ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯನಗರ; ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ!

By ವಿಜಯನಗರ ಪ್ರತಿನಿಧಿ
|
Google Oneindia Kannada News

ಹೊಸಪೇಟೆ, ಏಪ್ರಿಲ್ 25; ಕೋವಿಡ್ ಸೋಂಕು ಹರಡುವಿಕೆ ತಡೆಯಲು ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕೊಟ್ಟಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಈ ಸಂದರ್ಭದಲ್ಲಿ ಹಲವಾರು ಜನರು ಮಾಸ್ಕ್ ಸಹ ಧರಿಸಿರಲಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಖರೀದಿ ಭರಾಟೆಯಲ್ಲಿ ಬ್ಯುಸಿಯಾಗಿದ್ದರು.

ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ! ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ!

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಎಸಿ ಮತ್ತು ಡಿವೈಎಸ್ಪಿ ಆಗಮಿಸಿ ಜನರನ್ನು ಚದುರಿಸಿದರು. ಶನಿವಾರವೂ ಸಹ ಜನರು ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ತರಕಾರಿ ಖರೀದಿಗೆ ಮುಗಿಬಿದ್ದಿದ್ದರು. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದರು.

ಚಿಕ್ಕಮಗಳೂರು; ವಾರಾಂತ್ಯದ ಕರ್ಫ್ಯೂಗೆ ಉತ್ತಮ ಬೆಂಬಲ ಚಿಕ್ಕಮಗಳೂರು; ವಾರಾಂತ್ಯದ ಕರ್ಫ್ಯೂಗೆ ಉತ್ತಮ ಬೆಂಬಲ

COVID Rules Not Following In Hospet APMC Market

ಎಪಿಎಂಸಿಗೆ ಆಗಮಿಸಿದ ಸಹಾಯಕ ಆಯುಕ್ತಾರದ ಸಿದ್ದರಾಮೇಶ್ವರ ಮತ್ತು ಡಿವೈಎಸ್ಪಿ ರಘುಕುಮಾರ ಜನರನ್ನು ಚದುರಿಸುವ ಕೆಲಸವನ್ನು ಮಾಡಿದರು. ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ಎಸಿ ಮತ್ತು ಡಿವೈಎಸ್ಪಿಯವರು ಮೈಕ್ ಮುಖಾಂತರ ಕೋವಿಡ್ ನಿಯಮ ಪಾಲಿಸುವಂತೆ ಕರೆ ಕೊಟ್ಟರು.

ಏಕಾಏಕಿ ಎಲ್ಲಾ ಅಂಗಡಿ ಬಂದ್, ಹೊಸಪೇಟೆ ವ್ಯಾಪಾರಸ್ಥರು ಕಂಗಾಲು ಏಕಾಏಕಿ ಎಲ್ಲಾ ಅಂಗಡಿ ಬಂದ್, ಹೊಸಪೇಟೆ ವ್ಯಾಪಾರಸ್ಥರು ಕಂಗಾಲು

ಮಾರುಕಟ್ಟೆಯಲ್ಲಿ ಓಡಾಟ; ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ತಿಳುವಳಿಕೆ ಹೇಳಿದರೂ ಸಹ ಕೇಳುತ್ತಿಲ್ಲ. ಆದ್ದರಿಂದ, ಸ್ವತಃ ಎಸಿ ಲಾಠಿ ಹಿಡಿದು ಎಪಿಎಂಸಿ ಮಾರುಕಟ್ಟೆಯಲ್ಲಿ ಓಡಾಡಿದರು. ವರ್ತಕರಿಗೆ ರಿಟೇಲ್ ಇನ್ನೊಮ್ಮೆ ಕೊಡುತ್ತಿರುವುದು ಗಮನಕ್ಕೆ ಬಂದರೇ ನಿಮ್ಮ ಲೈಸೆನ್ಸ್ ರದ್ದು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪ್ರಕರಣ ದಾಖಲು; ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗುತ್ತದೆ ಎಂದು ಟಿ. ಬಿ. ಡ್ಯಾಂನ ಸಿಪಿಐ ನಾರಾಯಣ ಎಚ್ಚರಿಕೆ ನೀಡಿದರು.

ಹೊಸಪೇಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ಮೊಕ್ಕಂ ಹೂಡಿದ್ದರು. ಕೋವಿಡ್ ನಿಯಮ ಪಾಲನೆ ಬಗ್ಗೆ ಪರಿಶೀಲಿಸಿದರು.

English summary
In Hospet APMC people and vegetable sellers not following COVID rules. Market allowed for only morning 6 am to 10 am due to weekend curfew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X