ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಗ್ನ ಪತ್ರಿಕೆಯಲ್ಲಿ ಕೇಂದ್ರದ ಯೋಜನೆ; ಫೋಟೋ ವೈರಲ್

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜನವರಿ 22: ಸಾಮಾನ್ಯವಾಗಿ ಲಗ್ನ ಪತ್ರಿಕೆಗಳನ್ನು ವಿಭಿನ್ನವಾಗಿ ಪ್ರಿಂಟ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಿಂಟ್ ಮಾಡುವ ಮೂಲಕ ಭಾರೀ ಸುದ್ದಿಗೆ ಗ್ರಾಸವಾಗಿದ್ದಾರೆ.

ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ "ಬೇಟಿ ಬಚಾವೋ ಬೇಟಿ ಪಾಡಾವೋ' ಎನ್ನುವ ಸ್ಲೋಗನ್ ಪ್ರಿಂಟ್ ಮಾಡಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಿವಾಸಿಗಳಾದ ಶ್ರೀ ಕೃಷ್ಣಾರಾವ್ ಮತ್ತು ಜ್ಯೋತಿ ಕುಲಕರ್ಣಿ ಎಂಬುವವರು ತಮ್ಮ ಮಗಳಾದ ಅನುಷಾ ಅವರ ಮದುವೆಯನ್ನು ಇದೇ ಜನವರಿ 27 ರಂದು ಮಾಡಲಿದ್ದಾರೆ.

ನಕಲಿ ಪತ್ರದ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಆನಂದ್ ಸಿಂಗ್ನಕಲಿ ಪತ್ರದ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಆನಂದ್ ಸಿಂಗ್

ಆದ ಕಾರಣ ತಮ್ಮ ಮುದ್ದಿನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ "ಬೇಟಿ ಬಚಾವೋ ಬೇಟಿ ಪಡಾವೋ' ಹಿಂಬರಹ ಪ್ರಿಂಟ್ ಮಾಡಿಸಿದ್ದು, ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

Central Project In Marriage Invitation Card, Photo Viral

ಇದೇ ದಿನಾಂಕ 27 ರಂದು ಮಗಳ ಮದುವೆಯನ್ನು ಬೆಳಗಾವಿ ಮೂಲದ ನಿತಿನ್ ಎಂಬವವರ ಜೊತೆ ನಡೆಯಲಿದ್ದು, ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ನಿಶ್ಚಯಿಸಿದ್ದಾರೆ.

ಪ್ರೀತಿಸಿದವಳೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದಳು; ಪ್ರೇಮಿ ಸಾವುಪ್ರೀತಿಸಿದವಳೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದಳು; ಪ್ರೇಮಿ ಸಾವು

ಇನ್ನು ಈ ಇಬ್ಬರೂ ಬದಂಪತಿಗಳಿಗೆ ಹೆಣ್ಣು ಮಕ್ಕಳು ಅಂದರೆ ತುಂಬಾನೇ ಇಷ್ಟ ಅಂತೆ. ಹೀಗಾಗಿ ತಮ್ಮ ಮಗಳನ್ನು ಬೆಳೆಸಿದ ರೀತಿಯಲ್ಲಿ ಬೇರೆಯವರು ಬೆಳೆಯಬೇಕು ಎನ್ನುವ ಉದ್ದೇಶದಿಂದ ಈ ರೀತಿಯಲ್ಲಿ ಲಗ್ನ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿಸಿದ್ದಾರಂತೆ.

English summary
The central governments ambitious project to print in the daughters marriage Invitation card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X