ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ನಿಯಂತ್ರಣಕ್ಕೆ ಈ ಗ್ರಾಮ ಪಂಚಾಯಿತಿ ಮಾದರಿ!

By ಭೀಮರಾಜ.ಯು ವಿಜಯನಗರ
|
Google Oneindia Kannada News

ವಿಜಯನಗರ, ಜೂನ್ 02; ಕೋವಿಡ್ ಗ್ರಾಮೀಣ ಭಾಗದಲ್ಲಿ ಹಬ್ಬಿದೆ. ಸೋಂಕಿನ ನಿಯಂತ್ರಣಕ್ಕೆ ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯಿತಿ ಕಾರ್ಯ ಬಹುಮುಖ್ಯವಾಗಿದೆ. ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಮಾದರಿಯಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ‌ ಗ್ರಾಮ ಪಂಚಾಯಿತಿ ಕೋವಿಡ್ ನಿಯಂತ್ರಣಕ್ಕೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಿಬ್ಬಂದಿ, ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಹಲವು ಕ್ರಮ ಕೈಗೊಂಡಿದ್ದಾರೆ.

ವಿಜಯನಗರ; ಕೋವಿಡ್ ಕೇರ್‌ ಸೆಂಟರ್‌ಗೆ ಬರಲು ಒಪ್ಪದ ಗ್ರಾಮಸ್ಥರು ವಿಜಯನಗರ; ಕೋವಿಡ್ ಕೇರ್‌ ಸೆಂಟರ್‌ಗೆ ಬರಲು ಒಪ್ಪದ ಗ್ರಾಮಸ್ಥರು

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಗೇನಗಳ್ಳಿ, ಬೆನಕಾಪುರ, ಕಳ್ಳಿರಾಂಪುರ, ಬಸವನದುರ್ಗ ಗ್ರಾಮಗಳು ಬರುತ್ತದೆ. ಈ ಎಲ್ಲಾ ಗ್ರಾಮದೊಳಗೆ ಪ್ರವೇಶಿಸುವ ರಸ್ತೆಗಳಿಗೆ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು, ಸಿಬ್ಬಂದಿಯನ್ನ 24/7 ಗಸ್ತಿಗೆ ನಿಯೋಜನೆ ಮಾಡಲಾಗಿದೆ. ಹೊರಗಿನಿಂದ ಬರುವವರಿಗೆ ಕಡ್ಡಾಯವಾಗಿ ತಪಾಸಣೆ ಮಾಡಿ ಮತ್ತು ಸ್ಯಾನಿಟೈಸರ್ ಸಿಂಪಡಿಸಿ ಒಳ ಬಿಡಲಾಗುತ್ತದೆ.

ಹೊಸಪೇಟೆ; ಕೋವಿಡ್ ಪರಿಸ್ಥಿತಿ ನಡುವೆ ತೆರಿಗೆ ಹೆಚ್ಚಳದ ಬಿಸಿ ಹೊಸಪೇಟೆ; ಕೋವಿಡ್ ಪರಿಸ್ಥಿತಿ ನಡುವೆ ತೆರಿಗೆ ಹೆಚ್ಚಳದ ಬಿಸಿ

ಅನಾವಶ್ಯಕವಾಗಿ ಸಂಚಾರ ನಡೆಸುವ ವ್ಯಕ್ತಿಗಳನ್ನು ಗ್ರಾಮದೊಳಕ್ಕೆ ಬಿಡದೇ ವಾಪಸ್ ಕಳಿಸಲಾಗುತ್ತಿದೆ. ಗ್ರಾಮಕ್ಕೆ ಪ್ರವೇಶವಿರುವ ನಾಲ್ಕು ದಿಕ್ಕುಗಳಲ್ಲಿ ಚೆಕ್ ಪೋಸ್ಟ್ ಇದೆ. ಪ್ರತಿಯೊಂದು ವಾಹನ ಮತ್ತು ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದೆ.

ವಿಜಯನಗರ; ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ! ವಿಜಯನಗರ; ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ!

