ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ. ಸುಂದರ್ ಸ್ಪರ್ಧೆಗೆ ಹಿಂದೇಟು, ಬಳ್ಳಾರಿಯಲ್ಲಿ ಬಿಜೆಪಿಗೆ ಹಿನ್ನಡೆ

By ಜಿಎಂ ರೋಹಿಣಿ, ಬಳ್ಳಾರಿ
|
Google Oneindia Kannada News

Recommended Video

Karnataka Elections 2018 : ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ಹೆಸರು | Oneindia Kannada

ಬಳ್ಳಾರಿ, ಏಪ್ರಿಲ . 09: ಬಳ್ಳಾರಿ ಜಿಲ್ಲಾ ಬಿಜೆಪಿಯಲ್ಲಿ ಅಚ್ಚರಿಯ ಹೆಸರೊಂದು ಮೇಲ್ಪಂಕ್ತಿಗೆ ಬಂದಿದ್ದನ್ನು ರಾಜಕೀಯ ವಲಯದಲ್ಲಿ ಎಲ್ಲರೂ ಅಚ್ಚರಿಯಿಂದ ಗಮನಿಸಿದ್ದರು. ಕಳಂಕಿತರನ್ನು ಸಕ್ರಿಯ ರಾಜಕೀಯದಿಂದ ದೂರವೇ ಇರಿಸಲು ಮತ್ತು ಕಳಂಕಿತರಿಂದ ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿರುವ ಬಿಜೆಪಿ ರಾಷ್ಟ್ರ ಮುಖಂಡರು, ಡಾ. ಬಿ.ಕೆ. ಸುಂದರ್ ಗೆ ಟಿಕೆಟ್ ಆಫರ್ ಮಾಡಿದ್ದರು.

ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಸುಂದರ್ ಅವರಿಗೆ ತೀವ್ರ ಪೈಪೋಟಿ ನಡುವೆ ಟಿಕೆಟ್ ಖಚಿತ ಎಂದು ಮೊದಲ ಹಂತದಲ್ಲಿ ಸುದ್ದಿ ಬಂದಿತ್ತು.

ಆದರೆ, ಡಾ. ಬಿ.ಕೆ. ಸುಂದರ್ ಅವರು ಕೊನೆಯ ಹಂತದಲ್ಲಿ ನಿರ್ಧಾರವನ್ನು ಬದಲಾಯಿಸಿ, ಅನೇಕರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕಾರಣ ಅರ್ಜಿ ಸಲ್ಲಿಸಿದ್ದ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರಿಗೆ ಟಿಕೇಟ್ ಬಹುತೇಕ ಖಚಿತ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎನ್. ಸೂರ್ಯನಾರಾಯಣರೆಡ್ಡಿ ಕಣಕ್ಕಿಳಿದರೆ, ರೆಡ್ಡಿ ವಿರುದ್ಧ ರೆಡ್ಡಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡಲಿದೆ.

ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರುಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು

ಡಾ. ಬಿ.ಕೆ. ಸುಂದರ್ ಅವರು ಆರ್‍ಎಸ್‍ಎಸ್, ಸಂಘ ಪರಿವಾರ ಮತ್ತು ಬಳ್ಳಾರಿಯ ರೆಡ್ಡಿಗಳ ಒಂದು ಕಾಲದ ಅಮ್ಮ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಕರ್ನಾಟಕ ಬಿಜೆಪಿಯ ಅನೇಕರ ಬೆಂಬಲ ಪಡೆದಿದ್ದರು. ಆದರೆ ಈಗ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ.

