• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇದ್ದು ಇಲ್ಲದಂತೆ ಇದೆ ಪಶು ಆಸ್ಪತ್ರೆ; ರೈತರ ಪರದಾಟ

By ಭೀಮರಾಜ.ಯು. ವಿಜಯನಗರ
|
Google Oneindia Kannada News

ವಿಜಯನಗರ, ಜೂನ್ 21; ಇಲ್ಲಿನ ರೈತರು ಪಶು ಚಿಕಿತ್ಸೆಗಾಗಿ ನಿತ್ಯವು ದನ ಕರುಗಳನ್ನು ಹಿಡಿದುಕೊಂಡು ಓಡಾಡುವ ಸ್ಥಿತಿ ಎದುರಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಆಸ್ಪತ್ರೆ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಪ್ರತಿ ಜಿಲ್ಲಾ, ತಾಲೂಕು, ಹೋಬಳಿ ಮಟ್ಟಗಳಲ್ಲಿ ಪಶು ಆಸ್ಪತ್ರೆಗಳನ್ನು ತೆರೆಯಲಾಗಿದೆ. ಆದರೆ ಸರ್ಕಾರ ಮಾಡಿರುವಂತ ಪ್ರತಿಯೊಂದು ಯೋಜನೆ ಅಧಿಕಾರಿಗಳ ಮುಖಾಂತರ ತಲುಪಬೇಕು. ಆದರೆ ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತದೆ.

2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ 2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ

ಗುಡೆಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಜನರು ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರೈತರ ಮೂಲಧಾರ ಹಸು, ಮೇಕೆ, ಕುರಿ. ಹೈನುಗಾರಿಕೆಯನ್ನು ನಂಬಿ ಬದುಕನ್ನು ಕಟ್ಟಿಕೊಂಡ ರೈತರು ಇದ್ದಾರೆ.

ವಿಶೇಷ ವರದಿ: ರೈತರ ಬೆಂಬಲಕ್ಕೆ ನಿಲ್ಲದ ಸರ್ಕಾರ, ಸಿಡಿದೆದ್ದ ಚಿತ್ರದುರ್ಗದ ರೈತ ದಯಾನಂದವಿಶೇಷ ವರದಿ: ರೈತರ ಬೆಂಬಲಕ್ಕೆ ನಿಲ್ಲದ ಸರ್ಕಾರ, ಸಿಡಿದೆದ್ದ ಚಿತ್ರದುರ್ಗದ ರೈತ ದಯಾನಂದ

ಈ ಹೋಬಳಿ ವ್ಯಾಪ್ತಿಯಲ್ಲಿ 28 ರಿಂದ 30 ಸಾವಿರಾರು ಸಂಖ್ಯೆಯಲ್ಲಿ ದನ, ಕುರಿ, ಮೇಕೆ ಹೀಗೆ ಹಲವು ರೀತಿಯ ಪ್ರಾಣಿಳಗಳಿವೆ. ಈ ಹೋಬಳಿಯ ರೈತರು ಪಶುಗಳಿಗೆ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಬಂದರೆ ಡಾಕ್ಟರ್ ಇಲ್ಲ, ಹೊರಗಡೆ ಹೋಗಿದ್ದಾರೆ ಅನ್ನುವ ಸಾಮಾನ್ಯವಾದ ಮಾತು ಕೇಳಿ ಬರುತ್ತದೆ.

ಬಾಳೆ ಬೆಳೆದು ಬದುಕು ಕಟ್ಟಿಕೊಂಡ ಕೊಪ್ಪಳದ ರೈತ! ಬಾಳೆ ಬೆಳೆದು ಬದುಕು ಕಟ್ಟಿಕೊಂಡ ಕೊಪ್ಪಳದ ರೈತ!

ಪಶುಚಿಕಿತ್ಸಾ ಕೇಂದ್ರ ಮಾತ್ರ ಸದಾ ಬಾಗಿಲು ಹಾಕಿರುತ್ತದೆ. ವಾರದ ಬೆರಳೆಣಿಕೆಯ ದಿನಗಳಲ್ಲಿ ಬಾಗಿಲು ತೆರೆಯುತ್ತದೆ. ಹಸುಗಳನ್ನು ಆಸ್ಪತ್ರೆಗೆ ಕರೆ ತಂದರೆ ಯಾರು ಇರುವುದಿಲ್ಲ. ನಾವು ಎಲ್ಲಿ ಹೋಗಿ ಚಿಕಿತ್ಸೆಗೆ ಕೊಡಿಸಬೇಕು ಅನ್ನುವುದು ಇಲ್ಲಿನ ರೈತರ ಅಳಲು.

