ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: ಜಿಂದಾಲ್ ನೌಕರರ ಕುಟುಂಬಕ್ಕೆ ಕಂಟಕವಾದ ಕೊರೊನಾ ವೈರಸ್

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜೂನ್ 23: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದರೆ, ಇತ್ತ ಗಣಿ ನಾಡು ಬಳ್ಳಾರಿಯ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ತನ್ನ ನಾಗಾಲೋಟ ಮುಂದುವರೆಸಿದೆ. ಆದರೆ ಜಿಂದಾಲ್ ಕೇವಲ ನೌಕರರಿಗೆ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿಲ್ಲ ಬದಲಾಗಿ ಅವರ ಕುಟುಂಬಕ್ಕೂ ಸೋಂಕು ಕಾಣಿಸಿಕೊಂಡಿದ್ದು, ಒಂದು ತಿಂಗಳ ಮಗುವನ್ನು ಸಹ ಸೋಂಕು ಬಿಟ್ಟಿಲ್ಲ. ರಾಜ್ಯದ ಪ್ರತಿಷ್ಠಿತ ಉಕ್ಕು ಕಾರ್ಖಾನೆ ಬಳ್ಳಾರಿಯ ತೋರಣಗಲ್ ಬಳಿ ಇರುವ ಜಿಂದಾಲ್ ನಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿದ್ದಾರೆ. ನೇರವಾಗಿ 35 ಸಾವಿರ ನೌಕರರು ಕೆಲಸ ಮಾಡಿದರೆ, ಪರೋಕ್ಷವಾಗಿ 30 ಸಾವಿರಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿದ್ದಾರೆ.

Recommended Video

Shadab Khan, Haider Ali And Haris Rauf Test Positive For Coronavirus | Oneindia Kannada

ಯಾವಾಗ ಜಿಂದಾಲ್ ನಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತೋ ಅಂದಿನಿಂದ ಜಿಂದಾಲ್ ನೌಕರರ ಕುಟುಂಬಕ್ಕೆ ಮತ್ತೊಂದು ತಲೆನೋವು ಆರಂಭವಾಗಿದೆ. ಜಿಂದಾಲ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಅದರಲ್ಲೂ ಸೋಂಕು ಜಿಂದಾಲ್ ನೌಕರರ ಕುಟುಂಬ ಸದಸ್ಯರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.

ಜಿಂದಾಲ್ ಕಾರ್ಖಾನೆಯನ್ನು ಮತ್ತೆ ಲಾಕ್​​ಡೌನ್ ಮಾಡಲ್ಲ: ಬಳ್ಳಾರಿ ಡಿಸಿಜಿಂದಾಲ್ ಕಾರ್ಖಾನೆಯನ್ನು ಮತ್ತೆ ಲಾಕ್​​ಡೌನ್ ಮಾಡಲ್ಲ: ಬಳ್ಳಾರಿ ಡಿಸಿ

ಒಂದು ವರ್ಷದ ಮಗುವಿನಲ್ಲಿ ಸೋಂಕು

ಒಂದು ವರ್ಷದ ಮಗುವಿನಲ್ಲಿ ಸೋಂಕು

ಈವರೆಗೂ ಜಿಂದಾಲ್ ನೌಕರರು ಹಾಗೂ ಅವರ ಕುಟುಂಬ ಸದಸ್ಯರು ಸೇರಿ ಒಟ್ಟು 272 ಜನರಿಗೆ ತಗುಲಿದೆ. ಕಳೆದ ಎರಡು ದಿನಗಳ ಹಿಂದೆ ನಾಲ್ಕು ತಿಂಗಳ ಮಗು ಹಾಗೂ ಒಂದು ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ಈಗ ಕೇವಲ ಒಂದು ತಿಂಗಳ ಹೆಣ್ಣು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಂದಾಲ್ ಕಾರ್ಖಾನೆಯು ಬಳ್ಳಾರಿ ಜಿಲ್ಲೆಗೆ ಮಾಹಾಮಾರಿಯಾಗಿ ಕಾಡುತ್ತಿದೆ.

