ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಕೊರೊನಾ: ಹಂಪಿಯಲ್ಲಿ ಪ್ರವಾಸಿಗರ ಪರಿಶೀಲನೆ

|
Google Oneindia Kannada News

ಹೊಸಪೇಟೆ, ಮಾರ್ಚ್ 3: ಕೊರೊನಾ ವೈರಸ್ ಕರ್ನಾಟಕಕ್ಕೂ ಹಬ್ಬಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣದ ನಂತರ ಅನೇಕ ಕಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹಂಪಿ ವೀಕ್ಷಣೆಗೆ ಬರುವ ಪ್ರವಾಸಿಗರ ಆರೋಗ್ಯ ಪರಿಶೀಲನೆ ಮಾಡಲಾಗುತ್ತಿದೆ. ವಿದೇಶಗಳಿಂದ ಹಂಪಿ ನೋಡಲು ಆಗಮಿಸುವ ಪ್ರವಾಸಿಗರು ಅನೇಕರು ಇದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ, ಅವರು ಎಲ್ಲಿಂದ ಬಂದರು, ಹಂಪಿಯಲ್ಲಿ ಎಷ್ಟು ದಿನ ಇರುತ್ತಾರೆ ಹೀಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿ

Coronavirus Health Check Up In Hampi

ಕೆಮ್ಮು, ಶೀತ, ಜ್ವರ ಹೀಗೆ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದರೆ, ಅಂತವರನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಹಂಪಿ ನೋಡಲು ಬರುತ್ತಿರುವ ಪ್ರವಾಸಿಗರನ್ನು ಡಾಕ್ಟರ್ ವಿನೋದ್ ಹಾಗೂ ಅವರ ಸಿಬ್ಬಂದಿ ಗಮನಿಸುತ್ತಿದ್ದಾರೆ.

ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಬರುವುದಿಲ್ಲವೇ?ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಬರುವುದಿಲ್ಲವೇ?

ಪ್ರತಿ ವರ್ಷ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಹಂಪಿ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು ಇರುತ್ತಿತ್ತು. ಆದರೆ, ಈ ಬಾರಿ ಪ್ರವಾಸಿಗರು ಕಡಿಮೆ ಆಗಿದ್ದಾರೆ. ಪ್ರವಾಸಿಗರ ಸಂಖ್ಯೆಯ ಇಳಿಮುಖಕ್ಕೆ ಕೊರೊನಾ ವೈರಸ್ ಪ್ರಮುಖ ಕಾರಣವಾಗಿದೆ.

English summary
Coronavirus: Health check up conducted for tourist in Hampi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X