ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೋಕ ಪತ್ರದ ಮೂಲಕ ತಾಯಿ ಸುಷ್ಮಾಗೆ ಗಾಲಿ ರೆಡ್ಡಿ ನಮನ

|
Google Oneindia Kannada News

ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ (67) ಅವರು ಮಂಗಳವಾರ(ಆಗಸ್ಟ್ 06) ದೆಹಲಿಯಲ್ಲಿ ನಿಧನರಾಗಿದ್ದಾರೆ. ಪ್ರತಿ ವರ್ಷ ತಪ್ಪದೇ ಬರುತ್ತಿದ್ದ ನಗುಮೊಗದ ಸಾತ್ವಿಕ ಕಳೆಯ ಮುತ್ತೈದೆ ಸುಷ್ಮಾ ಅವರು ಬಳ್ಳಾರಿಗೆ ಬರುತ್ತಿದ್ದರು, ಗಾಲಿ ಜನಾರ್ದನ ರೆಡ್ಡಿ ಪಾಲಿಗೆ 'ಗಾಡ್ ಮದರ್' ಆಗಿದ್ದವರು, ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ತಾಯಿ ಕಳೆದುಕೊಂಡ ದುಃಖದಲ್ಲಿ ರೆಡ್ಡಿ ಬರೆದ ಸಂತಾಪ ಸೂಚಕ ಶೋಕ ಪತ್ರ ಇಲ್ಲಿದೆ. ಫೇಸ್

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

ತಾಯಿಯ ಮಡಿಲು .....

ಭಾರತಾಂಬೆಯ ಹೆಮ್ಮೆಯ ಪುತ್ರಿ , ಭಾರತೀಯ ನಾರಿ ಸ್ವರೂಪದ ಪ್ರತಿರೂಪ, ಅಪ್ರತಿಮ ಪಾಂಡಿತ್ಯ, ದೇಶಭಕ್ತಿ, ಸಾಮಾಜಿಕ ಕಳಕಳಿ, ಎಲ್ಲದಕ್ಕಿಂತಲೂ ಹೆಚ್ಚಾಗಿ ನಂಬಿಕೆ, ಪ್ರೀತಿ ವಿಶ್ವಾಸದ ಮತ್ತೊಂದು ಹೆಸರೇ ಶ್ರೀಮತಿ ಸುಷ್ಮಾ ಸ್ವರಾಜ್.

ಪ್ರೀತಿ ಕೊಟ್ಟ ತಾಯಿ ಸುಷ್ಮಾ ಅಗಲಿಕೆ ನೋವಲ್ಲಿ ಗಾಲಿ ರೆಡ್ಡಿ ಕಣ್ಣೀರುಪ್ರೀತಿ ಕೊಟ್ಟ ತಾಯಿ ಸುಷ್ಮಾ ಅಗಲಿಕೆ ನೋವಲ್ಲಿ ಗಾಲಿ ರೆಡ್ಡಿ ಕಣ್ಣೀರು

ನನ್ನ ಜೀವನದಲ್ಲಿ ನನಗೆ ಜನ್ಮಕೊಟ್ಟ ತಾಯಿ ರುಕ್ಮಿಣಮ್ಮ ಚೆಂಗಾರೆಡ್ಡಿ ಒಂದು ಕಡೆಯಾದರೆ ಮತ್ತೊಂದು ಕಡೆ ನನ್ನ ರಾಜಕೀಯ ಬದುಕಿನ ಬೆಳಕು ತೋರಿದ ಮತ್ತು ಪ್ರೀತಿ ವಿಶ್ವಾಸದ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದೆ ನನ್ನ ಮತ್ತೊಬ್ಬ ತಾಯಿ ಶ್ರೀಮತಿ ಸುಷ್ಮಾ ಸ್ವರಾಜ್.

