ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ಬಡವಿಲಿಂಗ ದೇವಾಲಯದ ಅರ್ಚಕ ಕೃಷ್ಣ ಭಟ್ ನಿಧನ

|
Google Oneindia Kannada News

ಬಳ್ಳಾರಿ, ಏಪ್ರಿಲ್ 25; ಹಂಪಿಯ ಬಡವಿಲಿಂಗ ದೇವಾಲಯದ ಅರ್ಚಕ ಕೃಷ್ಣ ಭಟ್ ನಿಧನರಾಗಿದ್ದಾರೆ. ಶಿವಲಿಂಗದ ಪಾಣಿಪೀಠದ ಮೇಲೆಯೇ ಹತ್ತಿ ಸುಮಾರು 40 ವರ್ಷಗಳಿಂದ ಅವರು ಪೂಜೆ ಸಲ್ಲಿಸುತ್ತಿದ್ದರು.

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣ ಭಟ್ ಭಾನುವಾರ ಮುಂಜಾನೆ ನಿಧನ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಗಣ್ಯರು ಕೃಷ್ಣಭಟ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ಈಗ ಶಿವನಲ್ಲಿ ಐಕ್ಯರಾಗಿದ್ದಾರೆ ಎಂದು ಹೇಳಿದ್ದಾರೆ.

ಉರುಳಿ ಬೀಳುತ್ತಿವೆ ಹಂಪಿ ಸ್ಮಾರಕಗಳು, ಬೇಕಿದೆ ರಕ್ಷಣೆ ಉರುಳಿ ಬೀಳುತ್ತಿವೆ ಹಂಪಿ ಸ್ಮಾರಕಗಳು, ಬೇಕಿದೆ ರಕ್ಷಣೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯ ಕೃಷ್ಣ ಭಟ್ 1979ರಲ್ಲಿ ಹಂಪಿಗೆ ಆಗಮಿಸಿದ್ದರು. ಅಂದಿನಿಂದ ಬಡವಿ ಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದರು. ಕಳೆದ ವರ್ಷ ಅನಾರೋಗ್ಯದ ಕಾರಣ ಪೂಜೆ ನಿಲ್ಲಿಸಿದ್ದರು.

ಸ್ಮಾರಕಗಳ ಬಳಿ ಅಕ್ರಮ ಮಣ್ಣು ಸಾಗಣೆ; ಹಂಪಿ ಸ್ಮಾರಕಗಳಿಗೆ ಹಾನಿ ಸ್ಮಾರಕಗಳ ಬಳಿ ಅಕ್ರಮ ಮಣ್ಣು ಸಾಗಣೆ; ಹಂಪಿ ಸ್ಮಾರಕಗಳಿಗೆ ಹಾನಿ

Hampi Badavi Linga Temple Priest Krishna Bhat No More

ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣ ಭಟ್ ಅವರ ಫೋಟೋಗಳು ವೈರಲ್ ಆಗಿದ್ದವು. ಅವರು ಶಿವಲಿಂಗದ ಪಾಣಿಪೀಠದ ಮೇಲೆ ಹತ್ತಿ ಪೂಜೆ ಮಾಡುವುದು ಹಲವರ ವಿಸ್ಮಯಕ್ಕೆ ಕಾರಣವಾಗಿತ್ತು. ಪ್ರಸ್ತುತ ಕೃಷ್ಣ ಭಟ್ ಪುತ್ರ ದೇವಾಲಯದ ಪೂಜೆ ಮಾಡುತ್ತಿದ್ದಾರೆ.

ಬ್ಯಾಟರಿ ಚಾಲಿತ ವಾಹನದಲ್ಲಿ ಹಂಪಿ ವೀಕ್ಷಿಸಿ ಬ್ಯಾಟರಿ ಚಾಲಿತ ವಾಹನದಲ್ಲಿ ಹಂಪಿ ವೀಕ್ಷಿಸಿ

ಬಡವಿಲಿಂಗ ದೇವಾಲಯ ಸಾಮಾನ್ಯವಾದದ್ದಲ್ಲ. ನೀರಿನೊಳಗೆ ಇರುವ ಶಿವಲಿಂಗ ಸುಮಾರು 3 ಮೀಟರ್ ಎತ್ತರದ ಏಕಶಿಲಾ ವಿಗ್ರಹವಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಇದನ್ನು ಕೆತ್ತಲಾಗಿದೆ.

ನೀರಿನೊಳಗೆ ಇರುವ ವಿಶಾಲವಾದ ಲಿಂಗಕ್ಕೆ ಪೂಜೆ ಸಲ್ಲಿಸಲು ಲಿಂಗದ ಪಾಣಿಪೀಠವನ್ನು ಕೃಷ್ಣ ಭಟ್ ಏರುವುದು ಅನಿವಾರ್ಯವಾಗಿತ್ತು. ಭಟ್ ಪಾಣಿಪೀಠ ಏರಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಪ್ಪು ಕಲ್ಲಿನಿಂದ ಕೆತ್ತಲಾಗಿರುವ ಲಿಂಗದ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುತ್ತದೆ. ಹಂಪಿಗೆ ಭೇಟಿ ನೀಡುವ ಹಲವು ಪ್ರವಾಸಿಗರು ಕೃಷ್ಣ ಭಟ್ ಅವರನ್ನು ಮಾತನಾಡಿಸದೇ ವಾಪಸ್ ಬರುತ್ತಿರಲಿಲ್ಲ.

English summary
Krishna Bhat priest of the Hampi Badavi Linga temple died on April 25th morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X