ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವವಿಖ್ಯಾತ ಹಂಪಿಯಲ್ಲಿ ಭೂಕಂಪ ಸಂಭವಿಸಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

|
Google Oneindia Kannada News

ಬಳ್ಳಾರಿ, ಜೂನ್ 5: ಇತಿಹಾಸ ಪ್ರಸಿದ್ಧ.. ವಿಶ್ವ ಪಾರಂಪರಿಕ ತಾಣ.. ವಿಶ್ವ ವಿಖ್ಯಾತ.. ಹಂಪಿಯಲ್ಲಿ ಇಂದು ಭೂಕಂಪ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

''ಹಂಪಿಯಲ್ಲಿ ಭೂಕಂಪ ಆಗಿರುವ ಸುದ್ದಿ ಸುಳ್ಳು. ಹಂಪಿಯಲ್ಲಿ ಭೂಕಂಪ ಆಗಿಲ್ಲ'' ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.

ಇತಿಹಾಸ ಪ್ರಸಿದ್ಧ ಹಂಪಿ ಮತ್ತು ಝಾರ್ಖಂಡ್ ನಲ್ಲಿ ಭೂಕಂಪ.!ಇತಿಹಾಸ ಪ್ರಸಿದ್ಧ ಹಂಪಿ ಮತ್ತು ಝಾರ್ಖಂಡ್ ನಲ್ಲಿ ಭೂಕಂಪ.!

ಇನ್ನೂ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಕೂಡ ಹಂಪಿಯಲ್ಲಿ ಭೂಕಂಪ ಸಂಭವಿಸಿಲ್ಲ ಎಂದು ತಿಳಿಸಿದೆ.

Earthquake Hits Hampi In Karnataka; Its A Fake News: Ballari DC

''ಹಂಪಿಯ ಪೂರ್ವಭಾಗದಿಂದ 181 ಕಿ.ಮೀ ದೂರದಲ್ಲಿನ ಒಂದು ಪ್ರದೇಶದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಅದರ ಪ್ರಭಾವ ಹಂಪಿಯಲ್ಲಿ ದಾಖಲಾಗಿದೆ ಅಷ್ಟೇ'' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

''ಇಂದು ಬೆಳಗ್ಗೆ 6.55 ರ ಸುಮಾರಿಗೆ ಹಂಪಿಯಲ್ಲಿ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ'' ಎಂದು ಬೆಳಗ್ಗೆಯಷ್ಟೇ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿತ್ತು.

ಆದ್ರೀಗ ''ಹಂಪಿಯಲ್ಲಿ ಭೂಕಂಪ ಆಗಿಲ್ಲ. ಜನರು ಭಯಪಡುವ ಅವಶ್ಯಕತೆ ಇಲ್ಲ'' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.

English summary
News of earthquake in Hampi at 6.55 am is false. Ballari DC SS Nakul clarified that no earthquakes were reported in Hampi today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X