ಬಳ್ಳಾರಿ ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆ ಸುಷ್ಮಾ ಸ್ವರಾಜ್ ನೆನಪುಬಳ್ಳಾರಿ ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆ ಸುಷ್ಮಾ ಸ್ವರಾಜ್ ನೆನಪು

ಸುಷ್ಮಾ ಸ್ವರಾಜ್ ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ . ಆ ತಾಯಿಯ ಮುಖದ ತೇಜಸ್ಸು, ಅವರೊಂದಿಗೆ ನನ್ನ ಪುತ್ರ ವಾತ್ಸಲ್ಯ ಸಂಬಂಧ ನಿಜಕ್ಕೂ ನನ್ನನ್ನು ಅತ್ಯಂತ ದುಃಖಿತ ನನ್ನಾಗಿ ಮಾಡಿದೆ.

ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ

ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ

ಆಕಸ್ಮಿಕ ರಾಜಕೀಯ ಬೆಳವಣಿಗೆಯೊಂದರಲ್ಲಿ ಭಾರತಾಂಬೆಯ ಆಶೀರ್ವಾದದಿಂದ ದೊರೆತ ಈ ಮಹಾನ್ ತಾಯಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರೊಂದಿಗಿನ ನನ್ನ ತಾಯಿ - ಮಗನ ಸಂಬಂಧವನ್ನು ಶಬ್ದಗಳಲ್ಲಿ ವರ್ಣಿಸಲು ಶಬ್ದಗಳೇ ಸಾಲದು.
ಬಳ್ಳಾರಿಗೆ ಆಗಮಿಸಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಕೇವಲ ಹದಿನೆಂಟು ದಿನದಲ್ಲಿ ಕನ್ನಡ ಭಾಷೆಯನ್ನು ಕಲಿತು, ನಾವು ಮತ್ತು ನಮ್ಮ ಕುಟುಂಬ ಮಾತ್ರವಲ್ಲದೆ ಇಡೀ ಜಿಲ್ಲೆ, ರಾಜ್ಯ ಮತ್ತು ವಿಶ್ವದ ಗಮನವನ್ನು ಸೆಳೆದ ಅಪ್ರತಿಮ ಮೇಧಾವಿ ಶ್ರೀಮತಿ ಸುಷ್ಮಾ ಸ್ವರಾಜ್ .

ಕೊಟ್ಟ ಮಾತಿನಂತೆ ಬಳ್ಳಾರಿಗೆ ಬಂದ ತಾಯಿ ಸುಷ್ಮಾ

ಕೊಟ್ಟ ಮಾತಿನಂತೆ ಬಳ್ಳಾರಿಗೆ ಬಂದ ತಾಯಿ ಸುಷ್ಮಾ

ಸತತವಾಗಿ ಹದಿಮೂರು ವರ್ಷಗಳ ಕಾಲ ಕೊಟ್ಟ ಮಾತಿನಂತೆ ಬಳ್ಳಾರಿಗೆ ಆಗಮಿಸಿ ನಾವು ನಡೆಸುವ ಐತಿಹಾಸಿಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿದ್ದು ನಿಜಕ್ಕೂ ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವೆಂದೇ ಭಾವಿಸುತ್ತೇನೆ.

1999 ರ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ತೆರಳಿದ ಸಂದರ್ಭದಲ್ಲಿ ಅವರ ಸೋಲಿನ ದುಃಖವನ್ನು ಭರಿಸಲಾಗದೆ ನಾನು ಮತ್ತು ನನ್ನ ಸ್ನೇಹಿತ ಶ್ರೀರಾಮುಲು ಕಣ್ಣಲ್ಲಿ ನೀರು ತಂದುಕೊಂಡಾಗ ಒಬ್ಬ ತಾಯಿಯಂತೆ ನಮ್ಮನ್ನು ಸಮಾಧಾನಪಡಿಸಿದ ಮಹಾನ್ ತಾಯಿಯನ್ನು ನನ್ನ ಜೀವನದ ಕೊನೆ ಉಸಿರಿರುವವರೆಗೂ ಮರೆಯಲು ಸಾಧ್ಯವಿಲ್ಲ .

