ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಅಪಘಾತ ಪ್ರಕರಣ; ಸತ್ಯ ಬಿಚ್ಚಿಟ್ಟಿತೇ ಸಿಸಿ ಟಿ.ವಿ ದೃಶ್ಯಾವಳಿ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

Recommended Video

R ಅಶೋಕ್ ಪುತ್ರನ ಬಗ್ಗೆ ಸತ್ಯ ಬಿಚ್ಚಿಟ್ಟಿತೇ ಸಿಸಿ ಟಿ.ವಿ ದೃಶ್ಯಾವಳಿ | Oneindia Kannada

ಬಳ್ಳಾರಿ, ಫೆಬ್ರವರಿ 15: ಬಳ್ಳಾರಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಈ ಕುರಿತ ವಿಡಿಯೋವೊಂದು ಲಭ್ಯವಾಗಿದ್ದು, ಅಪಘಾತದಲ್ಲಿ ಗಾಯಗೊಂಡ ಸಚಿವ ಆರ್ ಅಶೋಕ್ ಮಗ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂಬುದನ್ನು ಸಾಕ್ಷೀಕರಿಸುವಂತೆ ಈ ವಿಡಿಯೋ ಇದೆ.

ನಿನ್ನೆಯಷ್ಟೇ ಶಾಸಕ ಭೀಮಾನಾಯ್ಕ್ ಮರಿಯಮ್ಮನಹಳ್ಳಿಯಲ್ಲಿರುವ ಮೃತ ರವಿ ನಾಯ್ಕ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳುವ ಸಂದರ್ಭ ರವಿ ನಾಯ್ಕ್ ಸೋದರತ್ತೆ ಭಾರತಿ ಅಪಘಾತ ಪ್ರಕರಣದ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಇದೀಗ ಆ ಹೇಳಿಕೆಯನ್ನು ಸಾಕ್ಷೀಕರಿಸುವಂತೆ ಕೆಲವು ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

Oneindia Kannada on Twitter

ಬಳ್ಳಾರಿ ಅಪಘಾತ ಪ್ರಕರಣ; ಸತ್ಯ ಬಿಚ್ಚಿಟ್ಟಿತೇ ಸಿಸಿ ಟಿ.ವಿ ದೃಶ್ಯಾವಳಿ #Bellaryaccident | #Rashok | #CCTV https://t.co/5YuZTWRowV

ಬಳ್ಳಾರಿ ಅಪಘಾತ ಪ್ರಕರಣ: ರವಿ ಸೋದರತ್ತೆಯಿಂದ ಮತ್ತೊಂದು ಮಾಹಿತಿಬಳ್ಳಾರಿ ಅಪಘಾತ ಪ್ರಕರಣ: ರವಿ ಸೋದರತ್ತೆಯಿಂದ ಮತ್ತೊಂದು ಮಾಹಿತಿ

ಜಿಲ್ಲಾಸ್ಪತ್ರೆಗೆ ಹೋಗುವ ಮುನ್ನ ಖಾಸಗಿ ಆಸ್ಪತ್ರೆಗೆ ಭೇಟಿ

ಜಿಲ್ಲಾಸ್ಪತ್ರೆಗೆ ಹೋಗುವ ಮುನ್ನ ಖಾಸಗಿ ಆಸ್ಪತ್ರೆಗೆ ಭೇಟಿ

ಮರಿಯಮ್ಮನಹಳ್ಳಿ ಬಳಿ ಅಪಘಾತವಾಗುತ್ತಿದ್ದಂತೆ ಆ ಕಾರಿನಲ್ಲಿದ್ದವರು ತಕ್ಷಣವೇ ಜೀಪ್ ಹತ್ತಿ ಹೋಗಿರುವುದಾಗಿ ತಿಳಿದುಬಂದಿದೆ. ಅಪಘಾತದಲ್ಲಿ ರವಿ ನಾಯ್ಕ ಸಾವನ್ನಪ್ಪಿದ್ದನ್ನೂ ಲೆಕ್ಕಸದೆ ಜೀಪ್ ಹತ್ತಿ ಹೊರಟಿದ್ದಾರೆ. ತಕ್ಷಣವೇ ಅಲ್ಲಿನ ಸಂಜೀವಿನ ಖಾಸಗಿ ಆಸ್ಪತ್ರೆಗೂ ತೆರಳಿರುವುದು ತಿಳಿದುಬಂದಿದೆ. ಆದರೆ ಆಸ್ಪತ್ರೆಗೆ ನೇರ ಹೋಗದೇ ಹಿಂದಿನ ಬಾಗಿಲಿನಿಂದ ತೆರಳಿದ್ದಾರೆ.

