• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಬ್ಬರು ಮಕ್ಕಳಿಗೆ ವಿಷ ಕುಡಿಸಿ, ದಂಪತಿ ನೇಣಿಗೆ ಶರಣು

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಜನವರಿ 6: ಚಿಕ್ಕ ಮಕ್ಕಳಿಗೆ ವಿಷ ಕುಡಿಸಿ, ದಂಪತಿಗಳಿಬ್ಬರು ನೇಣಿಗೆ ಶರಣಾದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ನಡೆದಿದೆ.

ಜಿಂದಾಲ್ ನೌಕರ ನಂಜುಂಡೇಶ್ವರ(32) ಹಾಗೂ ಪತ್ನಿ ಪಾರ್ವತಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕು ಮುನ್ನ ತಮ್ಮ ಮಕ್ಕಳಾದ ಮೂರು ವರ್ಷದ ಗೌತಮಿ ಹಾಗೂ 2 ವರ್ಷದ ಮಗ ಸ್ವರೂಪ್ ಗೆ ವಿಷ ಕುಡಿಸಿದ್ದರು.

ಮೃತ ನಂಜುಂಡೇಶ್ವರ ಬಳ್ಳಾರಿ ಜಿಲ್ಲೆ ಹೋಸಪೇಟೆ ತಾಲ್ಲೂಕಿನಲ್ಲಿರುವ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಡೆತ್ ನೋಟ್ ಬರೆದಿಟ್ಟು, ಮಕ್ಕಳಿಗೆ ವಿಷವುಣಿಸಿ, ದಂಪತಿಗಳಿಬ್ಬರು ನೇಣು ಬೀಗಿದುಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ""ನಮ್ಮ ಸಾವಿಗೆ ನಾವೇ ಕಾರಣರು. ನಾವು ಸ್ವಯಂ ಪ್ರೇರಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ'' ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ.

ನಂಜುಂಡೇಶ್ವರ ಅವರು ಅಧಿಕ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲಾಗದೆ ಆತ್ಮಹತ್ಯೆಯ ಯೋಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ತನಿಖೆಯ ನಂತರವೇ ಸತ್ಯಾಂಶ ತಿಳಿಯಲಿದೆ. ಗಾದಿಗನೂರು ಪೊಲೀಸ್ ಠಾಣಾ ವಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

English summary
Four Members Of The Same Family Commit Suicide In Gadiganuru, Hospet taluk in Ballari district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X