ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರ

|
Google Oneindia Kannada News

Recommended Video

ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರ | Oneindia Kannada

ಬಳ್ಳಾರಿ, ಅಕ್ಟೋಬರ್ 17: ಡಿ.ಕೆ.ಶಿವಕುಮಾರ್ ಹಾಗೂ ಶ್ರೀರಾಮುಲು ನಡುವಿನ ಯುದ್ಧವೆಂದೇ ಪರಿಗಣಿಸಲಾಗುತ್ತಿರುವ ಬಳ್ಳಾರಿ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಮುಲು ಅವರ ಸಹೋದರಿ ಜೆ.ಶಾಂತಾ ಕಣಕ್ಕಿಳಿದಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ನಿನ್ನೆ ಶಾಂತಾ ಅವರು ನಾಮಪತ್ರ ಸಲ್ಲಿಸಿದ್ದು, ಅವರ ವಿರುದ್ಧ ವಿ.ಎಸ್.ಉಗ್ರಪ್ಪ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೆ.ಶಾಂತಾ ಅವರು ಈ ಮುಂಚೆ 2009 ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು.

ಶಿವಮೊಗ್ಗ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್ಶಿವಮೊಗ್ಗ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್

ಜೆ.ಶಾಂತಾ ಅವರು ಒಟ್ಟು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ಸಮಯ ತಿರಸ್ಕೃತವಾದರೆ ಮತ್ತೊಂದು ನಾಮಪತ್ರ ಊರ್ಜಿತವಾಗುತ್ತದೆ ಎಂಬ ಕಾರಣದಿಂದ ಬಹುತೇಕ ಅಭ್ಯರ್ಥಿಗಳು ಹೀಗೆ ಮಾಡುವುದುಂಟು.

ಬಳ್ಳಾರಿ ಬಿಜೆಪಿಗೆ ತಲೆನೋವಾಗಿರುವ ಅಭ್ಯರ್ಥಿ ಶ್ರೀನಿವಾಸ್‌ ಆಸ್ತಿ ವಿವರ ಬಳ್ಳಾರಿ ಬಿಜೆಪಿಗೆ ತಲೆನೋವಾಗಿರುವ ಅಭ್ಯರ್ಥಿ ಶ್ರೀನಿವಾಸ್‌ ಆಸ್ತಿ ವಿವರ

ನಾಮಪತ್ರದ ಜೊತೆಗೆ ಆಸ್ತಿ ಮಾಹಿತಿಯನ್ನೂ ಜೆ.ಶಾಂತಾ ಅವರು ಸಲ್ಲಿಸಿದ್ದು, ಗಣಿ ಧಣಿಗಳಲ್ಲಿ ಒಬ್ಬರಾದ ರಾಮುಲು ಅವರ ಸಹೋದರಿಯ ಆಸ್ತಿ ಎಷ್ಟಿದೆ ಎಂದು ಇಲ್ಲಿ ನೀಡಲಾಗಿದೆ.

ಶಾಂತಾ ಅವರ ಬಳಿ ಇರುವ ನಗದು

ಶಾಂತಾ ಅವರ ಬಳಿ ಇರುವ ನಗದು

* ಜೆ.ಶಾಂತಾ ಅವರು ಘೋಷಿಸಿಕೊಂಡಿರುವಂತೆ ಅವರ ವಾರ್ಷಿಕ ಆದಾಯ (2018-19) 90,000. ಶಾಂತಾ ಅವರ ಪತಿ ನಾಗರಾಜು ಅವರು ವಾರ್ಷಿಕ ಆದಾಯ 2,95,600.

* ಜೆ.ಶಾಂತಾ ಅವರ ಬಳಿ ಪ್ರಸ್ತುತ ಇರುವ ನಗದು ಹಣ 10,00,000. ಪತಿ ನಾಗರಾಜು ಅವರ ಬಳಿ 2.19 ಲಕ್ಷ ಇದ್ದರೆ. ಮಗಳು ಪ್ರಸನ್ನಿ ಲಕ್ಷ್ಮಿ ಬಳಿ 50 ಸಾವಿರ ಇದೆ.

ಬ್ಯಾಂಕ್‌ ಖಾತೆಗಳಲ್ಲಿರುವ ಹಣವೆಷ್ಟು?

ಬ್ಯಾಂಕ್‌ ಖಾತೆಗಳಲ್ಲಿರುವ ಹಣವೆಷ್ಟು?

* ಶಾಂತಾ ಅವರ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 1,17,489 ರೂಪಾಯಿ ಹಣ ಇದೆ. ಅವರ ಪತಿ ಅವರ ಖಾತೆಯಲ್ಲಿ 7.47 ಲಕ್ಷ ಹಣ ಇದ್ದರೆ, ಮಗಳು ಪ್ರಸನ್ನ ಲಕ್ಷ್ಮಿ ಖಾತೆಯಲ್ಲಿ 80,021 ರೂಪಾಯಿ ಹಣ ಇದೆ.