ಒಂದೇ ಒಂದು ಕೋವಿಡ್ ಪ್ರಕರಣವಿಲ್ಲ

ಒಂದೇ ಒಂದು ಕೋವಿಡ್ ಪ್ರಕರಣವಿಲ್ಲ

ನಾಗೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ಇದುವರೆಗೆ ಒಂದೇ ಒಂದು ಪಾಸಿಟಿವ್ ಕೇಸ್ ಕಂಡು ಬಂದಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೊವೀಡ್‌ನಿಂದ ಯಾವುದೇ ಸಾವುಗಳು ಸಹ ಸಂಭವಿಸಿಲ್ಲ. 28 ಪಾಸಿಟಿವ್ ಕೇಸ್‌ಗಳಲ್ಲಿ ಈಗ ಸಕ್ರಿಯ ಪ್ರಕರಣ 10-12 ಇದೆ. ಸೋಂಕು ಹರಡುವಿಕೆ ತಡೆಯಲು ಪಂಚಾಯಿತಿ ಎಲ್ಲಾ ಕ್ರಮ ಕೈಗೊಂಡಿದೆ.

ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ

ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ

ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಓ ಹೊರ ಹೋಗಿ ಬಂದರೆ ಅವರನ್ನು ಸಹ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಕ್ರಮಗಳಿಗೆ ಗ್ರಾಮಗಳ ಜನರು ಸಹ ಸಹಕಾರ ನೀಡುತ್ತಿದ್ದು, ಗ್ರಾಮಗಳನ್ನು ಕೋವಿಡ್ ಮುಕ್ತವಾಗಿಸಲು ಕೈ ಜೋಡಿಸಿದ್ದಾರೆ.

ಪಂಚಾಯಿತಿ ಅಧ್ಯಕ್ಷರ ಮಾತು

ಪಂಚಾಯಿತಿ ಅಧ್ಯಕ್ಷರ ಮಾತು

"ನಾವು ಪ್ರತಿ ಮನೆಗಳಿಗೆ ಹೋಗಿ ಹೊರಗಡೆ ಹೋಗುವಾಗ ಎಲ್ಲರು ಮಾಸ್ಕ್ ಧರಿಸಿಕೊಂಡು ಹೋಗಿ ಎಂದು ಜಾಗೃತಿ ಮೂಡಿಸಿದ್ದೇವೆ. ಸುಮ್ಮನೆ ಹೊರಗಡೆ ಓಡಾಡಬೇಡಿ, ಮನೆಯಲ್ಲೇ ಇರಿ ಎಂದು ತಿಳುವಳಿಕೆ ಹೇಳಿದ್ದೇವೆ. ಬೇರೆ ಊರಿನವರು ಅನಗತ್ಯವಾಗಿ ಬರಬಾರದು ಎಂದು ಚೆಕ್ ಪೋಸ್ಟ್ ಮಾಡಿದ್ದೇವೆ" ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಹೇಳಿದ್ದಾರೆ.

ವಾಹನದ, ಮೊಬೈಲ್ ನಂಬರ್ ಪಡೆಯುತ್ತೇವೆ

ವಾಹನದ, ಮೊಬೈಲ್ ನಂಬರ್ ಪಡೆಯುತ್ತೇವೆ

"ನಾಗೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಬರುವವರನ್ನು ತಡೆದು ಯಾಕೆ, ಏನು ಕೆಲಸ? ಇದೆ ಅಂತ ವಿಚಾರಣೆ ಮಾಡಲಾಗುತ್ತಿದೆ. ಅನಗತ್ಯವಾಗಿ ಬಂದವರನ್ನು ಒಳಗೆ ಬಿಡುವುದಿಲ್ಲ. ಮಾಸ್ಕ್ ಇಲ್ಲದೆ ಬಂದವರಿಗೆ ಮಾಸ್ಕ್ ನೀಡಲಾಗುತ್ತದೆ. ಗ್ರಾಮಕ್ಕೆ ಬರುವ ಪ್ರತಿ ವಾಹನದ ನಂಬರ್, ವ್ಯಕ್ತಿಗಳ ಮೊಬೈಲ್ ನಂಬರ್ ಪಡೆಯುತ್ತಿದ್ದೇವೆ" ಎಂದು ಚೆಕ್ ಪೋಸ್ಟ್ ಸಿಬ್ಬಂದಿ ಅನ್ವರ್ ಹೇಳಿದ್ದಾರೆ.

English summary
Vijayanagara district Hospet taluk Nagenahalli gram panchayat model to others to control spread of Coronavirus. Four village come under the panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X