ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ-ಹರಿಹರ ರೈಲು ವೇಳಾಪಟ್ಟಿ ಬದಲಾವಣೆಗೆ ಒತ್ತಾಯ

|
Google Oneindia Kannada News

ಬಳ್ಳಾರಿ, ಮಾರ್ಚ್ 12 : ಕೊಟ್ಟೂರು ಮೂಲಕ ಸಂಚಾರ ನಡೆಸುವ ಹೊಸಪೇಟೆ-ಹರಿಹರ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡುವಂತೆ ಬೇಡಿಕೆ ಇಡಲಾಗಿದೆ. ಆರು ತಿಂಗಳ ಹಿಂದೆ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭವಾಗಿತ್ತು.

ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಬಳ್ಳಾರಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಇರುವ ರೈಲಿನ ವೇಳಾಪಟ್ಟಿ ಜನರಿಗೆ ಅನುಕೂಲವಾಗಿಲ್ಲ ಎಂದು ಹೇಳಿದ್ದಾರೆ.

ಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿ

ಸದ್ಯ ರೈಲು ಪ್ರತಿದಿನ ಬೆಳಗ್ಗೆ 6.30ಕ್ಕೆ ಹರಿಹರದಿಂದ ಹೊರಟು ಮಧ್ಯಾಹ್ನ 1ಕ್ಕೆ ಹೊಸಪೇಟೆಗೆ ತಲುಪುತ್ತಿದೆ. 130 ಕಿ. ಮೀ. ಕ್ರಮಿಸಲು ರೈಲು 6 ತಾಸು ತೆಗೆದುಕೊಳ್ಳುತ್ತಿದೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ, ರೈಲಿನಲ್ಲಿ ಪ್ರಯಾಣಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.

2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ

Demand To Change Hospet Kottur Harihar Passenger Train Schedule

ಈ ರೈಲನ್ನು ಬಳ್ಳಾರಿಯ ತನಕ ವಿಸ್ತರಣೆ ಮಾಡಬೇಕು. ಅಲ್ಲಿಂದ ಪ್ರತಿನಿತ್ಯ ಬಳ್ಳಾರಿ ಹಾಗೂ ಹರಿಹರದಿಂದ ಏಕಕಾಲಕ್ಕೆ ಬೆಳಗ್ಗೆ 7ಕ್ಕೆ ಸಂಚಾರ ಆರಂಭಿಸುವಂತೆ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸುಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸು

ಬೆಳಗ್ಗೆ 8ರೊಳಗೆ ಹೊಸಪೇಟೆಯಿಂದ ಹೊರಟು 9.30ರ ಒಳಗಾಗಿ ಬಳ್ಳಾರಿಗೆ ತಲುಪವಂತಹ ನೂತನ ರೈಲನ್ನು ಆರಂಭಿಸಬೇಕು. ಸಂಜೆ 7ಕ್ಕೆ ಬಳ್ಳಾರಿಯಿಂದ ಹೊರಟು, ರಾತ್ರಿ 10ರೊಳಗೆ ಹೊಸಪೇಟೆ ತಲುಪುವಂತೆ ರೈಲು ಆರಂಭಿಸಬೇಕು ಎಂದು ಮನವಿ ಮಾಡಲಾಗಿದೆ.

ಎರಡು ದಶಕಗಳಿಂದ ಹರಿಹರ-ಕೊಟ್ಟೂರು ಪ್ರಯಾಣಿಕರ ರೈಲಿಗಾಗಿ ಬೇಡಿಕೆ ಇತ್ತು. 2019ರ ಅಕ್ಟೋಬರ್ 18ರಂದು ರೈಲು ಸಂಚಾರ ಆರಂಭವಾಗಿತ್ತು. ಇದರಿಂದಾಗಿ ಬೆಂಗಳೂರು-ಹೊಸಪೇಟೆ-ಹಂಪಿ ನಡುವಿನ ಪ್ರಯಾಣದ ಅವಧಿ ಕಡಿತವಾಗಿತ್ತು.

English summary
People demand to change the schedule of rail service between Hospet and Harihar route via Kottur,Karnataka. Train service began 6 months back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X