ಜಿಂದಾಲ್ ನೌಕರರ ಕುಟುಂಬದ ಸದಸ್ಯರಿಗೂ ಸೋಂಕು

ಜಿಂದಾಲ್ ನೌಕರರ ಕುಟುಂಬದ ಸದಸ್ಯರಿಗೂ ಸೋಂಕು

ಜಿಲ್ಲೆಯ ಹೊಸಪೇಟೆ, ಸಂಡೂರು, ತೋರಣಗಲ್, ಬಳ್ಳಾರಿ, ಕುಡಿತಿನಿ ಹೀಗೆ ಜಿಲ್ಲೆಯ ನಾನಾ ಭಾಗಗಳಲ್ಲಿ ಜಿಂದಾಲ್ ನೌಕರರು ವಾಸವಾಗಿದ್ದಾರೆ. ಜಿಂದಾಲ್ ನಲ್ಲಿ ಸೋಂಕು ಕಾಣಿಸಿಕೊಂಡು ಅದು ಈಗ ಅವರ ಕುಟುಂಬದ ಸದಸ್ಯರಿಗೂ ಸೋಂಕು ತಗಲುತ್ತಿದ್ದು, ಜಿಂದಾಲ್ ನೌಕರರನ್ನು ಕಂಡರೆ ಜನರಿಗೆ ಒಂದು ರೀತಿಯಲ್ಲಿ ಹೆದರಿಕೆ ಶುರುವಾಗಿದೆ.

ಬಳ್ಳಾರಿ; ಜಿಂದಾಲ್ ಕಾರ್ಖಾನೆಗೆ ಸುತ್ತಲಿನ ಗ್ರಾಮಗಳ ಸಂಪರ್ಕ ಕಡಿತಬಳ್ಳಾರಿ; ಜಿಂದಾಲ್ ಕಾರ್ಖಾನೆಗೆ ಸುತ್ತಲಿನ ಗ್ರಾಮಗಳ ಸಂಪರ್ಕ ಕಡಿತ

ಜಿಂದಾಲ್ ನೌಕರರನ್ನು ಕಂಡರೆ ಮೈಲು ದೂರ ಓಟ

ಜಿಂದಾಲ್ ನೌಕರರನ್ನು ಕಂಡರೆ ಮೈಲು ದೂರ ಓಟ

ಮತ್ತೊಂದು ಕಡೆ ಜಿಂದಾಲ್ ನೌಕರರು ವಾಸ ಇರುವ ಮನೆ ಸುತ್ತಮುತ್ತಲಿನ ಜನರಲ್ಲಿ ಒಂದು ರೀತಿಯ ಆತಂಕ ಎದುರಾಗಿದೆ. ಕಾರಣ ಜಿಂದಾಲ್ ನೌಕರರ ಕುಟುಂಬಕ್ಕೆ ಈಗ ಸೋಂಕು ಹರಡುತ್ತಿದೆ. ಒಂದು ವರ್ಷದ ಮಗು, ಒಂದು ತಿಂಗಳ ಮಗು ಹೀಗೆ ಮನೆ ಮಂದಿಗೆಲ್ಲಾ ಸೋಂಕು ತಗಲುತ್ತಿದ್ದು, ಜನರಿಗೆ ಜಿಂದಾಲ್ ನೌಕರರನ್ನು ಕಂಡರೆ ಮೈಲು ದೂರ ಓಡುವ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿ ಆದೇಶ ಗಾಳಿಗೆ ತೂರಿದ ಕಾರ್ಖಾನೆ

ಜಿಲ್ಲಾಧಿಕಾರಿ ಆದೇಶ ಗಾಳಿಗೆ ತೂರಿದ ಕಾರ್ಖಾನೆ

ಈ ಪರಿಸ್ಥಿತಿಗೆ ಜಿಂದಾಲ್ ಮಾಡಿದ ತಪ್ಪು ಕಾರಣವಾಗಿದೆ. ಜಿಲ್ಲಾಡಳಿತ ಮಾಡಿದ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವುದಾಗಿ ಹೇಳುವ ಜಿಂದಾಲ್, ಜಿಲ್ಲಾಧಿಕಾರಿ ಆದೇಶ ಗಾಳಿಗೆ ತೂರಿ ತನ್ನ ನೌಕರರ ಪ್ರಾಣದ ಜೊತೆಯಲ್ಲಿ ಚೆಲ್ಲಾಟ ಆಡಿದೆ. ಜಿಂದಾಲ್ ಪರಿಸ್ಥಿತಿ ಈಗ ಹೇಗಾಗಿದೆ ಅಂದರೆ ಎಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಗಿದೆ.

English summary
Coronavirus infection in the state is increasing day by day, same time the number of coronavirus infections in the Jindal Factory at Ballary continues to be high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X