• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ; ರೈತ ಬೆಳೆದಿದ್ದ 4 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ

|

ಬಳ್ಳಾರಿ, ಅಕ್ಟೋಬರ್ 23 : ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ರೈತರೊಬ್ಬರ ಹೊಲದ ಮೇಲೆ ದಾಳಿ ನಡೆಸಿದೆ. ಅಕ್ರಮವಾಗಿ ಬೆಳೆದಿದ್ದ 4 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆಯನ್ನು ವಶಕ್ಕೆ ಪೆಡೆದುಕೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಳಮುರವಣಿ ಗ್ರಾಮದ ಹೊಲವೊಂದರ ಮೇಲೆ ದಾಳಿ ನಡೆಸಲಾಗಿದೆ. ಗಾಂಜಾ ಬೆಳೆದಿದ್ದ ರೈತನ ಮೇಲೆ ಸಿರಗುಪ್ಪ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಮನೆ ಪಕ್ಕದ ಕಾಂಪೌಂಡ್ ನಲ್ಲಿ ಗಾಂಜಾ ಬೆಳೆ: ಪೊಲೀಸ್ ದಾಳಿ

ಹಾಳಮುರವಣಿಯ ಸರ್ವೆ ನಂಬರ್ 37/ಬಿ/2ರ ಮಾಲೀಕರಾದ ಕಾಳಪ್ಪ ದೊಡ್ಡ ಈರಣ್ಣ ಅವರು ಸಾಗುವಳಿ ಮಾಡುತ್ತಿರುವ ಹೊಲದಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದರು. ಒಟ್ಟು 54 ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 30 ಕೆಜಿ ಗಾಂಜಾ

ಅಬಕಾರಿ ಜಂಟಿ ಆಯುಕ್ತರು ನಿರ್ದೇಶನದ ಮೇರೆಗೆ ಮತ್ತು ಬಳ್ಳಾರಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಬಿ. ಹೆಚ್. ಪೂಜಾರ್ ನೇತೃತ್ವದಲ್ಲಿ ಹಾಗೂ ಸಿರಗುಪ್ಪ ತಹಶೀಲ್ದಾರ್ ಕಂದಾಯ ಇಲಾಖೆಯ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

44 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ರಾಮನಗರ ಪೊಲೀಸರು

ಹೊಲದಲ್ಲಿ ಗಾಂಜಾ ಬೆಳೆಯಲಾಗಿದೆ ಎಂದು ಅಬಕಾರಿ ಇಲಾಖೆ ಸಿಬ್ಬಂದಿ ಖಚಿತ ಮಾಹಿತಿ ಸಿಕ್ಕಿತ್ತು. ಸಿರಗುಪ್ಪ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

English summary
Excise department conducted search in Ballari district Siruguppa and seized 4 lakh Rs worth Ganza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X