* ಶಾಂತಾ ಅವರು ವಿವಿಧ ಕಡೆ ಶೇರು, ಬಾಂಡು, ವಿಮೆಗಳಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತ ಕೇವಲ 52,249. ಆದರೆ ಪತಿ ನಾಗರಾಜು ಅವರು ಒಟ್ಟು 43,64,124 ರೂಪಾಯಿ ಹೂಡಿಕೆ ಮಾಡಿದ್ದಾರೆ. ಮಗಳ ಹೆಸರಲ್ಲಿ 1 ಲಕ್ಷ ಹೂಡಿಕೆ ಮಾಡಲಾಗಿದೆ.

ಶತಕೋಟಿ ಆಸ್ತಿ ಒಡತಿ ಅನಿತಾ ಕುಮಾರಸ್ವಾಮಿ ಎದುರಾಳಿಯ ಆಸ್ತಿ ಎಷ್ಟು?ಶತಕೋಟಿ ಆಸ್ತಿ ಒಡತಿ ಅನಿತಾ ಕುಮಾರಸ್ವಾಮಿ ಎದುರಾಳಿಯ ಆಸ್ತಿ ಎಷ್ಟು?

ಸ್ಕೋಡಾ ಕಾರಿಟ್ಟಿದ್ದಾರೆ ಶಾಂತಾ

ಸ್ಕೋಡಾ ಕಾರಿಟ್ಟಿದ್ದಾರೆ ಶಾಂತಾ

* ಶಾಂತಾ ಅವರ ಬಳಿ 2009ರ ಮಾಡೆಲ್‌ನ 17.24 ಲಕ್ಷ ಮೌಲ್ಯದ ಸ್ಕೋಡಾ ಕಾರಿದೆ. ಪತಿ ನಾಗರಾಜು ಅವರು ಇದೇ ವರ್ಷದಲ್ಲಿ 26.80 ಲಕ್ಷ ಮೌಲ್ಯದ ಇನ್ನೋವಾ ಕ್ರಿಸ್ಟಾ ಕಾರು ಖರೀದಿಸಿದ್ದಾರೆ. ಅವರ ಹೆಸರಲ್ಲಿ ಹೋಂಡಾ ಬೈಕೊಂದಿದೆ ಅದರ ಮೌಲ್ಯ 10,000 ಅಷ್ಟೆ.

* ಶಾಂತಾ ಅವರ ಬಳಿ 31.25 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಮಗಳ ಹಾಗೂ ಪತಿ ನಾಗರಾಜು ಅವರ ಬಳಿ ಯಾವುದೇ ಆಭರಣಗಳಿಲ್ಲ.

ಶಾಂತಾ ಅವರ ಚರಾಸ್ತಿ ಮೌಲ್ಯ

ಶಾಂತಾ ಅವರ ಚರಾಸ್ತಿ ಮೌಲ್ಯ

* ಶಾಂತಾ ಅವರ ಒಟ್ಟು ಚರಾಸ್ತಿ ಮೌಲ್ಯ 60.21 ಲಕ್ಷ ಇದೆ. ಪತಿ ನಾಗರಾಜು ಅವರ ಚರಾಸ್ತಿ ಮೌಲ್ಯ 80.21 ಲಕ್ಷ ರೂಪಾಯಿಗಳು. ಮಗಳು ಪ್ರಸನ್ನ ಲಕ್ಷ್ಮಿ ಚರಾಸ್ತಿ ಮೌಲ್ಯ 2.30 ಲಕ್ಷ ರೂಪಾಯಿ.

* ಶಾಂತಾ ಅವರ ಬಳಿ ಒಂದು ಎಕರೆ ಕೃಷಿ ಭೂಮಿ ಇದೆ. ಇದರ ಇಂದಿನ ಮಾರುಕಟ್ಟೆ ಮೌಲ್ಯ 50 ಲಕ್ಷ ರೂಪಾಯಿ. ಇದು ಸ್ವಯಾರ್ಜಿತ ಎಂದು ಅವರು ಘೋಷಿಸಿದ್ದಾರೆ. ಪತಿ ಹಾಗೂ ಮಕ್ಕಳ ಹೆಸರಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ.

