• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಂಪಿ ಉತ್ಸವಕ್ಕೆ ಕೂಡಿ ಬರದ ಮುಹೂರ್ತ: ನಡೆಯುವುದು ಅನುಮಾನ

|

ಬಳ್ಳಾರಿ, ನವೆಂಬರ್ 20: ಹಲವು ತೊಡಕುಗಳ ಮಧ್ಯೆ ಹಂಪಿ ಉತ್ಸವವನ್ನು ಆಚರಿಸಲು ಕೊನೆಗೂ ನಿರ್ಧಾರ ಕೈಗೊಳ್ಳಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದಾರೆ ನವೆಂಬರ್ 3ರಿಂದ 5ರವರೆಗೆ ಹಂಪಿ ಉತ್ಸವ ನಡೆಯಬೇಕಿತ್ತು.

ಇದೀಗ ಮತ್ತೊಂದು ಗೊಂದಲ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಬರ ಇರುವುದರಿಂದ ಈ ವರ್ಷ ಹಂಪಿ ಉತ್ಸವವನ್ನು ಆಚರಿಸಬೇಕೆ ಬೇಡವೇ ಎನ್ನುವ ಗೊಂದಲ ನಿರ್ಮಾಣವಾಗಿದೆ. ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಹಂಪಿ ಉತ್ಸವಕ್ಕೆ ಕೊನೆಗೂ ಮುಹೂರ್ತ ಫಿಕ್ಸ್‌

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿ ಉತ್ಸವಕ್ಕೆಂದೇ 10ಕೋಟಿ ರೂ,ಗಳ ಅನುದಾನವನ್ನು ತೆಗೆದಿರಿಸುತ್ತಿತ್ತು, ಆದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಹಂಪಿ ಉತ್ಸವಕ್ಕೆ ಯಾವುದೇ ಅನುದಾನವನ್ನು ತೆಗೆದಿರಿಸಿರಲಿಲ್ಲ.

ರಾಜ್ಯ ಸರ್ಕಾರ ಹಂಪಿ ಉತ್ಸವಕ್ಕೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲವಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಂಪನ್ಮೂಲ ಕ್ರೋಢೀಕರಿಸಿ ಹಂಪಿ ಉತ್ಸವ ನೆರವೇರಿಸುವುದಾಗಿ ಹಂಪಿ ಉತ್ಸವ ನಡೆಸುವುದಾಗಿ ಡಿಕೆ ಶಿವಕುಮಾರ್‌ ತಿಳಿಸಿದ್ದರು.

ಬಳ್ಳಾರಿಯ ಐದು ತಾಲೂಕುಗಳು ಬರ ಪೀಡಿತ

ಬಳ್ಳಾರಿಯ ಐದು ತಾಲೂಕುಗಳು ಬರ ಪೀಡಿತ

ಬಳ್ಳಾರಿಯ ಐದು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಂಪಿ ಉತ್ಸವ ಬೇಕೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಸರ್ಕಾರದ ಹಂತದಲ್ಲಿಯೇ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಳ್ಳಾರಿಗೆ ಸಚಿವ ಸ್ಥಾನ ಖಚಿತ

ಬಳ್ಳಾರಿಗೆ ಸಚಿವ ಸ್ಥಾನ ಖಚಿತ

ಬಳ್ಳಾರಿ ದೊಡ್ಡ ಜಿಲ್ಲೆ, ಕಾಂಗ್ರೆಸ್ ನಿಂದ ಆರು ಜನ ಗೆದ್ದಿದ್ದಾರೆ, ಒಬ್ಬರು ಸಂಸದರನ್ನು ಜಿಲ್ಲೆ ಕೊಟ್ಟಿದೆ. ಹೀಗಾಗಿ ಜಿಲ್ಲೆಗೆ ಸಚಿವ ಸ್ಥಾನ ಹಂಚಿಕೆ ಮಾಡುವುದು ಖಚಿತ. ಆದರೆ, ಯಾರಿಗೆ ಸ್ಥಾನ ಹಂಚಿಕೆ ಮಾಡಬೇಕು ಎನ್ನುವ ನಿರ್ಧಾರ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆಯ ಯಾವುದೇ ಬೆಳವಣಿಗೆ ಸಧ್ಯಕ್ಕಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ದಶಕಗಳ ಹಂಪಿ ಉತ್ಸವಕ್ಕೆ ಸರ್ಕಾರದ ತಿಲಾಂಜಲಿ?

ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಹಂಪಿಯಲ್ಲಿ!

ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಹಂಪಿಯಲ್ಲಿ!

ಹಂಪಿಯಲ್ಲಿ ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಆರಂಭವಾಗಲಿದೆ, ಶೀಘ್ರದಲ್ಲಿ ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಹತ್ತಿರದಿಂದ ಹುಲಿಗಳನ್ನು ನೋಡುವ ಅವಕಾಶ ದೊರೆಯಲಿದೆ. ಹುಲಿಗಳನ್ನು ನೋಡಲು ಬನ್ನೇರುಘಟ್ಟ, ಶಿವಮೊಗ್ಗ ಜಿಲ್ಲೆಯಲ್ಲಿರುವ ತಾವರೆಕೊಪ್ಪಕ್ಕೆ ಹೋಗಬೇಕಿತ್ತು ಆದರೆ ಇನ್ನುಮುಂದೆ ಹಂಪಿಯಲ್ಲೂ ನೋಡಬಹುದಾಗಿದೆ, ಹಂಪಿ ಬಳಿ ಇರುವ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿ ಹುಲಿ ಮತ್ತು ಸಿಂಹ ಸಫಾರಿ ಕೇಂದ್ರ ನವೆಂಬರ್ ನಿಂದ ಆರಂಭವಾಗಲಿದೆ.

ವಾಜಪೇಯಿ ಪಾರ್ಕ್ ನಲ್ಲಿ ತಲೆ ಎತ್ತಲಿರುವ ಸಫಾರಿ ಕೇಂದ್ರ ರಾಜ್ಯದಲ್ಲಿ ಮೂರನೇಯದು ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ, ಈಗಾಗಲೇ ಹಂಪಿ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದ್ದು ಇನ್ನುಮುಂದೆ ಇನ್ನಷ್ಟು ಆಕ್ಷರ್ಷಣೀಯವಾಗುವುದರ ಜತೆಗೆ ಸಾಕಷ್ಟು ಮಂದಿಯನ್ನು ಆಕರ್ಷಿಸಲಿದೆ, ರಜಾ ದಿನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಭೇಟಿ ನೀಡಬಹುದು.

ಹೋಲ್ಡಿಂಗ್ ಹೌಸ್ ವ್ಯವಸ್ಥೆ ಮಾಡಲಾಗಿದೆ

ಹೋಲ್ಡಿಂಗ್ ಹೌಸ್ ವ್ಯವಸ್ಥೆ ಮಾಡಲಾಗಿದೆ

ಸಫಾರಿ ಕೇಂದ್ರದ ಸುತ್ತಲೂ ಸುಮಾರು 16 ಅಡಿ ಎತ್ತರದ ತಂತಿ ಬೇಲಿ ವ್ಯವಸ್ಥೆ ಮಾಡಲಾಗಿದೆ. ಹುಲಿ ಮತ್ತು ಸಿಂಹಗಳಿಗೆ ಎಂಟು ಹೋಲ್ಡಿಂಗ್ ಹೌಸ್ ನಿರ್ಮಿಸಲಾಗಿದೆ. ಸಫಾರಿಗೆ ಹೋಗುವ ಪ್ರವಾಸಿಗರಿಗೆ ಹುಲಿ ಮತ್ತು ಸಿಂಹ ಕಾಣುವ ಮಾದರಿಯಲ್ಲಿ ಬ್ರೆಕಲ್ ಪ್ರದೇಶವನ್ನು ಒದಗಿಸಲಾಗಿದೆ. ಹುಲಿ ಸಫಾರಿ ಕೇಂದ್ರದ ಒಳಗಡೆ ಮೂರು ಕಿ.ಮೀ ಸಫಾರಿ ಮಾಡು ಟ್ರಕ್ ವ್ಯವಸ್ಥೆ ಮಾಡಲಾಗಿದೆ.

ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

English summary
As state government has not reserved fund and also drought in ballary districts, holistical Hampi Utsav decade old cultural event would not be celebrated this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X