ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪಗೆ ಕೋರ್ಟ್ ನೀಡಿದ ಭರ್ಜರಿ ಶಾಕ್

|
Google Oneindia Kannada News

ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಮತ್ತು ಪ್ರಖರ ಭಾಷಣಕಾರ ವಿ ಎಸ್ ಉಗ್ರಪ್ಪಗೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ನ್ಯಾಯಾಲಯ ಶಾಕ್ ನೀಡಿದೆ. ಉಗ್ರಪ್ಪನವರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಆದೇಶ ಹೊರಡಿಸಿದೆ.

ಉಪಚುನಾವಣೆ ನಡೆಯುವ ಒಂದು ದಿನದ ಮುನ್ನ ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಎಂಟು ವರ್ಷದ ಹಿಂದಿನ ಕೋರ್ಟ್ ಆದೇಶವನ್ನು ಪಾಲಿಸದೇ ಇದ್ದಿದ್ದಕ್ಕೆ ಕೋರ್ಟ್ ಉಗ್ರಪ್ಪಗೆ ಈ ಶಾಕ್ ನೀಡಿದೆ.

ದೀಪಾವಳಿ ವಿಶೇಷ ಪುರವಣಿ

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ವಾಪಸ್ ಪಡೆಯಲು ವಿ ಎಸ್ ಉಗ್ರಪ್ಪ ಒತ್ತಡ ಹೇರುತ್ತಿದ್ದಾರೆಂದು ಮಮತಾ ಸಿಂಗ್ ಎನ್ನುವ ಮಹಿಳೆ, ಉಗ್ರಪ್ಪ ವಿರುದ್ದ ರಾಜ್ಯೋತ್ಸವದ ದಿನದಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದರು.

ಎಂಟು ವರ್ಷದ ಹಿಂದಿನ ಅಪಘಾತದ ಕೇಸಿಗೆ ಸಂಬಂಧಿಸಿದಂತೆ, ಸುದೀರ್ಘ ವಿಚಾರಣೆ ನಡೆಸಿದ ದೊಡ್ಡಬಳ್ಳಾಪುರ ನ್ಯಾಯಾಲಯ ಉಗ್ರಪ್ಪನವರ ಚರಾಸ್ತಿ ಮುಟ್ಟುಗೋಲಿಗೆ ಆದೇಶ ನೀಡಿದೆ. ಇದು ಚುನಾವಣೆಗೆ ಮುನ್ನ ಉಗ್ರಪ್ಪನವರಿಗಾದ ಹಿನ್ನಡೆಯೆಂದೇ ಉಲ್ಲೇಖಿಸಲಾಗುತ್ತಿದೆ.

ನ.3ಕ್ಕೆ 5 ಕ್ಷೇತ್ರಗಳ ಉಪಚುನಾವಣೆ: ಮೈತ್ರಿ vs ಬಿಜೆಪಿ, ಯಾರ ಪರ ಜನತೆ ನ.3ಕ್ಕೆ 5 ಕ್ಷೇತ್ರಗಳ ಉಪಚುನಾವಣೆ: ಮೈತ್ರಿ vs ಬಿಜೆಪಿ, ಯಾರ ಪರ ಜನತೆ

ಸ್ಥಳೀಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ, ಇದರ ಮರು ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಇನ್ನು ಹತ್ತು ದಿನದೊಳಗೆ ಉಗ್ರಪ್ಪನವರ ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ಹೊರಡಿಸಿದೆ. ಏನಿದು ಕೇಸ್? ಮುಂದೆ ಓದಿ

ಉಗ್ರಪ್ಪನವರ ಟೊಯಾಟೋ ಕ್ವಾಲಿಸ್ ಕಾರ್

ಉಗ್ರಪ್ಪನವರ ಟೊಯಾಟೋ ಕ್ವಾಲಿಸ್ ಕಾರ್

ಬೆಂಗಳೂರಿನ ವ್ಯಾಪಾರಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಯಲಹಂಕ - ದೊಡ್ಡಬಳ್ಳಾಪುರ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ , ಹಿಂದೆಯಿಂದ ಬರುತ್ತಿದ್ದ ಉಗ್ರಪ್ಪನವರ ಟೊಯಾಟೋ ಕ್ವಾಲಿಸ್ ಕಾರ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡಿದಿದೆ. ಅಪಘಾತದ ಈ ಘಟನೆಯಲ್ಲಿ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿರುವುದು ಒಂದೆಡೆಯಾದರೆ, ಅವರ ವಾಹನ ಸಂಪೂರ್ಣ ಜಖಂಗೊಂಡಿತ್ತು.

ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು

ಅರ್ಜಿಯ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ

ಅರ್ಜಿಯ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ

ಆಗಸ್ಟ್ 2008ರಲ್ಲಿ ಈ ಘಟನೆ ನಡೆದಿತ್ತು. ವಾಹನ ಸವಾರ ಚೇತರಿಸಿಕೊಂಡ ನಂತರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ ಅಕ್ಟೋಬರ್ 2017ರಂದು 67,500 ರೂಪಾಯಿ ಪರಿಹಾರ ನೀಡುವಂತೆ ವಿ ಎಸ್ ಉಗ್ರಪ್ಪನವರಿಗೆ ಸೂಚಿಸಿತ್ತು. ಅದನ್ನು ಉಗ್ರಪ್ಪ ಪಾಲಿಸಿರಲಿಲ್ಲ.

ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್! ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!

ಬಡ್ಡಿ ಸಮೇತ 94,925 ರೂಪಾಯಿ ಪಾವತಿಸುವಂತೆ ಸೂಚಿಸಿದ ಕೋರ್ಟ್

ಬಡ್ಡಿ ಸಮೇತ 94,925 ರೂಪಾಯಿ ಪಾವತಿಸುವಂತೆ ಸೂಚಿಸಿದ ಕೋರ್ಟ್

ಕೋರ್ಟ್ ವಿಚಾರಣೆಗೂ ಆಗಮಿಸದೇ ಇದ್ದ ಉಗ್ರಪ್ಪ, ನ್ಯಾಯಾಲಯ ಸೂಚಿಸಿದ ಪರಿಹಾರದ ಮೊತ್ತವನ್ನೂ ಪಾವತಿಸಿರಲಿಲ್ಲ. ದ್ವಿಚಕ್ರ ವಾಹನ ಸವಾರ, ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಜೊತೆಗೆ, ನ್ಯಾಯಾಂಗ ನಿಂದನೆ ಕೇಸನ್ನೂ ದಾಖಲಿಸಿದ್ದರು. ಶುಕ್ರವಾರ (ನ 2) ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪರಿಹಾರ ಹಣಕ್ಕೆ ಬಡ್ಡಿ ಸಮೇತ 94,925 ರೂಪಾಯಿ ಪಾವತಿಸುವಂತೆ ಸೂಚಿಸಿದೆ.

ಶ್ರೀರಾಮುಲು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಒಂದಿಷ್ಟು ಪ್ರಶ್ನೆಗಳು ಶ್ರೀರಾಮುಲು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಒಂದಿಷ್ಟು ಪ್ರಶ್ನೆಗಳು

ಉಗ್ರಪ್ಪನವರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಆದೇಶ

ಉಗ್ರಪ್ಪನವರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಆದೇಶ

ಇದೂ ಅಲ್ಲದೇ, ಉಗ್ರಪ್ಪನವರಿಗೆ ಸೇರಿದ ಮನೆಯಲ್ಲಿ ಏನೇನು ಚರಾಸ್ತಿ ಇದೆಯೋ, ಅದನ್ನೂ ಮುಟ್ಟುಗೋಲು ಹಾಕುವಂತೆ ಸೂಚಿಸಿದೆ. ನವೆಂಬರ್ 13ರರವೊಳಗೆ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಕೋರ್ಟ್ ಆದೇಶ ನೀಡಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ಮುಗಿದ ನಂತರ ಕೋರ್ಟ್ ಆದೇಶ ಹೊರಬಿದ್ದಿರುವುದರಿಂದ, ಸಂಭಾವ್ಯ ಭಾರೀ ಮುಖಭಂಗದಿಂದ ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಬಚಾವ್ ಆಗಿದೆ.

ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ: ಜನಾರ್ದನ ರೆಡ್ಡಿ ಗುಡುಗು ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ: ಜನಾರ್ದನ ರೆಡ್ಡಿ ಗುಡುಗು

ತನ್ನ ಮಗಳ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣ

ತನ್ನ ಮಗಳ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣ

ತನ್ನ ಮಗಳ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ ಎಸ್ ಉಗ್ರಪ್ಪ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿದ್ದರು. ಉಗ್ರಪ್ಪ ಈ ಸಮಿತಿಯ ಅಧ್ಯಕ್ಷರು ಕೂಡಾ.. ಆದರೆ ದೆಹಲಿಯಿಂದ ಒತ್ತಡ ಬರುತ್ತಿದೆ ಎನ್ನುವ ಕಾರಣಕ್ಕಾಗಿ ಕೇಸನ್ನು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ತಪ್ಪಿತಸ್ಥರನ್ನು ಉಗ್ರಪ್ಪ ರಕ್ಷಿಸುತ್ತಿದ್ದಾರೆಂದು ಮಮತಾ ಸಿಂಗ್ ಎನ್ನುವ ಮಹಿಳೆ ದೂರಿದ್ದರು.

ರಾಮುಲು ಅವರದ್ದು ಕಾಂಗ್ರೆಸ್‌ ಕುಟುಂಬ, ಅಣ್ಣ ಪಕ್ಷದ ಕಾರ್ಯಕರ್ತರಾಗಿದ್ದರು: ಡಿಕೆಶಿ ರಾಮುಲು ಅವರದ್ದು ಕಾಂಗ್ರೆಸ್‌ ಕುಟುಂಬ, ಅಣ್ಣ ಪಕ್ಷದ ಕಾರ್ಯಕರ್ತರಾಗಿದ್ದರು: ಡಿಕೆಶಿ

English summary
Bengaluru rural Doddaballapura 4th additional court ordered to seize Bellary Congress candidate VS Ugrappa's movable property. Court has given order towards ten years back incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X