ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ರಾಜಕೀಯ; ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಬಿಜೆಪಿಗೆ?

|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್ 27 : ಬಳ್ಳಾರಿ ರಾಜಕೀಯದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಕಾಂಗ್ರೆಸ್ ನಾಯಕ, ಮಾಜಿ ಶಾಸಕರೊಬ್ಬರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ಕುರಿತು ಮಾತುಕತೆಯೂ ಆರಂಭವಾಗಿದೆ.

ಹೌದು, ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಬಿಜೆಪಿಯತ್ತ ಮುಖ ಮಾಡಿದ್ದಾರೆ. 2018ರ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಕ್ಷದ ವೇದಿಕೆಯಲ್ಲಿ ಅವರು ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈಗ ಅವರು ಪಕ್ಷ ತೊರೆಯಲು ಮುಂದಾಗಿದ್ದಾರೆ?.

"ನಮ್ಮ ಪಕ್ಷದಲ್ಲಿ ಸಿಗೋ ಮರ್ಯಾದೆ ಬೇರೆ ಕಡೆ ಸಿಗುತ್ತಾ?" ಅತೃಪ್ತರಿಗೆ ಅನಿಲ್ ಲಾಡ್ ಪ್ರಶ್ನೆ

ಅನಿಲ್ ಲಾಡ್ ತಮ್ಮ ಆಪ್ತರಿಗೆ, ಕಾರ್ಯಕರ್ತರಿಗೆ ಈಗಾಗಲೇ ಬಿಜೆಪಿ ಸೇರುವ ಕುರಿತು ಅಭಿಪ್ರಾಯ ತಿಳಿಸುವಂತೆ ಸಂದೇಶ ಕಳಿಸಿದ್ದಾರೆ. ಮೊಳಕಾಲ್ಮೂರು ಸಂಸದ ಮತ್ತು ಸಚಿವ ಬಿ. ಶ್ರೀರಾಮುಲು ಜೊತೆ ಈ ಕುರಿತು ಅನಿಲ್ ಲಾಡ್ ಮಾತುಕತೆ ನಡೆಸಿದ್ದಾರೆ.

ಶ್ರೀರಾಮುಲು ಒಬ್ಬ ದುರ್ಬಲ ನಾಯಕ: ಅನಿಲ್ ಲಾಡ್ ವಾಗ್ದಾಳಿಶ್ರೀರಾಮುಲು ಒಬ್ಬ ದುರ್ಬಲ ನಾಯಕ: ಅನಿಲ್ ಲಾಡ್ ವಾಗ್ದಾಳಿ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಲು ಅನಿಲ್ ಲಾಡ್ ಪ್ರಯತ್ನ ನಡೆಸುತ್ತಿದ್ದಾರೆ. ಯಡಿಯೂರಪ್ಪ ಒಪ್ಪಿಗೆ ಪಡೆದ ಬಳಿಕ ಬಿಜೆಪಿ ಸೇರುವ ಕುರಿತು ಅವರು ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ.

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರ್ಪಡೆಗೆ ನಿರ್ಧಾರ.. ಸಚಿವ ಶ್ರೀರಾಮುಲು ಜತೆ ಈಗಾಗಲೇ ಮಾತುಕತೆ ನಡೆಸಿರುವ ಅನಿಲ್ ಲಾಡ್. ಶೀಘ್ರದಲ್ಲೇ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಬಿಜೆಪಿ ಸೇರಬೇಕು ಎಂದು ಕೊಂಡಿದ್ದೇವೆ

ಬಿಜೆಪಿ ಸೇರಬೇಕು ಎಂದು ಕೊಂಡಿದ್ದೇವೆ

ಮಾಧ್ಯಮಗಳ ಜೊತೆ ಮಾತನಾಡಿದ ಅನಿಲ್ ಲಾಡ್, "ಬಿಜೆಪಿ ಸೇರಿ ಪಕ್ಷ ಸಂಘಟನೆ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ, ಯಾರಿಗೂ ಹೇಳದೆ ಬೆನ್ನಿಗೆ ಚೂರಿ ಹಾಕಿ ಹೋಗುವುದಿಲ್ಲ. ಕಾರ್ಯಕರ್ತರ ಜೊತೆ ಮಾತನಾಡಿಯೇ ಹೋಗುವೆ" ಎಂದು ಹೇಳಿದರು.

