ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣಗಳು

By ಜಿ.ಎಂ. ರೋಹಿಣಿ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ನ. 12 : ಜಿಲ್ಲಾ ಹಂತಗಳಲ್ಲಿರುವ ಬಸ್ ನಿಲ್ದಾಣಗಳನ್ನು ಜನರು ಉಪಯೋಗಿಸುವುದಿಲ್ಲ, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ಆರೋಪಗಳು ಇವೆ. ಆದರೆ, ಬಳ್ಳಾರಿ ಮತ್ತು ಹೊಸಪೇಟೆ ತಾಲೂಕಿನಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

ನಗರ ಯೋಜನಾ ಇಲಾಖೆ, ನಿರ್ಮಿತಿ ಕೇಂದ್ರಗಳು ಈ ಪರಿಸರ ಸ್ನೇಹಿ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಮತ್ತು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಹೊಂದಿವೆ. ಜಿಲ್ಲಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಈ ನಿರ್ವಹಣೆ ನೋಡಿಕೊಳ್ಳುವ ಸಂಸ್ಥೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.

ಐಎಸ್ಓ ಪ್ರಮಾಣ ಪತ್ರ ಪಡೆದಿರುವ ಈ ಬಸ್ ನಿಲ್ದಾಣಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾಗಿದೆ ಮತ್ತು ನಿರ್ವಹಣೆ ವೆಚ್ಚ ಸಹ ಕಡಿಮೆಯಾಗಲಿದೆ. 15*25 ಅಳತೆ ಈ ನಿಲ್ದಾಣಗಳು ಬಿಸಿಲು-ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ನೀಡುತ್ತವೆ. ಬಳ್ಳಾರಿಯ ಗಣಿ ಕಂಪನಿಗಳು ಜಿಲ್ಲೆಯಲ್ಲಿ ಇಂತಹ ಬಸ್ ನಿಲ್ದಾಣ ನಿರ್ಮಿಸಲು ಅನುದಾನ ನೀಡಿವೆ.

ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಅನುದಾನದಿಂದ ನಿರ್ಮಿಸಿರುವ ಬಸ್ ನಿಲ್ದಾಣಗಳನ್ನು ಜನರು ಬಳಸುತ್ತಿಲ್ಲ, ಅವುಗಳು ಪ್ರಾಣಿಪಕ್ಷಿಗಳ ತಾಣಗಳಾಗಿವೆ ಎಂಬ ಆರೋಪಗಳಿತ್ತು. ಇದರಿಂದ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. (ಬಸ್ ನಿಲ್ದಾಣಗಳ ಚಿತ್ರಗಳು)

ಕಡಿಮೆ ವೆಚ್ಚದ ಬಸ್ ನಿಲ್ದಾಣ

ಕಡಿಮೆ ವೆಚ್ಚದ ಬಸ್ ನಿಲ್ದಾಣ

ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣಗಳನ್ನು ಬಳ್ಳಾರಿ ಮತ್ತು ಹೊಸಪೇಟೆ ತಾಲೂಕುಗಳಲ್ಲಿ ನಿರ್ಮಿಸಲಾಗಿದೆ. ಇದರ ನಿರ್ವಹಣೆಯೂ ವೆಚ್ಚವೂ ಕಡಿಮೆ ಇದೆ.

ಗಣಿಧಣಿಗಳ ಸಹಕಾರ

ಗಣಿಧಣಿಗಳ ಸಹಕಾರ

ಪರಿಸರ ಸ್ನೇಹಿ ಬಸ್ ನಿಲ್ದಾಣಗಳನ್ನು ಜಿಲ್ಲೆಯ ಗಣಿಧಣಿಗಳ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ನಗರ ಯೋಜನಾ ಇಲಾಖೆ, ನಿರ್ಮಿತಿ ಕೇಂದ್ರಗಳು ಇದರ ಉಸ್ತುವಾರಿ ನೋಡಿಕೊಳ್ಳುತ್ತವೆ. ಜಿಲ್ಲಾಧಿಕಾರಿಯೂ ನಿರ್ವಹಣೆಯ ನೋಡಿಕೊಳ್ಳುವ ಸಂಸ್ಥೆಗಳಿಗೆ ಅಗತ್ಯ ಸಲಹೆ ನೀಡುತ್ತಾರೆ.

ಉತ್ತಮ ಕಾಮಗಾರಿ

ಉತ್ತಮ ಕಾಮಗಾರಿ

15*25 ಅಳತೆ ಈ ನಿಲ್ದಾಣಗಳು ಬಿಸಿಲು-ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ನೀಡುತ್ತವೆ. ಇವುಗಳ ನಿರ್ಮಾಣ ಕಾಮಗಾರಿ ಉತ್ತಮವಾಗಿದೆ. ಇವು ಐಎಸ್ಓ 9001-2008 ಪ್ರಮಾಣ ಪತ್ರ ಪಡೆದಿವೆ.

ಸಹಾಯ ಮಾಡಿದ ಗಣಿಮಾಲೀಕರು

ಸಹಾಯ ಮಾಡಿದ ಗಣಿಮಾಲೀಕರು

ವಿಭೂತಿಗುಡ್ಡ ಮೈನ್ಸ್ ವ್ಯವಸ್ಥಾಪಕ ಎಸ್.ಕೆ.ಮೋದಿ ಅವರ ಮೋದಿ ಫೌಂಡೇಶನ್, ಅಗರ್ ವಾಲ್ ಮಹಿಳಾ ಮಂಡಳಿ, ಜಾನಕಿ ಫ್ಯಾಕ್ಟರಿ, ಭಾರತ್ ಮೈನ್ಸ್ ಅಂಡ್ ಮಿನರಲ್ಸ್ ಮತ್ತು ವಿವಿಧ ಕಂಪನಿಗಳು ಈ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಹಾಯ ಮಾಡಿವೆ.

ಆರೋಪಗಳಿದ್ದವು

ಆರೋಪಗಳಿದ್ದವು

ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಅನುದಾನದಿಂದ ನಿರ್ಮಿಸಿರುವ ಬಸ್ ನಿಲ್ದಾಣಗಳನ್ನು ಜನರು ಬಳಸುತ್ತಿಲ್ಲ, ಅವುಗಳು ಪ್ರಾಣಿಪಕ್ಷಿಗಳ ತಾಣಗಳಾಗಿವೆ ಎಂಬ ಆರೋಪಗಳಿತ್ತು. ಇದರಿಂದ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ

ಬಿಸಿಲು-ಮಳೆಯಿಂದ ರಕ್ಷಣೆ

ಬಿಸಿಲು-ಮಳೆಯಿಂದ ರಕ್ಷಣೆ

ಈ ಪರಿಸರ ಸ್ನೇಹಿ ಬಸ್ ನಿಲ್ದಾಣಗಳು ಜನರಿಗೆ ಬಿಸಿಲು-ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ನೀಡುತ್ತವೆ. ಇವುಗಗಳಿಗೆ ಹಾನಿಉಂಟಾದರೆ ದುರಸ್ಥಿ ಮಾಡುವುದು ಬಹಳ ಸುಲಭವಾಗಿದೆ.

English summary
In Bellary district administration construct Eco-friendly bus stands in private partnership. Mining companies in district will fund for this project. Urban planning Commission and District Administration will monitoring this bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X