ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ಹಂಪಿ ದೇವಾಲಯ ಕಂಬಗಳನ್ನು ಬೀಳಿಸಿದ್ದವರೇ ನಿಲ್ಲಿಸಿದರು

|
Google Oneindia Kannada News

ಹಂಪಿ, ಫೆಬ್ರವರಿ 19: ಹಂಪಿಯ ವಿಷ್ಣು ದೇವಾಲಯದ ಕಂಬಗಳನ್ನು ಬೀಳಿಸಿದ್ದ ಕಿಡಿಗೇಡಿಗಳೇ ಕಂಬಗಳನ್ನು ನಿಲ್ಲಿಸಿದ್ದಾರೆ. ಅವರೇನೂ ಸ್ವಂತ ಬುದ್ಧಿಯಿಂದ ನಿಲ್ಲಿಸಿಲ್ಲ, ಬದಲಾಗಿ ಹೊಸಪೇಟೆ ಕೋರ್ಟ್ ನೀಡಿದ್ದ ತೀರ್ಪಿನ ಮೇರೆಗೆ ನಾಲ್ವರು ಕಂಬಗಳನ್ನು ನಿಲ್ಲಿಸಿದ್ದಾರೆ.

ನಾಲ್ವರಿಗೆ ತಲಾ 70 ಸಾವಿರ ರೂ ದಂಡವಿಧಿಸುವುದಷ್ಟೇ ಅಲ್ಲದೆ ದ್ವಂಸಗೊಳಿಸಿರುವ ಕಂಬಗಳನ್ನು ಹಳೆಯ ಮಾದರಿಯಲ್ಲೇ ಮರು ನಿರ್ಮಿಸಿಕೊಡಬೇಕು ಎಂದು ಹೇಳಿತ್ತು, ಅದರ ಜೊತೆಗೆ ದೇಶದಲ್ಲಿ ಇನ್ಯಾವುದೇ ಪಾರಂಪರಿಕ ಕಟ್ಟಡಗಳನ್ನು ದ್ವಂಸ ಮಾಡುವುದಿಲ್ಲ ಎಂದು ಅವರಿಗೆ ಪ್ರಮಾಣ ಮಾಡಿಸಿಕೊಂಡಿತ್ತು. ಹಾಗಾಗಿ ಇಂದು ವಿಷ್ಣುದೇವಾಲಯದ ಕಂಬಗಳನ್ನು ನಿಲ್ಲಿಸುವ ಪ್ರಯತ್ನವೂ ನಡೆಯಿತು.

ಹಂಪಿಯ ದೇವಾಲಯ ಕಂಬಗಳನ್ನು ದ್ವಂಸಗೊಳಿಸಿದವರಿಗೆ ನೀಡಿದ ಶಿಕ್ಷೆ ಏನು? ಹಂಪಿಯ ದೇವಾಲಯ ಕಂಬಗಳನ್ನು ದ್ವಂಸಗೊಳಿಸಿದವರಿಗೆ ನೀಡಿದ ಶಿಕ್ಷೆ ಏನು?

ನ್ಯಾಯಾಲಯದ ತೀರ್ಪಿಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಅವರ 2.8 ಲಕ್ಷವನ್ನು ನೀಡಿ, ಕಂಬಗಳನ್ನು ಪುನರ್ ನಿರ್ಮಾಣ ಮಾಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಮಧ್ಯಪ್ರದೇಶದ ಆಯುಷ್, ಬಿಹಾರದ ರಾಜಾಬಾಬು ಚೌದರಿ, ರಾಜ್ ಆರ್ಯನ್ ಹಾಗೂ ರಾಜೇಶ್ ಕುಮಾರ್ ಚೌದರಿಯವರನ್ನು ವಿಷ್ಣು ದೇವಾಲಯದ ಕಂಬಗಳನ್ನು ಸ್ವಂಸಗೊಳಿಸಿರುವ ವಿಡಿಯೋದ ಆಧಾರದ ಮೇಲೆ ಬಂಧಿಸಲಾಗಿತ್ತು.

Finally Four men re-erect the pillars they vandalised at temple complex

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ಹೊಂದಿರುವ ಹಂಪಿಯಲ್ಲಿ ಸ್ಮಾರಕಗಳು ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ಉದ್ದೇಶದಿಂದ ವಿವಿಧ ಇಲಾಖೆಗಳಿಂದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವನ್ನು ನಡೆಸುತ್ತಿದೆ.

ಆದರೆ, ಹಂಪಿಯ ಒಂಟೆ ಸಾಲು, ಗಜಶಾಲೆ ಹಿಂದಿ ಇರುವಂತಹ ವಿಷ್ಣು ದೇವಸ್ಥಾನದ ಆವರಣದಲ್ಲಿನ ಕಂಬಗಳನ್ನು ಯಾರೋ ಕಿಡಿಗೇಡಿಗಳು ಬೀಳಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಕಂಡು ಬಂದಿತ್ತು.

English summary
A court in Hospet city of Karnataka fined four men who vandalised pillars at the Vishnu Temple Complex in Hampi Rs 70,000 each last week. The court also asked them to re-erect the pillars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X