ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂರು ವೈರಸ್ ಬಂದ್ರೂ ನಮ್ಮ ನೆಲ ಕಾಪಾಡುತ್ತೆ : ಗಾಲಿ ರೆಡ್ಡಿ

|
Google Oneindia Kannada News

ಬಳ್ಳಾರಿ, ಏಪ್ರಿಲ್ 22: ಕೊರೊನಾ ಮಹಾಮಾರಿಯಿಂದ ಪ್ರಪಂಚದ ಜನರು ತತ್ತರಿಸುತ್ತಿದ್ದಾರೆ ಇನ್ನೊಂದು ಕಡೆ ಲಾಕ್ ಡೌನ್ ನಿಂದಾಗಿ ವಾಹನಗಳ ಸಂಚಾರ, ಕಾರ್ಖಾನೆಗಳ ಹೊಗೆ, ಗಲಾಟೆ, ಗದ್ದಲಗಳಿಲ್ಲದೆ ಭೂಮಿಯು ವಿರಾಮಿಸುತ್ತಿದೆ. ಪ್ರಾಣಿ ಪಕ್ಷಿಗಳು ಸ್ವಾತಂತ್ರ್ಯವಾಗಿ ಹಾರಾಡುತ್ತಾ ರೋಡಿಗಿಳಿಯುತ್ತಿವೆ ಎಂದು ತಮ್ಮ ಕಳಕಳ ವ್ಯಕ್ತಪಡಿಸುತ್ತಾ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ವಿಶ್ವ ಭೂಮಿ ದಿನದ ಶುಭಾಶಯ ಕೋರಿದ್ದಾರೆ.

ಹಲವು ವರ್ಷಗಳ ಕಾಲ ವಿಶ್ವ ಭೂ ದಿನವನ್ನು ಅಮೆರಿಕದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು 90 ರ ದಶಕದ ನಂತರ ವಿಶ್ವದ ಉಳಿದ ರಾಷ್ಟ್ರಗಳು ಭೂಮಿಯ ಮಹತ್ವವನ್ನು ಸಾರುತ್ತಾ, ಜನಜಾಗೃತ ಮಾಡಲು ಮುಂದಾಗಿವೆ. ವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸರಳ ವಿಧಾನಗಳಿದೆ. ಇದು ಈ ದಿನಕ್ಕಷ್ಟೇ ಸೀಮಿತವಾಗಿಲ್ಲ.

ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ

ಮಕ್ಕಳಿಗೆ ಮಣ್ಣಲ್ಲಿ ಆಡುವುದು ಇಷ್ಟ. ಚಿಕ್ಕಂದಿನಲ್ಲೇ ಸಸಿ ನೆಡುವುದು, ಪಾತಿ ಮಾಡುವುದು, ನೀರು ಹಾಕುವುದು ಆರೈಕೆ ಮಾಡುವುದನ್ನು ಕಲಿಸಿ ಕೊಡಿ. ವಿಶೇಷ ಸಸ್ಯಗಳು, ಔಷಧೀಯ, ಸುಗಂಧ ಸಸ್ಯಗಳೊಡನೆ ಹಸಿರು ಕ್ರಾಂತಿ ಆಟ ಆರಂಭಿಸಬಹುದು. ಹಸಿರಿನ ಬಗ್ಗೆ ಒಲವು ಮೂಡಿಸುವುದು ಅವಶ್ಯ.

Gali Janardhana Reddy wishes World Earth Day

ನಮ್ಮ ನೆಲ, ನಮ್ಮ ಜಲ, ನಮ್ಮ ಭೂಮಿ, ನಮ್ಮ ಪರಿಸರ ಎಲ್ಲವನ್ನೂ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ನಾವು ನೆಲದ ಬಗ್ಗೆ ಎಷ್ಟು ಕಾಳಜಿ ವಹಿಸುವೆವೋ ಅದರಿಂದ ನಮ್ಮ ಜೀವಿಗಳಿಗೆ ಅಷ್ಟೇ ಅನುಕೂಲಗಳಿವೆ.

ಕೊರೋನಾದಂತಹ ಇನ್ನೂ ನೂರು ವೈರಸ್‌ಗಳು ಬಂದರು ನಮ್ಮನ್ನೆಲ್ಲ ಕಾಪಾಡುವ ಶಕ್ತಿ ನಮ್ಮ ನೆಲಕ್ಕಿದೆ.

ಮನೆಯಲ್ಲೇ ಇರಿ...ಕ್ಷೇಮವಾಗಿರಿ.

English summary
Gali Janardhana Reddy wishes one and all on the occasion of World Earth Day(April 22).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X