ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು: ವೈ ದೇವೇಂದ್ರಪ್ಪ

|
Google Oneindia Kannada News

ಬಳ್ಳಾರಿ ಮಾರ್ಚ್ 29: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು, ವಿದ್ಯೆಗಿಂತ ಅನುಭವ ಮುಖ್ಯ ಎಂಬುದನ್ನ ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕಾಗಿದೆ ಎಂದು ಬಳ್ಳಾರಿ ಬಿಜೆಪಿ ಲೋಕಸಭಾ ಅಭ್ಯರ್ಥಿ ವೈ ದೇವೆಂದ್ರಪ್ಪ ಅವರು ತಿರುಗೇಟು ನೀಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ದಿನ ಭರ್ಜರಿ ಪ್ರಚಾರ ನಡೆಸಿದ ಅವರು ಕಾಂಗ್ರೆಸ್ ಅಭ್ಯರ್ಥಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು. ಕುರುವತ್ತಿ, ಮೈಲಾರ, ಹೊಳಲು, ಹ್ಯಾರಡ, ದಾಸನಹಳ್ಳಿ, ಕತ್ತೇಬೆನ್ನೂರು, ಮಕರಬ್ಬಿ, ಬೀರಬ್ಬಿ, ಮಾನ್ಯರಮಸಲವಾಡ, ನಾಗತ್ತೀಬಸಾಪುರ, ಸೋಗಿ, ನಂದಿಹಳ್ಳಿ, ಹೊಳಗುಂದಿ, ಉತ್ತಂಗಿ, ಮಹಜನದ ಹಳ್ಳಿ ಹಾಗೂ ಇಟಗಿ ಗ್ರಾಮಪಂಚಾಯತಿ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿ

BJP Candidate Y Devendrappa Election Campaign Hoovina Hadagali

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಾಯಕರುಗಳು ನನ್ನನ್ನು ಅವಿದ್ಯಾವಂತ ಎಂದು ಹೀಯಾಳಿಸುತ್ತಿದ್ದಾರೆ. ದೇಶವನ್ನು ಅಭಿವೃದ್ದಿಯೆಡೆಗೆ ಮುನ್ನಡೆಸಿರುವ ಹಲವಾರು ನಾಯಕರುಗಳು ಅವಿದ್ಯಾವಂತರೇ. ಜನಪ್ರಿಯ ನಾಣ್ಣುಡಿ "ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು" ಎನ್ನುವಂತೆ ನಾನು ನಮ್ಮ ಭಾಗದ ಜನರ ಜೀವನಾಡಿಯಾಗಿರುವ ವ್ಯವಸಾಯದಲ್ಲಿ ಅನುಭವವಿದೆ.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಬದ್ಧ: ಬಳ್ಳಾರಿ ಅಭ್ಯರ್ಥಿ ದೇವೇಂದ್ರಪ್ಪಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಬದ್ಧ: ಬಳ್ಳಾರಿ ಅಭ್ಯರ್ಥಿ ದೇವೇಂದ್ರಪ್ಪ

ಅಲ್ಲದೆ, ಜನಸಾಮಾನ್ಯರ ನೋವುಗಳನ್ನ ಬಹಳ ಹತ್ತಿರದಿಂದ ನೋಡಿದ್ದೇನೆ. ನನ್ನ ರಾಜಕೀಯ ಅನುಭವದಲ್ಲಿ ನಾನು ನೋಡಿರುವಂತಹ ಹಾಗೂ ಸ್ಪಂದಿಸಿರುವಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ದನಿದ್ದೇನೆ ಎಂದರು. ಮುಂಬರುವ ದಿನಗಳಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಲಿದ್ದೇನೆ ಎಂದರು.

ಪತಿ ಬಿಜೆಪಿ ಅಭ್ಯರ್ಥಿ, ಪತ್ನಿ ಕಾಂಗ್ರೆಸ್‌ನಿಂದ ಜಿ.ಪಂಚಾಯಿತಿ ಸದಸ್ಯೆ! ಪತಿ ಬಿಜೆಪಿ ಅಭ್ಯರ್ಥಿ, ಪತ್ನಿ ಕಾಂಗ್ರೆಸ್‌ನಿಂದ ಜಿ.ಪಂಚಾಯಿತಿ ಸದಸ್ಯೆ!

BJP Candidate Y Devendrappa Election Campaign Hoovina Hadagali

ಈ ಸಂಧರ್ಭದಲ್ಲಿ ಮುಖಂಡರಾದ ಓದೋಗಂಗಪ್ಪ, ಮಾಜಿ ವಿಧಾನಪರಿಷತ್ ಸದಸ್ಯ ಮೃತ್ಯಂಜಯ ಜಿನಗ, ಮಾಜಿ ಶಾಸಕ ಚಂದ್ರಾನಾಯ್ಕ್, ಮಹೇಂದ್ರ ಜ್ಯೋತಿ, ಕೋಟ್ರೇಶ್, ವೈ ಬಿ ಪಾಟೀಲ್, ಲಿಂಗಪ್ಪ ಭೋವಿ, ಕಾಶಿನಾಥ್ ಹಾಗೂ ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.

English summary
Bellary Lok Sabha constituency BJP Candidate Y Devendrappa continued day 2 of election campaign today at Hoovina Hadagali assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X