ಮಂಡ್ಯ ಜೆಡಿಎಸ್ ಅಭ್ಯರ್ಥಿ: ಶಿವರಾಮೇಗೌಡರ ಪತ್ನಿಯ ಆಸ್ತಿಯೇ ಹೆಚ್ಚು ಮಂಡ್ಯ ಜೆಡಿಎಸ್ ಅಭ್ಯರ್ಥಿ: ಶಿವರಾಮೇಗೌಡರ ಪತ್ನಿಯ ಆಸ್ತಿಯೇ ಹೆಚ್ಚು

ಕೃಷಿಯೇತರ ಭೂಮಿ ಶಾಂತಾ ಬಳಿಯಿಲ್ಲ

ಕೃಷಿಯೇತರ ಭೂಮಿ ಶಾಂತಾ ಬಳಿಯಿಲ್ಲ

* ಶಾಂತಾ ಅವರ ಹೆಸರಲ್ಲಿ ಯಾವುದೇ ಕೃಷಿಯೇತರ ಭೂಮಿ ಇಲ್ಲ. ಆದರೆ ಪತಿ ಅವರ ಹೆಸರಿನಲ್ಲಿ ಮೂರು ನಿವೇಷನಗಳಿವೆ. ಅವುಗಳ ಇಂದಿನ ಮಾರುಕಟ್ಟೆ ಮೌಲ್ಯ 95,00,000 ರೂಪಾಯಿ. ಮಗಳ ಹೆಸರಲ್ಲಿ ಯಾವುದೇ ನಿವೇಶನಗಳಿಲ್ಲ.

* ಶಾಂತಾ ಅವರ ಹೆಸರಿನಲ್ಲಿ ಯಾವುದೇ ಮನೆ ಅಥವಾ ಅಪಾರ್ಟ್‌ಮೆಂಟ್ ಅಥವಾ ವಾಣಿಜ್ಯ ಮಳಿಗೆಗಳಿಲ್ಲ. ಪತಿ ಹೆಸರಲ್ಲಿ ಮೂರು ಮನೆಗಳಿವೆ ಅವುಗಳ ಇಂದಿನ ಮಾರುಕಟ್ಟೆ ಮೌಲ್ಯ 1.40 ಕೋಟಿ ರೂಪಾಯಿಗಳು. ಅವರ ಮಗಳ ಹೆಸರಲ್ಲಿ 65.00 ಲಕ್ಷ ಮೌಲ್ಯದ ಒಂದು ಮನೆ ಇದೆ.

ಶಾಂತಾ ಅವರ ಸ್ಥಿರಾಸ್ತಿ ಮೌಲ್ಯ

ಶಾಂತಾ ಅವರ ಸ್ಥಿರಾಸ್ತಿ ಮೌಲ್ಯ

* ಶಾಂತಾ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ 50 ಲಕ್ಷ ರೂಪಾಯಿಗಳು. ಪತಿ ನಾಗರಾಜು ಅವರ ಸ್ಥಿರಾಸ್ತಿ ಮೌಲ್ಯ 2.35 ಕೋಟಿ ರೂಪಾಯಿ. ಮಗಳು ಪ್ರಸನ್ನ ಲಕ್ಷ್ಮಿ ಅವರ ಸ್ಥಿರಾಸ್ತಿ ಮೌಲ್ಯ 65 ಲಕ್ಷ.

* ಶಾಂತಾ ಅವರ ಒಟ್ಟು ಆಸ್ತಿ ಮೌಲ್ಯ 1.10 ಕೋಟಿ ರೂಪಾಯಿಗಳು. ಅವರ ಪತಿ ನಾಗರಾಜು ಅವರ ಒಟ್ಟು ಆಸ್ತಿ ಮೌಲ್ಯ 3.15 ಕೋಟಿ. ಮಗಳ ಒಟ್ಟು ಆಸ್ತಿ ಮೌಲ್ಯ 67.30 ಲಕ್ಷ. ಕುಟುಂಬದ ಒಟ್ಟು ಆಸ್ತಿ 4.90 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆಸ್ತಿ, ಆದಾಯ, ಶಿಕ್ಷಣ, ಪ್ರಕರಣಗಳ ಮಾಹಿತಿಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆಸ್ತಿ, ಆದಾಯ, ಶಿಕ್ಷಣ, ಪ್ರಕರಣಗಳ ಮಾಹಿತಿ

ಯಾವುದೇ ಸಾಲಗಳಿಲ್ಲ

ಯಾವುದೇ ಸಾಲಗಳಿಲ್ಲ

* ಶಾಂತಾ ಸೇರಿದಂತೆ ಅವರ ಕುಟುಂಬದವರ ಮೇಲೆ ವೈಯಕ್ತಿಕ ಆಗಲಿ ಬ್ಯಾಂಕ್ ಸಾಲಗಳಾಗಲಿ ಇಲ್ಲದಿರುವುದು ವಿಶೇಷ.

* ಶಾಂತಾ ಅವರು ಬಳ್ಳಾರಿಯಲ್ಲಿ ದ್ವಿತೀಯ ಪಿಯುಸಿ ಕಲಿತಿದ್ದಾರೆ. ಅವರ ಮೇಲೆ ಯಾವುದೇ ಕ್ರಿಮಿನಲ್ ಅಥವಾ ಸಿವಿಲ್ ದೂರುಗಳು ದಾಖಲಾಗಿಲ್ಲ ಎಂದು ಅವರು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

English summary
Bellary lok sabha by election bjp candidate J Shanta filed nomination yesterday for by election 2018. She is sister of Sriramulu. She is a former zilla panchayat member. She facing congress VS Ugrappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X