ಭಾರತ ದೇಶದ ವೀರ ಮಹಿಳೆ

ಭಾರತ ದೇಶದ ವೀರ ಮಹಿಳೆ

ಕೇವಲ ನಾನು ಮಾತ್ರವಲ್ಲ ಇಡೀ ನನ್ನ ಕುಟುಂಬ ವಿಶೇಷವಾಗಿ ನನ್ನ ಪುತ್ರಿ ಶ್ರೀಮತಿ ಬ್ರಹ್ಮಣಿ ಸುಷ್ಮಾ ಸ್ವರಾಜ್ ಅವರ ಬಗ್ಗೆ ಅತಿಯಾದ ಮಧುರ ಬಾಂಧವ್ಯವನ್ನು ಹೊಂದಿದ್ದರು. ಪ್ರತಿ ಬಾರಿ ಬಳ್ಳಾರಿಗೆ ಆಗಮಿಸಿದಾಗ ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅರುಣಾ ಎರಡು ದಿನಗಳ ಮುಂಚೆಯೇ ಮಾತಾಜಿಯ ಆಗಮನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಒಟ್ಟಾರೆ ಆ ತಾಯಿ ಬಳ್ಳಾರಿಗೆ ಬರುವುದೆಂದರೆ ನಮಗೆ ದೊಡ್ಡ ಹಬ್ಬ.

ಏಳು ಬಾರಿ ಸಂಸದೆಯಾಗಿ, ಅತಿ ಕಿರಿಯ ವಯಸ್ಸಿನಲ್ಲಿ ಹರಿಯಾಣ ರಾಜ್ಯದಲ್ಲಿ ಮಂತ್ರಿಯಾಗಿ, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವೆಯಾಗಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿ, ಈ ದೇಶಕ್ಕಾಗಿ ತನ್ನನ್ನೇ ತಾನು ಸಮರ್ಪಿಸಿಕೊಂಡ ಭಾರತ ದೇಶದ ವೀರ ಮಹಿಳೆ.

ಬರ ಸಿಡಿಲು ಬಡಿದು ಅಪ್ಪಳಿಸಿದಂತಾಗಿದೆ

ಬರ ಸಿಡಿಲು ಬಡಿದು ಅಪ್ಪಳಿಸಿದಂತಾಗಿದೆ

ನಿನ್ನೆಯ ದಿನ ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲೂ ಜಮ್ಮು ಕಾಶ್ಮೀರ ವಿಧೇಯಕ ಜಾರಿಗೊಂಡ ಬಗ್ಗೆ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದು ತನ್ನ ಪ್ರಾಣಕ್ಕಿಂತ ದೇಶವೇ ತನಗೆ ಮುಖ್ಯವೆಂಬುದನ್ನು ಸಾಬೀತುಪಡಿಸಿದ ದೇಶಪ್ರೇಮಿ.

ತಾಯಿಯ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ನಾನು ಸೇರಿದಂತೆ ಇಡೀ ದೇಶದ ಜನತೆಗೆ ಆ ಭಗವಂತ ಕರುಣಿಸಲಿ ಎಂದು ಹೇಳಲಾಗದ ನೋವಿನಿಂದ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

ವರಮಹಾಲಕ್ಷ್ಮಿ ವ್ರತದ ಈ ದಿನಗಳಲ್ಲಿ ತಾಯಿಯ ಅಗಲುವಿಕೆಯ ಈ ಸುದ್ದಿ ನಮಗೆ ಬರ ಸಿಡಿಲು ಬಡಿದು ಅಪ್ಪಳಿಸಿದಂತಾಗಿದೆ.
- ಗಾಲಿ ಜನಾರ್ದನ ರೆಡ್ಡಿ

English summary
Former Karnataka minister Gali Janardhana Reddy obituary to former union minister Sushma Swaraj via Facebook post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X