಕ್ರಮ ನನಗೆ ಅಕ್ರಮ ತಡೆಯಲು ಆಗಲ್ಲ ಎಂದಿದ್ದಾರೆ.

ಈ ನಡುವೆ ಡಿವೈಎಸ್ ಪಿ ಕಾಶಿಗೌಡ ರಾಜೀನಾಮೆ ನೀಡಿರುವ ಸುದ್ದಿ ಕೇಳಿಬಂದಿದ್ದು, ಸಭೆಯೊಂದರಲ್ಲಿ ಐಜಿಪಿ ನಂಜುಂಡಸ್ವಾಮಿ ಮತ್ತು ಡಿವೈಎಸ್ಪಿ ನಡುವೆ ಮಾತಿನ ಚಕಮಕಿ ನಡೆದು ಈ ಸಂಬಂಧ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

 Ballari: Hampi DYSP Kashigowda Resignation Issue

ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಅವರಿಗೆ ಪತ್ರದ ಮುಖೇನ ರಾಜೀನಾಮೆ ಸಲ್ಲಿಸಲಾಗಿದೆ‌.‌ ಈಗ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲಾಗುವುದು ಎಂದು ಹಂಪಿ ಡಿವೈಎಸ್​​ಪಿ ಎಸ್.ಎಸ್.ಕಾಶಿ ಹೇಳಿದ್ದಾರೆ. ನಮ್ಮ ಕೆಳಗಿನವರು ನೇರವಾಗಿ ಮೇಲಾಧಿಕಾರಿಯೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಆದರೆ ಅಕ್ರಮ ತಡೆಯಲು ಒತ್ತಡ ಹೇರುತ್ತಾರೆ. ಕೆಳಗಿನವರು ಹಾಗೂ ಮೇಲಾಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿ ನಮ್ಮನ್ನು ಹಿಂಸಿಸುತ್ತಾರೆ. ಹೀಗಾಗೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

English summary
Hampi dysp kashigowda resigned and It is said that argument between dysp and IGP nanjundaswamy in meeting has lead to his resignation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X