ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುಡಾ ಮಾಸ್ಟರ್ ಪ್ಲಾನ್ ವಿಸ್ತರಿಸಲು ದಮ್ಮೂರು ಶೇಖರ್ ಮನವಿ

|
Google Oneindia Kannada News

ಬಳ್ಳಾರಿ, ಅ.30: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಶ್ರೀಧರಗಡ್ಡೆ, ಸಿರಿವಾರ, ಕಪ್ಪಗಲ್ಲು, ಬೈರದೇವನಹಳ್ಳಿ, ಚಾಗನೂರು, ಅಮರಾಪುರ, ಗೋಡೆಹಾಳ್, ತೆಗ್ಗಿನ ಬೂದಿಹಾಳ್, ಬೊಬ್ಬುಕುಂಟೆ, ಬುರನಾಯಕನಹಳ್ಳಿ, ಕೋಳೂರು, ಸೋಮಸಮುದ್ರದವರೆಗೆ ವಿಸ್ತರಿಸಬೇಕು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾದ ಅವರು ಮಾಸ್ಟರ್ ಪ್ಲಾನ್ ರೀ ಟೆಂಡರ್ ಮಾಡುವುದು ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ರೈತರೊಂದಿಗೆ 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ನಿವೇಶನ ಯೋಜನೆಗೆ ರೈತರಿಂದ ಭೂಮಿಯನ್ನು ಪ್ರಾಧಿಕಾರಕ್ಕೆ ನೋಂದಣಿ ಮಾಡಿಕೊಳ್ಳಲು ಅನುಮತಿ ನೀಡುವ ಕುರಿತು ಹಾಗೂ ಬುಡಾ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.

ಬಳ್ಳಾರಿ ನಗರಾಭಿವೃದ್ಧಿಗೆ 25 ಕೋಟಿ ರೂ.ವಿಶೇಷ ಅನುದಾನಬಳ್ಳಾರಿ ನಗರಾಭಿವೃದ್ಧಿಗೆ 25 ಕೋಟಿ ರೂ.ವಿಶೇಷ ಅನುದಾನ

ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರನ್ವಯ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು 1988 ರಿಂದ ಪ್ರಾರಂಭವಾಗಿ ತನ್ನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತದೆ. ಬಳ್ಳಾರಿ-ಸಂಡೂರು ಸ್ಥಳೀಯ ಯೋಜನಾ ಪ್ರದೇಶವು ಬಳ್ಳಾರಿ ತಾಲೂಕಿನ 17 ಗ್ರಾಮಗಳು ಹಾಗೂ ಸಂಡೂರು ತಾಲೂಕಿನ 27 ಗ್ರಾಮಗಳನ್ನೊಳಗೊಂಡಿರುತ್ತದೆ.

BUDA masterplan extention is needed: Chairman Dammur Shekhar

"'ಬಳ್ಳಾರಿಯನ್ನು ಸ್ಮಾರ್ಟ್‌ ಸಿಟಿ ಯೋಜನೆಗೆ ಸೇರ್ಪಡೆಗೊಳಿಸಿ''

ಹೊಸಪೇಟೆ ಸ್ಥಳೀಯ ಯೋಜನಾ ಪ್ರದೇಶವು 38 ಗ್ರಾಮಗಳನ್ನೊಳಗೊಂಡಿರುತ್ತದೆ. ವಿಜಯನಗರ ಸ್ಥಳೀಯ ಯೋಜನಾ ಪ್ರದೇಶವು ಬಳ್ಳಾರಿ ತಾಲೂಕಿನ 6 ಗ್ರಾಮ, ಹೊಸಪೇಟೆ ತಾಲೂಕಿನ 9 ಗ್ರಾಮ ಹಾಗೂ ಸಂಡೂರು ತಾಲೂಕಿನ 28 ಗ್ರಾಮ ಒಟ್ಟು 43 ಗ್ರಾಮಗಳನ್ನೊಳಗೊಂಡಿರುತ್ತದೆ. ವಿಸ್ತೀರ್ಣವು 580.70 ಚ.ಕಿ.ಮೀ. ಬಳ್ಳಾರಿ ವ್ಯಾಪ್ತಿಯ ಜಾನೆಕುಂಟೆ, ಕೊಳಗಲ್ಲು, ಬಳ್ಳಾರಿ ಕಸಬಾ, ಬಿ ಗೋನಾಳ್, ಸಂಗನಕಲ್ಲು, ಹಲಕುಂದಿ, ಬೆಳಗಲ್ಲು, ಹೊನ್ನಳ್ಳಿ, ಪತ್ರ ಬೂದಿಹಾಳ್, ಬಿಸಲಹಳ್ಳಿ, ಬೇವಿನಹಳ್ಳಿ, ಮಿಂಚೇರಿ, ಆಲದಹಳ್ಳಿ, ಮುಂಡ್ರಿಗಿ, ಆಂದ್ರಾಳ್, ಹದ್ದಿನಗುಂಡು, ಕಕ್ಕಬೇವಿನಹಳ್ಳಿ, ಸಂಜೀವರಾಯನಕೋಟೆ ಮುಂತಾದ 18 ಗ್ರಾಮಗಳು ಸೇರಿವೆ.

English summary
Ballari: BUDA Chairman Dammur Shekhar requested Additional Secretary Rakesh Singh to extend master plan of Ballari Urban Development Authority(BUDA)in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X