ಅಭಿಪ್ರಾಯವನ್ನು ತಿಳಿಸಿ

ಅಭಿಪ್ರಾಯವನ್ನು ತಿಳಿಸಿ

ಅನಿಲ್ ಲಾಡ್ ಕಾರ್ಯಕರ್ತರು, ಅಭಿಮಾನಿಗಳು, ಆಪ್ತರಿಗೆ ಸಂದೇಶಗಳನ್ನು ಕಳಿಸಿದ್ದು ಬಿಜೆಪಿ ಸೇರುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿದ್ದಾರೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಜೊತೆಗೂ ಅವರು ಮಾತುಕತೆ ನಡೆಸಿದ್ದಾರೆ. ಸೋಮವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡುವ ನಿರೀಕ್ಷೆ ಇದೆ.

ಸಿದ್ದರಾಮಯ್ಯಗೆ ತಿಳಿಸಿದ್ದೇನೆ

ಸಿದ್ದರಾಮಯ್ಯಗೆ ತಿಳಿಸಿದ್ದೇನೆ

"ನಾನು ಬಿಜೆಪಿ ಸೇರುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಿಳಿಸಿದ್ದೇನೆ. ರಾಹುಲ್ ಮತ್ತು ಸೋನಿಯಾ ಗಾಂಧಿಯನ್ನು ಭೇಟಿ ಮಾಡುತ್ತೇನೆ. ನನಗೇನು ಪಕ್ಷದ ಬಗ್ಗೆ ಅಸಮಾಧಾನವಿಲ್ಲ" ಎಂದು ಅನಿಲ್ ಲಾಡ್ ಸ್ಪಷ್ಟಪಡಿಸಿದರು.

ಬೇಷರತ್ತಾಗಿ ಸೇರುತ್ತಿದ್ದೇನೆ

ಬೇಷರತ್ತಾಗಿ ಸೇರುತ್ತಿದ್ದೇನೆ

"ನನಗೆ ಬಿಜೆಪಿ ಸೇರಿದ ತಕ್ಷಣ ಸ್ಥಾನಮಾನ ಸಿಗಲಿದೆ ಎಂಬ ನಿರೀಕ್ಷೆ ಇಲ್ಲ. ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷ ಸಂಘಟನೆ ಮಾಡಲು ಬಿಜೆಪಿ ಸೇರುತ್ತಿದ್ದೇನೆ. ಯಾವುದೇ ಷರತ್ತನ್ನು ನಾನು ಹಾಕುವುದಿಲ್ಲ. ಬೇಷರತ್ತಾಗಿ ಪಕ್ಷ ಸೇರಲಿದ್ದೇನೆ" ಎಂದು ಅನಿಲ್ ಲಾಡ್ ಹೇಳಿದರು.

2018ರ ಚುನಾವಣೆ ಸೋಲು

2018ರ ಚುನಾವಣೆ ಸೋಲು

2018ರ ವಿಧಾನಸಭೆ ಚುನಾವಣೆಯಲ್ಲಿ ಅನಿಲ್ ಲಾಡ್ ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. 60,434 ಮತಗಳನ್ನು ಪಡೆದಿದ್ದ ಅವರು 76,589 ಮತಗಳನ್ನು ಪಡೆದಿದ್ದ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಸೋಲು ಕಂಡಿದ್ದರು.

English summary
Former MLA and Congress leader Anil Lad may join BJP. Anil Lad defeated in 2018 assembly election from Ballari City assembly seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X