ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ; ತಾಯಿ, ಮಗು ಸುರಕ್ಷಿತ

|
Google Oneindia Kannada News

ಬಳ್ಳಾರಿ, ಜೂನ್ 25 : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಬಳ್ಳಾರಿಯ ವೈದ್ಯರು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಗರ್ಭಿಣಿಯರಿಗೆ ಹೆರಿಗೆಯಾಗಿದ್ದು ತಾಯಿ, ಮಗು ಸುರಕ್ಷಿತವಾಗಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 10 ಕೊರೊನಾ ವೈರಸ್ ಸೋಂಕಿತ ಗರ್ಭಿಣಿಯಿಯರು ದಾಖಲಾಗಿದ್ದರು. ಇವರಲ್ಲಿ ಇಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದ್ದು, ಉಳಿದವರ ಮೇಲೆಯೂ ವಿಶೇಷ ನಿಗಾವಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

18 ದಿನ ವೆಂಟಿಲೇಟರ್‌ನಲ್ಲಿದ್ದ 4 ತಿಂಗಳ ಮಗು ಕೊರೊನಾ ಸೋಂಕಿನಿಂದ ಗುಣಮುಖ18 ದಿನ ವೆಂಟಿಲೇಟರ್‌ನಲ್ಲಿದ್ದ 4 ತಿಂಗಳ ಮಗು ಕೊರೊನಾ ಸೋಂಕಿನಿಂದ ಗುಣಮುಖ

"ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಮಕ್ಕಳ ಆರೋಗ್ಯ ನೋಡಿಕೊಂಡು ಸ್ವ್ಯಾಬ್ ಟೆಸ್ಟ್ ಮಾಡಿಸುವುದಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಗುವುದು" ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ 1562 ಕೊರೊನಾ ಕೇಸ್, ಪಂಜಾಬ್‌ನಲ್ಲಿ 8 ತಿಂಗಳು ಮಗು ಸಾವುತಮಿಳುನಾಡಿನಲ್ಲಿ 1562 ಕೊರೊನಾ ಕೇಸ್, ಪಂಜಾಬ್‌ನಲ್ಲಿ 8 ತಿಂಗಳು ಮಗು ಸಾವು

ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 529. 376 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. 829 ಜನರು ಇದುವರೆಗೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಚಿಕ್ಕಮಗಳೂರು: ತಾಯಿ ಚಿತೆಗೆ ಬೆಂಕಿ ಇಡಲೂ ಕೊರೊನಾವೈರಸ್ ಬಿಡಲಿಲ್ಲ ಚಿಕ್ಕಮಗಳೂರು: ತಾಯಿ ಚಿತೆಗೆ ಬೆಂಕಿ ಇಡಲೂ ಕೊರೊನಾವೈರಸ್ ಬಿಡಲಿಲ್ಲ

29 ವರ್ಷದ ಮಹಿಳೆ

29 ವರ್ಷದ ಮಹಿಳೆ

ಬಳ್ಳಾರಿ ನೆಹರು ಕಾಲೋನಿಯ 29 ವಯಸ್ಸಿನ ಕೊರೊನಾ ವೈರಸ್ ಸೋಂಕಿತ ಮಹಿಳೆಗೆ ಗುರುವಾರ ಮುಂಜಾನೆ 5 ಗಂಟೆಗೆ ನುರಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದೆ. ಮಹಿಳೆಯ ಆರೋಗ್ಯ ಚೆನ್ನಾಗಿದೆ. ಗಂಡು ಮಗುವಾಗಿದ್ದು, 2.8 ಕೆಜಿ ತೂಕವಿದ್ದು ಆರೋಗ್ಯವಾಗಿದೆ. ಮಹಿಳೆಯ ಪತಿ ಎರಡು ದಿನಗಳ ಹಿಂದೆ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು. ಈ ಮಹಿಳೆಗೆ ಇದು ಮೂರನೇ ಮಗುವಾಗಿದೆ.

28 ವರ್ಷದ ಮಹಿಳೆ

28 ವರ್ಷದ ಮಹಿಳೆ

ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ರಾಯದುರ್ಗದ 28 ವರ್ಷದ ಮಹಿಳೆಗೆ ಸಾಮಾನ್ಯ ಹೆರಿಯಾಗಿದೆ. ತಾಯಿ ಆರೋಗ್ಯವಾಗಿದ್ದಾರೆ. ಗಂಡು ಮಗುವಾಗಿದ್ದು, 3.2 ಕೆಜಿ ತೂಕವಿದೆ. ಪತಿಯಿಂದ ಈ ಮಹಿಳೆಗೆ ಕೊರೊನಾ ಸೋಂಕು ಹರಡಿದ ಹಿನ್ನೆಲೆಯಿದ್ದು, ಪತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ವೈದ್ಯರ ತಂಡದಿಂದ ನಿಗಾ

ವೈದ್ಯರ ತಂಡದಿಂದ ನಿಗಾ

ಆಸ್ಪತ್ರೆಯ ನುರಿತ ತಜ್ಞ ವೈದ್ಯರಾದ ಡಾ.ಸುಯಗ್ನ ಜೋಶಿ, ಡಾ. ವಿಜಯಲಕ್ಷ್ಮೀ, ಡಾ. ಸರಸ್ವತಿ, ಡಾ.ರಾಜೇಶ್ವರಿ, ಡಾ. ಮಲ್ಲಣ್ಣ, ಡಾ. ಸತೀಶ್, ಡಾ. ಭಾಸ್ಕರ್, ಡಾ. ನಿತೀಶ್, ಡಾ. ವೀರಶಂಕರ್, ಡಾ. ಸುನೀಲ್,ಡಾ.ಜಯಲಕ್ಷ್ಮಿ , ಡಾ.ಸಂಪತ್‌ ಹಾಗೂ ಒಟಿ ವಿಭಾಗದ ಸಿಬ್ಬಂದಿಗಳು ಈ ಹೆರಿಗೆ ಮಾಡಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು. ತಾಯಿ ಮತ್ತು ಮಗುವಿನ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

ಸ್ವ್ಯಾಬ್ ಟೆಸ್ಟ್‌

ಸ್ವ್ಯಾಬ್ ಟೆಸ್ಟ್‌

"ಮಕ್ಕಳ ಆರೋಗ್ಯ ನೋಡಿಕೊಂಡು ಸ್ವ್ಯಾಬ್ ಟೆಸ್ಟ್ ಮಾಡಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿ ನಿರ್ಣಯದ ಅನುಸಾರ ಕ್ರಮಕೈಗೊಳ್ಳಲಾಗುವುದು" ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹೇಳಿದ್ದಾರೆ.

English summary
Two women infected with Coronavirus gave birth to a baby at Ballari district COVID hospital. The mother and child are healthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X