'ಸ್ಕ್ರೀನಿಂಗ್ ಕಮಿಟಿ' ಸಭೆಗೆ ಗೈರು ಹಾಜರಿ

'ಸ್ಕ್ರೀನಿಂಗ್ ಕಮಿಟಿ' ಸಭೆಗೆ ಗೈರು ಹಾಜರಿ

ಡಾ. ಬಿ.ಕೆ. ಸುಂದರ್ ಬಿಜೆಪಿ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿತ್ತು. ಅವರ ಪ್ರತಿಸ್ಪರ್ಧಿ ಜಿ. ಸೋಮಶೇಖರರೆಡ್ಡಿ ಬಿಜೆಪಿ ಟಿಕೇಟ್ ತಪ್ಪಿದಲ್ಲಿ 'ಮುಂದೇನು?' ಎನ್ನುವುದಕ್ಕೆ ಉತ್ತರ ಸಿದ್ದಪಡಿಸಿಕೊಂಡಿದ್ದರು. ಆದರೂ, ಟಿಕೇಟ್‍ಗಾಗಿ ಕೊನೆಯ ಕ್ಷಣದವರೆಗೂ ಪ್ರಯತ್ನ ನಡೆಸುವ ಛಲವನ್ನು ಬಿಟ್ಟಿರಲಿಲ್ಲ.


ಕಳೆದ ವಾರ ಬೆಂಗಳೂರಿನಲ್ಲಿ ನಡೆದ 'ಸ್ಕ್ರೀನಿಂಗ್ ಕಮಿಟಿ' ಸಭೆಗೆ ಗೈರು ಹಾಜರಿ ಆಗುವ ಮೂಲಕ ಡಾ. ಬಿ.ಕೆ. ಸುಂದರ್, ಅನೇಕ ತಿಂಗಳುಗಳಿಂದ ನಡೆಸಿದ್ದ ಪೂರ್ವಭಾವಿ ಸಿದ್ಧತೆಯನ್ನು ಕಡೆಗಣಿಸಿ, ಚುನಾವಣಾ ಸ್ಪರ್ಧೆಯಿಂದ ಏಕಾಏಕಿ ಹಿಂದಕ್ಕೆ ಸರಿದು, ಅನೇಕರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ, 'ಕ್ಲೀನ್ ಬಿಜೆಪಿ' ಕನಸುಕಂಡಿದ್ದ ಅನೇಕರಲ್ಲಿ ನಿರುತ್ಸಾಹ ಮೂಡಿಸಿದ್ದಾರೆ.

ಸೋಮಶೇಖರರೆಡ್ಡಿ ಕೇಕ್ ಕತ್ತರಿಸಿ, ಸಂಭ್ರಮ

ಸೋಮಶೇಖರರೆಡ್ಡಿ ಕೇಕ್ ಕತ್ತರಿಸಿ, ಸಂಭ್ರಮ

'ಸ್ಕ್ರೀನಿಂಗ್ ಕಮಿಟಿ' ಸಭೆಗೆ ಆಪ್ತ 17 ಬೆಂಬಲಿಗರೊಂದಿಗೆ ಬೆಂಗಳೂರಿಗೆ ಹೋಗಿದ್ದ ಜಿ. ಸೋಮಶೇಖರರೆಡ್ಡಿ ಅವರು ಕೊನೆಯ ಕ್ಷಣದವರೆಗೂ ತಮ್ಮ ಪ್ರತಿಸ್ಪರ್ಧಿ ಡಾ. ಸುಂದರ್ ಬರಲಿದ್ದಾರೆಯೇ? ಎನ್ನುವ ಆತಂಕ - ತವಕದಲ್ಲಿದ್ದರು. ಆದರೆ, ಸಭೆ ಮುಗಿದಾಗಲೂ ಅವರು ಕಾಣಿಸಿಕೊಳ್ಳದೇ ಇದ್ದಾಗ, ನಿಟ್ಟಿಸಿರುಬಿಟ್ಟು, 'ಅರ್ಜಿ ಸಲ್ಲಿಸಿದ್ದು ನಾನೊಬ್ಬನೇ, ನನಗೇ ಟಿಕೇಟ್ ಗ್ಯಾರೆಂಟಿ' ಎಂದು ಸಂತೋಷ ವ್ಯಕ್ತಪಡಿಸಿದ್ದರು.

