ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ; ಕೊನೆಗೂ ಡಿಸಿ ಆದೇಶ ಪಾಲನೆ ಮಾಡಿದ ಜಿಂದಾಲ್

|
Google Oneindia Kannada News

ಬಳ್ಳಾರಿ, ಏಪ್ರಿಲ್ 02 : ಕರ್ನಾಟಕದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲಾಡಳಿತ ನೀಡಿದ ಕಟ್ಟುನಿಟ್ಟಿನ ಸೂಚನೆಯನ್ನು ಜಿಂದಾಲ್ ಪಾಲನೆ ಮಾಡಲು ಆರಂಭಿಸಿದ್ದು, ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿದೆ.

"ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿದೆ. ಪ್ಲಾಂಟ್ ಕಾರ್ಯನಿರ್ವಹಣೆ ಕೂಡ ಇಳಿಮುಖಗೊಳಿಸಿದೆ" ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದ್ದಾರೆ.

ಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲುಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲು

ಮಾ.5ರಂದು 35, 398 ಕಾರ್ಮಿಕರು ವಿವಿಧ ಪ್ಲಾಂಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಾ.28ಕ್ಕೆ ಅದರ ಪ್ರಮಾಣವನ್ನು ಜಿಲ್ಲಾಡಳಿತ ಸೂಚನೆ ಮೇರೆಗೆ 13, 303ಕ್ಕೆ ಇಳಿಸಲಾಗಿತ್ತು. ಮಾ.31ರಂದು ನೀಡಿದ ಸೂಚನೆ ಅನ್ವಯ ಕಾರ್ಮಿಕರ ಬಳಕೆಯನ್ನು 9, 294ಕ್ಕೆ ಏ.3ರಿಂದ ಅನ್ವಯವಾಗುವಂತೆ ಇಳಿಸಲಾಗುತ್ತದೆ.

ಬಳ್ಳಾರಿ : ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು, ಜನರಿಗೆ ಸೂಚನೆಬಳ್ಳಾರಿ : ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು, ಜನರಿಗೆ ಸೂಚನೆ

Coronavirus JSW Steel Cuts Workers Numbers

ಪ್ರತಿನಿತ್ಯ 12 ಸಾವಿರ ಟನ್ ಕಬ್ಬಿಣದ ಕಚ್ಚಾ ವಸ್ತು ಪ್ಲಾಂಟ್‍ಗೆ ಬರುತ್ತಿದೆ. ಈ ಎಲ್ಲ ಕಾರ್ಮಿಕರನ್ನು 24 ಗಂಟೆಗಳ ಕಾರ್ಯನಿರ್ವಹಣೆಗೆ ಶಿಫ್ಟ್‌ ಅನುಸಾರ (ಎ+ಬಿ+ಸಿ+ಜಿ) ಬಳಸಿಕೊಳ್ಳಲಾಗುತ್ತಿದೆ. ಈ ಪ್ಲಾಂಟ್‍ಗಳಲ್ಲಿ ಒಂದೇ ಬಾರಿಗೆ 4,500 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿಲ್ಲ.

50 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ50 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

ಈ ಎಲ್ಲ ಕಾರ್ಮಿಕರು ನಮ್ಮ ಟೌನ್‍ಶಿಪ್ ವ್ಯಾಪ್ತಿಯಲ್ಲಿದ್ದಾರೆ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದೆ. ಜಿಲ್ಲಾಡಳಿತ ನೀಡಿದ ಆರೋಗ್ಯ ಹಾಗೂ ಇನ್ನಿತರ ಸೂಚನೆಗಳನ್ನು ಪಾಲಿಸಲಾಗುತ್ತಿದೆ.

English summary
After the Ballari district administration direction JSW steel in Ballari cut down the worker numbers. From April 3 9, 294 workers will work in shift.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X