ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜೀನಾಮೆ ನೀಡಿ ಕಾಣೆ ಆಗಿದ್ದ ಶಾಸಕ ಆನಂದ್ ಸಿಂಗ್ ದಿಢೀರ್ ಪ್ರತ್ಯಕ್ಷ!

|
Google Oneindia Kannada News

ಬೆಂಗಳೂರು, ಜುಲೈ 21: ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಪರ್ವಕ್ಕೆ ಶ್ರೀಕಾರ ಹಾಕಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ನಿನ್ನೆ ಧಿಡೀರ್ ಎಂದು ಹೊಸಪೇಟೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಮೊದಲಿಗೆ ಜುಲೈ 1 ರಂದು ರಾಜೀನಾಮೆ ನೀಡಿದ್ದ ಶಾಸಕ ಆನಂದ್ ಸಿಂಗ್, ಶಾಸಕರ ರಾಜೀನಾಮೆ ಪರ್ವ ಪ್ರಾರಂಭವಾದ ನಂತರ ಕ್ಷೇತ್ರದಿಂದ ದಿಢೀರ್ ಎಂದು ಕಾಣೆ ಆಗಿದ್ದರು. ಆನಂದ್ ಸಿಂಗ್ ಅವರು ಅತೃಪ್ತರನ್ನು ಸೇರಿದ್ದಾರೆ, ಬಿಜೆಪಿಯ ವಶದಲ್ಲಿ ಪುಣೆಯಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು.

ಶಾಸಕರನ್ನು ಹುಡುಕಿಕೊಡಿ: ಪೊಲೀಸ್ ಠಾಣೆಗೆ ಕಾರ್ಯಕರ್ತರ ದೂರುಶಾಸಕರನ್ನು ಹುಡುಕಿಕೊಡಿ: ಪೊಲೀಸ್ ಠಾಣೆಗೆ ಕಾರ್ಯಕರ್ತರ ದೂರು

ಆದರೆ ನಿನ್ನೆ ಏಕಾ-ಏಕಿ ಹೊಸಪೇಟೆಗೆ ಬಂದ ಆನಂದ್ ಸಿಂಗ್ ಅವರು, ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗಳೊಟ್ಟಿಗೆ ಮಾತುಕತೆ ನಡೆಸಿದರು.

Congress dissident MLA Anand Singh suddenly seen in hospete

ಶಾಸಕ ಆನಂದ್ ಸಿಂಗ್ ಅವರು ಕಾಣೆ ಆಗಿದ್ದಾರೆ, ಹುಡುಕಿಕೊಡಿ ಎಂದು ಕೆಲವರು ದೂರು ನೀಡಿದ್ದ ಕಾರಣ ಆನಂದ್ ಸಿಂಗ್ ಅವರು ನಿನ್ನೆ ಪೊಲೀಸ್ ಠಾಣೆಗೆ ತೆರಳಿ ಮಾತುಕತೆ ನಡೆಸಿದರು.

ಆನಂದ್ ಸಿಂಗ್ ರಾಜೀನಾಮೆ: ಕಾಂಗ್ರೆಸ್‌ಗೆ ಕೈ ಕೊಡಲಿದ್ದಾರೆ ಐದು ಶಾಸಕರು? ಆನಂದ್ ಸಿಂಗ್ ರಾಜೀನಾಮೆ: ಕಾಂಗ್ರೆಸ್‌ಗೆ ಕೈ ಕೊಡಲಿದ್ದಾರೆ ಐದು ಶಾಸಕರು?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿಯೂ ಹೋಗಿರಲಿಲ್ಲ, ನಮ್ಮ ತಂದೆ ಪೃಥ್ವಿರಾಜ ಸಿಂಗ್ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲು ಮಾಡಿಸಲಾಗಿತ್ತು, ನಾನು ಅಲ್ಲಿಯೇ ಇದ್ದೆ ಎಂದು ದಾಖಲೆ ಸಹ ತೋರಿಸಿದರು.

ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆಗೆ ಕಾರಣವೇನು? ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆಗೆ ಕಾರಣವೇನು?

ಜುಲೈ 1 ನೇ ತಾರೀಖು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದರು. ಜಿಂದಾಲ್‌ಗೆ ಭೂಮಿ ಮಾರಾಟ ಮಾಡುತ್ತಿರುವ ಸಮ್ಮಿಶ್ರ ಸರ್ಕಾರದ ಕ್ರಮವನ್ನು ಖಂಡಿಸಿ ರಾಜೀನಾಮೆ ನೀಡುತ್ತಿರುವುದಾಗಿ ಆನಂದ್ ಸಿಂಗ್ ಹೇಳಿದ್ದರು.

English summary
Congress dissident MLA Anand Singh who already submit resignation has been seen in Hospet in yesterday, he visited police station and talked with officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X