ಪಶು ವೈದ್ಯರಿಲ್ಲ ಮತ್ತು ಸಿಬ್ಬಂದಿ ಇದ್ದರೂ ಉಪಯೋಗವಿಲ್ಲ. ತಾಲೂಕು ಮಟ್ಟದ ವೈದ್ಯಧಿಕಾರಿ ವಾರದಲ್ಲಿ ಒಂದು ಬಾರಿಯಾದರೂ ಇತ್ತಕಡೆ ತಲೆಹಾಕಿ ನೋಡುವುದಿಲ್ಲ. ಹಾಗಾಗಿ ದನ ಕರುಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಅನುಭವಿ ಸಿಬ್ಬಂದಿ ಕೊರತೆ; ಈ ಆಸ್ಪತ್ರೆಯಲ್ಲಿ ಯಾರೊನ್ನೋ ಒಬ್ಬ ಅಟೆಂಡರ್‌ ಆಗಿ ನೇಮಿಸಿದ್ದಾರೆ. ಆದರೆ ರೈತರು ಹಸುಗಳನ್ನು ಕರೆ ತಂದಾಗ ಯಾವ ಕಾಯಿಲೆ ಯಾವ ಚಿಕಿತ್ಸೆ ನೀಡಬೇಕು ಅನ್ನುವುದು ಅವರಿಗೆ ಗೊತ್ತಿಲ್ಲದ ಕಾರಣ ಎಷ್ಟೋ ಬಾರಿ ಹಸುಗಳಿಗೆ ಸರಿಯಾದ ಚಿಕಿತ್ಸೆ ನಿಡದೇ ಹಸುಗಳು ಸಾವನ್ನಪ್ಪಿವೆ. ಇಂತಹ ಸಿಬ್ಬಂದಿ ಇರುವುದರಿಂದ ಅನುಕೂಲಕ್ಕಿಂತ ಅನಾಹುತನೇ ಜಾಸ್ತಿಯಾಗಿದೆ.

ಇಲ್ಲಿನ ಆಸ್ಪತ್ರೆಯಲ್ಲಿ ಒಂದು ವೇಳೆ ಸಮಯಕ್ಕೆ ಸರಿಯಾಗಿ ವೈದ್ಯರು ಲಭ್ಯವಾದರೆ ಚಿಕಿತ್ಸೆ ನೀಡುವುದಕ್ಕೆ ಸರಿಯಾದ ಸಲಕರಣೆಗಳು ಇಲ್ಲದೇ ಚಿಕಿತ್ಸೆ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಮತ್ತು ಅಗತ್ಯ ಔಷಧಿಗಳು ಕೊರತೆ ಎದ್ದು ಕಾಣುತ್ತಿದೆ. ಒಂದು ವ್ಯವಸ್ಥಿತ ಆಸ್ಪತ್ರೆಗೆ ಬೇಕಾದ ಆಧುನಿಕ ಸಲಕರಣೆಗಳು ಮತ್ತು ಔಷಧಗಳನ್ನು ಒದಗಿಸಬೇಕೆಂದು ಇಲ್ಲಿನ ರೈತರ ಒತ್ತಾಯವಾಗಿದೆ.

ರೈತರ ಹಕ್ಕೊತ್ತಾಯ; ನಾವು ಹಸುಗಳನ್ನು ನೆಚ್ಚಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮ ಹಸುಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಆಸ್ಪತ್ರೆಗೆ ತೋರಿಸುವುದಕ್ಕೆ ಇದು ಒಂದೇ ಆಸ್ಪತ್ರೆ ಬಿಟ್ಟರೆ ಬೇರಾವುದಿಲ್ಲ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಿಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

English summary
Farmers upset with the Vijayanagara district Kudligi taluk Gudekote veterinary hospital. Doctor not available in hospital and no medicine facility here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X