• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈದ್ಯ ರವೀಂದ್ರನಾಥ್ ಮಾಡಿರುವ ಆರೋಪ ತಳ್ಳಿಹಾಕಿದ ಬಳ್ಳಾರಿ ಜಿಲ್ಲಾಧಿಕಾರಿ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಸೆಪ್ಟೆಂಬರ್ 7: ಹಿರಿಯ ಐಎಎಸ್ ಅಧಿಕಾರಿಗಳ ಕಿರುಕುಳದ ಹಿನ್ನೆಲೆಯಲ್ಲಿ ನಾನು ವೈದ್ಯ ವೃತ್ತಿ ಬಿಟ್ಟು ಆಟೋ ಓಡಿಸಿ ಜೀವನ ಸಾಗಿಸುತ್ತಿರುವೆ ಎಂದು ಗಂಭೀರ ಆರೋಪ ಮಾಡಿರುವ ಡಾ.ರವೀಂದ್ರನಾಥ್ ಅವರ ವಾದವನ್ನು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಳ್ಳಿ ಹಾಕಿದ್ದಾರೆ.

ಸದ್ಯ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಡಾ.ರವೀಂದ್ರನಾಥ್, ಅವರು ಮೂಲತಃ ದಾವಣಗೆರೆ ತಾಲೂಕಿನ ಬಾಡಾ ಗ್ರಾಮದ ನಿವಾಸಿ. ಅವರೇ ಆರೋಪಿಸುವಂತೆ ""ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ, ನನ್ನ ಈ ಸ್ಥಿತಿಗೆ ಆರೋಗ್ಯ ಇಲಾಖೆಯ ಆಯುಕ್ತ ಪಂಕಜಕುಮಾರ ಪಾಂಡೆ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದ ಜಾವೇದ್ ಅಕ್ತರ್, ಸದ್ಯ ಮಂಗಳೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹಾಗೂ ಬಳ್ಳಾರಿ ಜಿ.ಪಂ ಸಿಇಒ ಕೆ. ನಿತೀಶ್ ಕಾರಣವೆಂದು'' ಹೇಳಿದ್ದರು.

ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕ

ಈ ನಾಲ್ವರು ಅಧಿಕಾರಿಗಳು ಕೊಡಬಾರದ ಹಿಂಸೆ ಕೊಟ್ಟು ನನ್ನ ನೆಮ್ಮದಿ ಹಾಳು ಮಾಡಿ, ಮಾಡದ ತಪ್ಪಿಗೆ ಸೇವೆಯಿಂದ ಅಮಾನತ್ತು ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದು, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರವೀಂದ್ರನಾಥ್ ಅವರ ಬಗೆಗಿನ ಪೋಸ್ಟ್‌ ಗಳು ಹರಿದಾಡುತ್ತಿದ್ದು. ವೈದ್ಯ ರವೀಂದ್ರನಾಥ್ ಅವರು ಬಳ್ಳಾರಿ ಜಿಲ್ಲೆಗೆ ಸೇರಿದವರು ಎಂದು ಕೆಲವು ವಿಡಿಯೋಗಳಿವೆ.

ಆದ್ದರಿಂದ ದಾಖಲೆಗಳ ಪರಿಶೀಲನೆಗಾಗಿ ಮತ್ತು ಅವರ ಫೈಲ್ ತರೆಸಿ ವಿಚಾರಸಿದ್ದೆನೆ. ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದ ತಂಡವು ಡಾ.ರವೀಂದ್ರನಾಥ್ ವಿರುದ್ಧ ತಪ್ಪಾದ ಟೆಂಡರ್ ಪ್ರಕ್ರಿಯೆಗಳ ಆರೋಪಗಳ ಬಗ್ಗೆ ವಿಚಾರಿಸಿ, ಆರೋಪಗಳನ್ನು ಪ್ರಾಥಮಿಕ ಸತ್ಯವನ್ನು ತಿಳಿಸಿ ವರದಿಯನ್ನು ಸಲ್ಲಿಸಿತ್ತು ಎಂದರು.

ವರದಿಯ ಆಧಾರದ ಮೇಲೆ, ಸಂಬಂಧಪಟ್ಟ ವೈದ್ಯರನ್ನು 06/06/2019 ರಂದು ಹಲವಾರು ಕಾರಣಗಳಿಂದ ಅಮಾನತ್ತುಗೊಳಿಸಲಾಗಿದೆ, ಇದು 1 ಕೋಟಿ ರೂ.ಗಿಂತ ಹೆಚ್ಚಿನ ಟೆಂಡರ್ ಪ್ರಕ್ರಿಯೆಗಳ ಗಂಭೀರ ಉಲ್ಲಂಘನೆಯಾಗಿದೆ. ನಾನು ಬಳ್ಳಾರಿ ಜಿಲ್ಲೆಗೆ ಬರುವ ಮೊದಲು ಅಮಾನತುಗೊಳಿಸುವ ಕ್ರಮವಾಗಿತ್ತು ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದರು.

ಅಲ್ಲದೇ ‌ಡಾ.ರವೀಂದ್ರನಾಥ್ ಅವರನ್ನು ಸೇಡಂ ತಾಲ್ಲೂಕು ಆಸ್ಪತ್ರೆ ವಿಚಾರಣೆಯ ಬಾಕಿ ಉಳಿದಿದೆ ಮತ್ತು ಲಭ್ಯವಿರುವ ಮಾಹಿತಿಯ ಪ್ರಕಾರ, ಅವರು ಇಲ್ಲಿಯವರೆಗೆ ಕೆಲಸ ಮಾಡಲು ವರದಿ ಮಾಡಿಲ್ಲ ಮತ್ತು ಅವರ ಯಾವುದೇ ರಾಜೀನಾಮೆಯ ಬಗ್ಗೆ ನಮಗೆ ತಿಳಿದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

English summary
Ballari DC SS Nakul Dismisses allegations made by Dr Ravindranath a doctor turned auto driver in davanagere. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X