ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲಸದ ಸಿಬ್ಬಂದಿಗೆ ಸೋಂಕು; ಕ್ವಾರಂಟೈನ್ ಆದ ಬಳ್ಳಾರಿ ಡಿಸಿ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ 21: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಧಿಕಾರಿ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಮನೆ ಹಾಗೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಇಂದು ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿದೆ. ಇವರಿಗೆ ಸೋಂಕು ದೃಢಪಟ್ಟಿರುವುದರಿಂದ ಜಿಲ್ಲಾಧಿಕಾರಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಬಳ್ಳಾರಿಯ ಅನಂತಪುರ ರಸ್ತೆಯಲ್ಲಿರುವ ನಿವಾಸದಲ್ಲಿ ಕ್ವಾರಂಟೈನ್ ಗೆ ಒಳ ಪಟ್ಟಿದ್ದಾರೆ. ಡಿಸಿಯವರ ನಿವಾಸಕ್ಕೆ ಹೋಂ ಕ್ವಾರೆಂಟೈನ್ ಬೋರ್ಡ್ ಅನ್ನು ಅಧಿಕಾರಿಗಳು ಹಾಕಿದ್ದಾರೆ.

ಮಂಗಳವಾರದಿಂದ ಶನಿವಾರದವರೆಗೆ ನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್ ಇರಲಿದ್ದು, ಮನೆಯಿಂದಲೇ ಕೆಲಸ ಮಾಡುವುದಾಗಿ ಡಿಸಿ ನಕುಲ್ ಮಾಹಿತಿ ನೀಡಿದ್ದಾರೆ.

Ballari DC Under Home Quarantine As His Staff Tested Coronavirus Positive

 ಕೊರೊನಾ ವೈರಸ್; ಇಂದು ಒಂದೇ ದಿನ ದ್ವಿಶತಕ ಕಂಡ ಗಣಿನಾಡು ಕೊರೊನಾ ವೈರಸ್; ಇಂದು ಒಂದೇ ದಿನ ದ್ವಿಶತಕ ಕಂಡ ಗಣಿನಾಡು

ಈ ನಡುವೆ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ಸೋಂಕು ಶತಕ ಬಾರಿಸಿದೆ. ಜಿಲ್ಲೆಯಲ್ಲಿ ಇಂದು 142 ಜನರಿಗೆ ಸೋಂಕು ದೃಢವಾಗಿದೆ. ಬಳ್ಳಾರಿ-31, ಸಂಡೂರು-18, ಸಿರುಗುಪ್ಪ-6, ಕೂಡ್ಲಿಗಿ-12, ಹೂವಿನಹಡಗಲಿ-11, ಹೊಸಪೇಟೆ-52, ಹಗರಿಬೊಮ್ಮನಹಳ್ಳಿ-6, ಹರಪನಹಳ್ಳಿ-6 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ 2810 ಆಗಿದೆ.

English summary
Coronavirus cases in Ballari has been increasing. Ballari dc also under home quarantine as his staff tested coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X