• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿಂದಾಲ್‌ಗೆ ಭೂಮಿ ಪರಭಾರೆ: ಸಚಿವ ಆನಂದ ಸಿಂಗ್ ರಾಜೀನಾಮೆ ನೀಡಲಿ

By ವಿಜಯನಗರ ಪ್ರತಿನಿಧಿ
|

ವಿಜಯನಗರ, ಮೇ 4: ಜಿಂದಾಲ್‌ ಕಾರ್ಖಾನೆಗೆ 3667 ಎಕರೆ ಭೂಮಿ ಪರಭಾರೆ ಮಾಡಿದ್ದಕ್ಕೆ ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡಬೇಕೆಂದು ಸಿಪಿಐಎಂ ಕಾರ್ಯಕರ್ತರು ಆಗ್ರಹಿಸಿದರು.

ಅವರು ಮಂಗಳವಾರ ಹೊಸಪೇಟೆ ನಗರದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ತಹಶೀಲ್ದಾರರಿಗೆ ಸಚಿವ ಆನಂದಸಿಂಗ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮನವಿ ಪತ್ರ ನೀಡಿ ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ಜಂಬಯ್ಯ ನಾಯಕ ಮಾತನಾಡಿದರು.

ಜಿಂದಾಲ್‌ಗೆ 3667 ಎಕರೆ ಭೂಮಿ ಪರಭಾರೆಗೆ ವಿರೋಧಿಸಿದ ಆನಂದ್ ಸಿಂಗ್ಜಿಂದಾಲ್‌ಗೆ 3667 ಎಕರೆ ಭೂಮಿ ಪರಭಾರೆಗೆ ವಿರೋಧಿಸಿದ ಆನಂದ್ ಸಿಂಗ್

ಕಳೆದ ಸಮ್ಮಿಶ್ರ ಸರಕಾರದಲ್ಲಿ ಜಿಂದಾಲ್ ಕಾರ್ಖಾನೆಗೆ 3667 ಎಕರೆ ಭೂಮಿ ಪರಭಾರೆ ಮಾಡುವುದಕ್ಕೆ ಅಂದು ವಿರೋಧಿಸಿ ರಾಜೀನಾಮೆ ಸಲ್ಲಿಸಿದ್ದರು, ಈಗ ತಾವೇ ಸಚಿವರಿದ್ದುಕೊಂಡು ಸಂಪುಟ ಸಭೆಯಲ್ಲಿ ಭೂಮಿ ಪಾರಭಾರೆ ಒಪ್ಪಿಗೆ ನೀಡಿದರೂ ಯಾಕೆ ಮೌನವಹಿಸಿದ್ದಾರೆ? ಅಂದು ರಾಜೀನಾಮೆ ಕೊಟ್ಟವರು ಇಂದು ಯಾಕೆ ರಾಜೀನಾಮೆ ಕೊಡುತ್ತಿಲ್ಲವೆಂದು ಹೊಸಪೇಟೆಯಲ್ಲಿ ಸಿಪಿಐಎಂ ಪಕ್ಷದ ಬಳ್ಳಾರಿ ಜಿಲ್ಲಾ ಸಮಿತಿ ಪ್ರಶ್ನೆ ಮಾಡಿದೆ.

ಅಂದು ಸಮ್ಮಿಶ್ರ ಸರ್ಕಾರದಲ್ಲಿ ಭೂಮಿ ಉಳಿವಿವಾಗಿ ರಾಜೀನಾಮೆ ನೀಡಿದವರು, ಈಗ ಭೂಮಿ ಪರಾಭಾರೆಯಾದ್ರೂ ಯಾಕೆ ಸುಮ್ಮನಿದ್ದಿರಿ-? ಸಚಿವ ಸಂಪುಟದ ಸಭೆಯಲ್ಲಿ ಭಾಗವಹಿಸಿರಲಿಲ್ಲ ಅಜೆಂಡಾ ನೋಡಿರಲಿಲ್ಲ ಎಂದು ಕುಂಟ ನೆಪಗಳನ್ನು ಹೇಳುತ್ತಿದ್ದೀರಿ. ಈ ಕೂಡಲೇ ಸುಳ್ಳು ಹೇಳುವುದನ್ನು ಬಿಟ್ಟು ರಾಜೀನಾಮೆಗೆ ಆಗ್ರಹಿಸಿದರು.

ಆನಂದ್ ಸಿಂಗ್ ಮತ್ತು ಅನಿಲ್ ಲಾಡ್ ಇಬ್ಬರೂ ಜೊತೆಗೂಡಿ ಹೋರಾಟ ಮಾಡಿದ್ದರು, ಆದರೆ ಸದ್ಯ ಈಗ ಕ್ಯಾಬಿನೆಟ್ ನಲ್ಲಿದ್ರೂ, ಏನೂ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

ಆನಂದ್ ಸಿಂಗ್ ಅವರು ಈ ಮೌನಕ್ಕೆ ಕಾರಣವೇನು ಎಂದ ಅವರು, ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಅಂದು ಜಿಂದಾಲ್‌ನ್ನು ಕಂಪನಿಯನ್ನು ಈಸ್ಟ್ ಇಂಡಿಯಾ ಕಂಪನಿ ಎಂದವರು ಇಂದು ಸುಮ್ಮನಿರುವುದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಆರ್.ಎಸ್ ಬಸವರಾಜ, ಎಂ.ಜಂಬಯ್ಯನಾಯಕ, ಆರ್.ಭಾಸ್ಕರ್ ರೆಡ್ಡಿ, ಎಂ.ಗೋಪಾಲ ಮತ್ತು ಎ.ಕರುಣಾನಿಧಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.

English summary
CPI (M) activists demanded resignation of Minister Anand Singh for Selling of 3667 acres land to the Jindal factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X