ಹೊರಗೇ ಚಿಕಿತ್ಸೆ ನೀಡಿದ ವೈದ್ಯ

ಹೊರಗೇ ಚಿಕಿತ್ಸೆ ನೀಡಿದ ವೈದ್ಯ

ಆದರೆ ಆಸ್ಪತ್ರೆ ಒಳಗೆ ಬರದೆ ಹೊರಗೇ ಅವರಿಗೆ ಚಿಕಿತ್ಸೆ ನೀಡಲಾಗಿದೆ. ವೈದ್ಯ ಪೆರುಮಾಳ್ ಹೊರಗೇ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಿಂದ ಕೆಲವೇ ಕ್ಷಣಗಳಲ್ಲಿ ವಾಪಸ್ ಆಗಿದ್ದು ಕೂಡ ವಿಡಿಯೋದಿಂದ ತಿಳಿದುಬಂದಿದೆ. ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ; ಶಾಸಕ ಭೀಮಾ ನಾಯ್ಕಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ; ಶಾಸಕ ಭೀಮಾ ನಾಯ್ಕ

ರವಿನಾಯಕ್ ಸೋದರತ್ತೆ ಹೇಳಿದ್ದು ಸತ್ಯ?

ರವಿನಾಯಕ್ ಸೋದರತ್ತೆ ಹೇಳಿದ್ದು ಸತ್ಯ?

ರವಿನಾಯಕ್ ಸೋದರತ್ತೆ, ನಿನ್ನೆ ಅಶೋಕ್ ಮಗನ ಚಿತ್ರವನ್ನು ತೋರಿಸಿದಾಗ, ತಾವು ಆತನನ್ನು ನೋಡಿರುವುದಾಗಿ ತಿಳಿಸಿದ್ದರು. ಈಗ ಈ ದೃಶ್ಯಗಳು ಅದು ನಿಜ ಇರಬಹುದು ಎನ್ನುವುದನ್ನು ಹೇಳುತ್ತಿವೆ. ಭಾರತಿ ಅವರು ಹೇಳಿದ ಸಮಯ, ಸಿಸಿ ಟಿವಿಯಲ್ಲಿರುವ ಸಮಯ ಎರಡು ಒಂದೇ ಆಗಿದೆ. 3.50ಕ್ಕೆ ಗಾಯಾಳುಗಳು ಆಸ್ಪತ್ರೆಗೆ ಬಂದಿದ್ದರು ಎಂದು ಹೇಳಿದ್ದರು. ಅದೇ ಸಮಯಕ್ಕೆ ಗಾಯಾಳುಗಳು ಆಸ್ಪತ್ರೆಗೆ ಬಂದಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಇನ್ನು ನಾನೇ ನನ್ನ ಕೈ ಇಂದ ಸ್ಟ್ರೆಚ್ಚರ್ ಕೊಟ್ಟಿದ್ದೆ ಎಂದು ಭಾರತಿ ಹೇಳಿದ್ದು, ಅವರೇ ಸ್ಟ್ರೆಚ್ಚರ್ ತಳ್ಳಿಕೊಂಡು ಹೋಗಿರುವುದೂ ಕಂಡುಬಂದಿದೆ.

 ಅಪಘಾತವಾದಾಗ ಅವರನ್ನು ಸಾಗಿಸಿದ ವಾಹನ ಯಾರದ್ದು?

ಅಪಘಾತವಾದಾಗ ಅವರನ್ನು ಸಾಗಿಸಿದ ವಾಹನ ಯಾರದ್ದು?

ಅಪಘಾತ ನಡೆದಾಗ ತಕ್ಷಣವೇ ಕಾರಿನಲ್ಲಿದ್ದ ಗಾಯಾಳುಗಳನ್ನು ವಾಹನವೊಂದು ಸಾಗಿಸಿತು. ಆ ವಾಹನ ಯಾರದ್ದು, ಆ ವಾಹನವೂ ಅವರೆಗೇ ಸೇರಿದ್ದೇ? ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಗಾಯಾಳುಗಳನ್ನು ಸಾಗಿಸಿದ ವಾಹನ, ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾದ ವಾಹನ ಎರಡೂ ಒಂದೇ ಆಗಿದೆ. ಹಾಗಾಗಿ ಇನ್ನಷ್ಟು ಅನುಮಾನಗಳು ವ್ಯಕ್ತಗೊಂಡಿದೆ.

English summary
There is another turning point in the case of the Bellary car accident. A video of the hospital found where injured got treatment in local hospital,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X