ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿಯಲ್ಲಿ ಡಬಲ್ ಡೆಕ್ಕರ್ ಬಸ್ ಪರಿಚಯಿಸಲಿದೆ ಕೆಎಸ್‌ಟಿಡಿಸಿ

|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್ 06 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಂಪಿಯಲ್ಲಿ ಡಬಲ್ ಡೆಕ್ಕರ್ ಬಸ್ ಪರಿಚಯಿಸಲಿದೆ. ಮೈಸೂರು ಮತ್ತು ಹಂಪಿಯಲ್ಲಿ ಡಿಸೆಂಬರ್‌ ತಿಂಗಳಿನಿಂದ ಈ ಸೌಲಭ್ಯ ಆರಂಭವಾಗುವ ನಿರೀಕ್ಷೆ ಇದೆ.

ಕೆಎಸ್‌ಟಿಡಿಸಿ ಪ್ರವಾಸಿಗರು ಹಂಪಿಯ ಸೌಂದರ್ಯವನ್ನು ಸವಿಯಲು ಡಬಲ್ ಡೆಕ್ಕರ್ ಬಸ್ ಪರಿಚಯಿಸಲಿದೆ. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 6 ಡಬಲ್ ಡೆಕ್ಕರ್ ಬಸ್ ಪರಿಚಯಿಸಲು 5 ಕೋಟಿ ರೂ. ಅನುದಾನ ನೀಡಿದ್ದಾರೆ.

ವರ್ಷದ ಕೊನೆಯಲ್ಲಿ ಮೈಸೂರು, ಹಂಪಿಗೆ ಡಬಲ್ ಡೆಕ್ಕರ್ ಬಸ್?ವರ್ಷದ ಕೊನೆಯಲ್ಲಿ ಮೈಸೂರು, ಹಂಪಿಗೆ ಡಬಲ್ ಡೆಕ್ಕರ್ ಬಸ್?

ಪ್ರಸ್ತುತ ಮೈಸೂರು ಮತ್ತು ಹಂಪಿಯಲ್ಲಿ ಡಬಲ್ ಡೆಕ್ಕರ್ ಬಸ್ ಸೌಲಭ್ಯ ಪರಿಚಯಿಸಲು ಟೆಂಡರ್ ಆಹ್ವಾನಿಸಿದೆ. 5 ರಿಂದ 6 ತಿಂಗಳಿನಲ್ಲಿ ಈ ಸೇವೆ ಆರಂಭವಾಗಲಿದ್ದು, ಪ್ರವಾಸಿಗರಿಂದ ಉತ್ತಮವಾದ ಪ್ರತಿಕ್ರಿಯೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಕೆಎಸ್‌ಟಿಡಿಸಿ ಇದೆ.

ಕೆಎಸ್‌ಟಿಡಿಸಿ ನೇಮಕಾತಿ; 35 ಹುದ್ದೆಗಳಿಗೆ ಅರ್ಜಿ ಹಾಕಿಕೆಎಸ್‌ಟಿಡಿಸಿ ನೇಮಕಾತಿ; 35 ಹುದ್ದೆಗಳಿಗೆ ಅರ್ಜಿ ಹಾಕಿ

Hampi

ಐಚರ್ ವಾಹನದ ಮೇಲೆ ಡಬರ್ ಡೆಕ್ಕರ್ ಬಸ್ ನಿರ್ಮಾಣವಾಗಲಿದೆ. ಕೆಎಸ್‌ಟಿಡಿಸಿ ಸೂಚನೆಯಂತೆ ಇದನ್ನು ನಿರ್ಮಾಣ ಮಾಡಬೇಕಿದೆ. ಒಂದು ಬಸ್‌ನಲ್ಲಿ 60 ಪ್ರಯಾಣಿಕರು ಬಸ್‌ನಲ್ಲಿ ಕುಳತಿ ನಗರದ ಸೌಂದರ್ಯ ಸವಿಯಲು ವ್ಯವಸ್ಥೆ ಮಾಡಲಾಗುತ್ತದೆ.

ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ

2014ರಲ್ಲಿ ಬಿಎಂಟಿಸಿ ಬೆಂಗಳೂರು ನಗರದಲ್ಲಿ 'ಓಪನ್ ಬಸ್' ಎಂಬ ಪರಿಕಲ್ಪನೆಯಲ್ಲಿ ಬಸ್ ಸೇವೆ ಆರಂಭಿಸಿತ್ತು. ಬೆಂಗಳೂರು ರೌಂಡ್ಸ್ ಹೆಸರಿನಲ್ಲಿ ನಗರದ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಈ ಬಸ್ ಸಂಚಾರ ನಡೆಸುತ್ತಿತ್ತು.

ಮೈಸೂರು ಮತ್ತು ಹಂಪಿಯಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಕೆಎಸ್‌ಟಿಡಿಸಿ ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ದರ್ಶಿನಿ ಪ್ಯಾಕೇಜ್ ಘೋಷಣೆ ಮಾಡುತ್ತದೆ. ಇದಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

English summary
Karnataka State Tourism Development Corporation decided to operate double-decker bus services in Hampi. Bus service may began in the month of December 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X