ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ; ಜಿಂದಾಲ್ ಕಾರ್ಖಾನೆಗೆ ಸುತ್ತಲಿನ ಗ್ರಾಮಗಳ ಸಂಪರ್ಕ ಕಡಿತ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜೂನ್ 16: ಜಿಂದಾಲ್ ಕಾರ್ಖಾನೆಯ ಸುತ್ತ ಮುತ್ತಲಿನ ಗ್ರಾಮಗಳ ಸಂಪರ್ಕಕ್ಕೆ ನಿರ್ಬಂಧ ಹೇರಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮಹತ್ವದ ಅದೇಶ ಹೊರಡಿಸಿದ್ದಾರೆ.

Recommended Video

Careful! Your sanitizer may be poisonous, CBI issues alert for the first time | Oneindia Kannada

ಜೂನ್ ತಿಂಗಳ 30 ರ ವರೆಗೆ ಜಿಂದಾಲ್ ಕಾರ್ಮಿಕರು ಹೊರ ಹೋಗುವುದು ಮತ್ತು ಒಳಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಇದೇ ಜೂನ್ 18 ರಿಂದ ಅನ್ವಯವಾಗುವಂತೆ ಆದೇಶ ಜಾರಿಗೆ ಬರಲಿದೆ.

ಬಳ್ಳಾರಿಯ ಜಿಂದಾಲ್ ನಲ್ಲಿ ಕೊರೊನಾ ಸ್ಫೋಟ; ಜಿಲ್ಲೆಯಲ್ಲಿ 94ಕ್ಕೇರಿದ ಸೋಂಕಿತರ ಸಂಖ್ಯೆಬಳ್ಳಾರಿಯ ಜಿಂದಾಲ್ ನಲ್ಲಿ ಕೊರೊನಾ ಸ್ಫೋಟ; ಜಿಲ್ಲೆಯಲ್ಲಿ 94ಕ್ಕೇರಿದ ಸೋಂಕಿತರ ಸಂಖ್ಯೆ

ಕೇವಲ ಸರಕು ಸಾಗಾಣಿಕೆ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕೇವಲ ಜಿಂದಾಲ್ ಟೌನ್ ಶಿಪ್ ನಲ್ಲಿರುವ ಉದ್ಯೋಗಿಗಳಿಂದ ಮಾತ್ರ ಕೆಲಸ ಮಾಡಿಸಿಕೊಳ್ಳಬಹುದಾಗಿದ್ದು, ಜಿಂದಾಲ್ ಕಾರ್ಖಾನೆಗೆ ಹೋಗುವವರು ಬೇರೆ ಗ್ರಾಮಗಳಿಗೆ ತೆರಳುವಂತಿಲ್ಲ ಎಂದು ಆದೇಶಿಸಲಾಗಿದೆ.

Ballary; Disconnection Of Villages To Jindal Factory

ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಜಿಂದಾಲ್ ಸುತ್ತಲಿನ ಹಳ್ಳಿ ಜನರು ಜಿಂದಾಲ್ ಕಾರ್ಖಾನೆಗೆ ಹೋಗಿ ಬರುವುದು ನಿರಂತರವಾಗಿತ್ತು. ಜಿಂದಾಲ್ ಕಾರ್ಮಿಕರಿಂದಾಗಿ ಸುತ್ತ ಮುತ್ತಲಿನ ಗ್ರಾಮಗಳು ಕೊರೊನಾ ವೈರಸ್ ಸೊಂಕು ಭೀತಿ ಎದುರಿಸುತ್ತಿರುವುದನ್ನು ಮನಗಂಡು ಬಳ್ಳಾರಿ ಜಿಲ್ಲಾಧಿಕಾರಿಯು ಸಂಪರ್ಕ ಕಡಿತ ಆದೇಶವನ್ನು ಹೊರಡಿಸಿದ್ದಾರೆ.

English summary
Ballary District Collector SS Nakul has issued major ordered Disconnection to the villages surrounding the Jindal factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X