ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ: ಸಿಎಂ ಬಿಎಸ್ವೈ, ಡಿಸಿಎಂ ಸವದಿಗೆ ಸಾರಿಗೆ ನೌಕರನ ಮಗಳಿಂದ ಹೃದಯ ಕಲಕುವ ಮನವಿ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಏಪ್ರಿಲ್ 8: ಕರ್ನಾಟಕ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಪುಟಾಣಿ ಬಾಲಕಿ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷಣ ಸವದಿ ಅವರಿಗೆ ಮನವಿ ಮಾಡಿಕೊಂಡಿದ್ದಾಳೆ.

ಈಗಾಗಲೇ ಸಾರಿಗೆ ನೌಕರರು ರಾಜ್ಯಾದ್ಯಾಂತ 6ನೇ ವೇತನ ಮತ್ತು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಅನಿರ್ದಿಷ್ಟ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.

ಸಾರಿಗೆ ನೌಕರರು ಕೋಡಿಹಳ್ಳಿ ನಾಯಕತ್ವವನ್ನು ಬಿಟ್ಟು ಬಂದು ಮಾತನಾಡಲಿ: ಸಚಿವ ಕೆ.ಎಸ್ ಈಶ್ವರಪ್ಪಸಾರಿಗೆ ನೌಕರರು ಕೋಡಿಹಳ್ಳಿ ನಾಯಕತ್ವವನ್ನು ಬಿಟ್ಟು ಬಂದು ಮಾತನಾಡಲಿ: ಸಚಿವ ಕೆ.ಎಸ್ ಈಶ್ವರಪ್ಪ

ಇತ್ತ ಕಡೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಾರಿಗೆ ನೌಕರರೊಬ್ಬರ ಮಗಳು ತನ್ನ ತಂದೆಯ ಪರವಾಗಿ 6ನೇ ವೇತನ ಜಾರಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ.

Bus Strike In Karnataka: Transport Employee Daughter Appeals To CM Yediyurappa And DCM Lakshman Savadi

ವಿಡಿಯೋ ಮಾಡಿ ಮನವಿ ಮಾಡಿರುವ ಬಾಲಕಿ, ""ನಾವು ಒಳ್ಳೆಯ ಶಾಲೆ, ಶಿಕ್ಷಣ ಪಡೆಯಬೇಕೆಂಬ ತುಂಬಾ ಆಸೆಗಳಿವೆ. ಆದರೆ, ಈಗ ಬರುವ ನಮ್ಮಪ್ಪನ ಸಂಬಳ ಯಾವುದಕ್ಕೂ ಸಾಲುವುದಿಲ್ಲ. ಹಾಗಾಗಿ, ಸಂಬಳ ಜಾಸ್ತಿ ಮಾಡಿದರೆ ನಾವು ಉತ್ತಮ ಶಿಕ್ಷಣವನ್ನು ಪಡೆದು ಉದ್ಯೋಗವನ್ನು ಕಂಡುಕೊಳ್ಳುತ್ತೇವೆ'' ಎಂದು ವಿನಂತಿಸಿದ್ದಾಳೆ.

"ಆರನೇ ವೇತನ ಜಾರಿ ಮಾಡಬೇಕು, ಒಂದು ವೇಳೆ ಜಾರಿ ಮಾಡದೇ ಇದ್ದರೆ ಹೋರಾಟ ಮುಂದುವರೆಯುತ್ತದೆ. ನಮ್ಮಪ್ಪನ ಹಾಗೆ ಕೆಲಸ ಮಾಡುವ ನೌಕರರು ಹಿಂದೆ ಸರಿದರೂ ನಾವು ಹಿಂದೆ ಸರಿಯುವುದಿಲ್ಲ'' ಎಂದು ಅಚಲ ಮನಸ್ಸಿನಿಂದ ಲಲಿತಾ ಬಾಗೇವಾಡಿ ಎಂಬ ಪುಟ್ಟ ಬಾಲಕಿ ಹೇಳಿದ ಮಾತಿದು.

English summary
Bus Strike in Karnataka: A Girl has appealed to CM Yediyurappa and DCM Lakshman Savadi to fulfill the demands of Karnataka Transport employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X