ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ; ಬುಡಾದಿಂದ 101 ಎಕರೆ ನಿವೇಶನ ಯೋಜನೆಗೆ ಒಪ್ಪಿಗೆ

|
Google Oneindia Kannada News

ಬಳ್ಳಾರಿ, ನವೆಂಬರ್ 24 : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ 101.98 ಎಕರೆ ನಿವೇಶನ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ರೈತರು ಹಾಗೂ ಪ್ರಾಧಿಕಾರದ ಸಹಯೋಗದೊಂದಿಗೆ 50:50 ಅನುಪಾತದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ.

ನಗರಾಭಿವೃದ್ಧಿ ಖಾತೆ ಸಚಿವ ಭೈರತಿ‌ ಬಸವರಾಜ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ ನಿವೇಶನ ಯೋಜನೆಗೆ ಕಲಂ19(1) ಅನ್ವಯ ಅಂತಿಮ ಅಧಿಸೂಚನೆ ಹೊರಡಿಸುವಿಕೆ ಹಾಗೂ ನಂತರ ಟೆಂಡರ್ ಕರೆಯುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ.

ನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎ ನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎ

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಸಚಿವ ಭೈರತಿ‌ ಬಸವರಾಜ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಡಾ ರೂಪಿಸಿರುವ ವಿವಿಧ ಯೋಜನೆಗಳ‌ ಮಾಹಿತಿಯನ್ನು ನೀಡಿದ್ದರು.

 ಮುಡಾ ಭೂಮಿ ಅತಿಕ್ರಮಣ ತೆರವು; 10 ಕೋಟಿ ರೂ.ಮೌಲ್ಯದ ನಿವೇಶನ ವಶಕ್ಕೆ ಮುಡಾ ಭೂಮಿ ಅತಿಕ್ರಮಣ ತೆರವು; 10 ಕೋಟಿ ರೂ.ಮೌಲ್ಯದ ನಿವೇಶನ ವಶಕ್ಕೆ

BUDA Developing Housing Project In 101 Acres Of Land

ಬುಡಾದಲ್ಲಿ ಖಾಲಿ ಇರುವ 2 ಸಹಾಯಕ ಅಭಿಯಂತರ ಹುದ್ದೆಗಳು, 1 ಕಿರಿಯ ಸಹಾಯಕ ಅಭಿಯಂತರ ಹಾಗೂ ನಗರ ಯೋಜನೆಯ ಜಂಟಿ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡುವಂತೆಯೂ ದಮ್ಮೂರು ಶೇಖರ್ ಮನವಿ ಮಾಡಿದ್ದಾರೆ.

ಬಿಡಿಎ ಜಾಗದಲ್ಲಿರುವ ಅಕ್ರಮ ನಿವೇಶನ, ಮನೆ ಸಕ್ರಮಕ್ಕೆ ಶಿಫಾರಸು ಬಿಡಿಎ ಜಾಗದಲ್ಲಿರುವ ಅಕ್ರಮ ನಿವೇಶನ, ಮನೆ ಸಕ್ರಮಕ್ಕೆ ಶಿಫಾರಸು

ಶೇ 5ರಷ್ಟು ಮೀಸಲು ; ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಯೋಜನೆಯಲ್ಲಿ ಶೇ 5ರಷ್ಟು ಪತ್ರಕರ್ತರಿಗೆ ಮೀಸಲಿಡುವ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ.

ಬುಡಾ ವ್ಯಾಪ್ತಿಯಲ್ಲಿ ಬರುವ ಟೌನ್ ಸರ್ವೆ ನಂಬರ್, ಕಂದಾಯ ಸರ್ವೇ ನಂಬರ್ ಕುರಿತು ಸಚಿವರ ಅಧ್ಯಕ್ಷತೆಯಲ್ಲಿ ಶೀರ್ಘದಲ್ಲಿಯೇ ಸಭೆ ನಡೆಯಲಿದೆ. ಸಭೆಯ ದಿನಾಂಕವನ್ನು ನಿಗದಿಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

English summary
Ballari Urban Development Authority (BUDA) developing housing project in 101.98 acres of land. Karnataka urban development minister Byrathi Basavaraj approved for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X