ಜಿ. ಸೋಮಶೇಖರರೆಡ್ಡಿ ಬೆಂಬಲಿಗರು ಅಂದು ರಾತ್ರಿ ಕೇಕ್ ಕತ್ತರಿಸಿ, ಸಂಭ್ರಮ ವ್ಯಕ್ತಪಡಿಸಿದ್ದರು. ಈಗ, ದೆಹಲಿಯಲ್ಲಿ ಜಿ. ಸೋಮಶೇಖರರೆಡ್ಡಿ ಹೆಸರೇ ಅಂತಿಮಗೊಳ್ಳಲಿದೆ.

 ರೆಡ್ಡಿ ವಿರುದ್ಧ ರೆಡ್ಡಿ

ರೆಡ್ಡಿ ವಿರುದ್ಧ ರೆಡ್ಡಿ

ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಜಿ. ಸೋಮಶೇಖರರೆಡ್ಡಿ ಅವರ ಸ್ಪರ್ಧೆ ಅಂತಿಮಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್. ಸೂರ್ಯನಾರಾಯಣರೆಡ್ಡಿ ಅವರ ಸ್ಪರ್ಧೆ ಬಹುತೇಕ ಖಚಿತಗೊಂಡಿದೆ. ರೆಡ್ಡಿ ವಿರುದ್ಧ ರೆಡ್ಡಿ ನೇರಾನೇರಾ ಜಿದ್ದಾಜಿದ್ದಿ ಸ್ಪರ್ಧೆ ನಡೆಯಲಿದೆ. ಬಳ್ಳಾರಿ ನಗರ ಕ್ಷೇತ್ರದ ಮೇಲೆ ಸಿಎಂ ಸಿದ್ದರಾಮಯ್ಯ ಗಮನ ಕೇಂದ್ರೀಕರಿಸುವ ಕಾರಣ ಈ ಕ್ಷೇತ್ರ ಹೈವೋಲ್ಟೇಜ್ ಆಗಲಿದೆ.

ಎರಡನೆ ಪಟ್ಟಿಗೆ ರೆಡ್ಡಿ ಹೆಸರು ಅಂತಿಮ

ಎರಡನೆ ಪಟ್ಟಿಗೆ ರೆಡ್ಡಿ ಹೆಸರು ಅಂತಿಮ

ಬೇಲ್ ಡೀಲ್ ನಲ್ಲಿ ಆರೋಪಿ ಆಗಿರುವ ಜಿ. ಸೋಮಶೇಖರರೆಡ್ಡಿ ಚುನಾವಣೆಯ ವೇಳೆಗೆ ಪುನಃ ಕಾನೂನಾತ್ಮಕ ತೊಂದರೆಗೆ ಸಿಲುಕಿದಲ್ಲಿ ಪರ್ಯಾಯ ಅಭ್ಯರ್ಥಿಯನ್ನು ಹುಡುಕಾಡುವ ಬದಲು, ಈಗಲೇ ಸಿದ್ಧಪಡಿಸಿಕೊಳ್ಳಬೇಕು ಎನ್ನುವ ದೂರದೃಷ್ಟಿಯಿಂದ ಡಾ. ಬಿ.ಕೆ. ಸುಂದರ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿತ್ತು.

ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗು ಪಕ್ಷದ ಪಾರ್ಲಿಮೆಂಟರಿ ಕಮಿಟಿ ಕರ್ನಾಟಕ ರಾಜಕೀಯದ ಆಗುಹೋಗುಗಳ ನಿರ್ಧಾರಗಳನ್ನು ಕೈಗೊಂಡಿದ್ದು, ಆಗ, ಡಾ. ಬಿ.ಕೆ. ಸುಂದರ್ ಮೇಲುಗೈ ಸಾಧಿಸಲಿದ್ದಾರೆ ಎಂಬ ಸಾಧ್ಯತೆಯಿತ್ತು. ಆದರೆ, ಈಗ ಎರಡನೆ ಪಟ್ಟಿಗೆ ರೆಡ್ಡಿ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ.

English summary
Elections 2018 : Dr Sundar reportedly rejected BJP offer to contest from Ballari Assembly constituency. BJP highcommand snubs Gali Reddy gang and offered ticket to new faces with clean image in the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X