ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್‌ಗೆ ಭಾರೀ ಹಿನ್ನಡೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಡಿಸೆಂಬರ್ 24: ಕೆಎಂಎಫ್ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಶಾಸಕ ಭೀಮಾನಾಯ್ಕ್‌ಗೆ ಭಾರೀ ಹಿನ್ನಡೆಯಾಗಿದೆ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ಅನರ್ಹ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಸಹಕಾರ ಸಂಘ, ರಾಬಕೋ, ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ಭೀಮಾನಾಯ್ಕ್‌ ಅನರ್ಹ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಹಿಂದೆ ನ್ಯಾಯಾಲಯ ಇದೇ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅವರು ಧಾರವಾಡ ಹೈಕೋರ್ಟ್‌ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು.

ಹಗರಿಬೊಮ್ಮನಹಳ್ಳಿ ಗಲಾಟೆ; ಶಾಸಕ ಭೀಮಾನಾಯ್ಕ ಸ್ಪಷ್ಟನೆ ಹಗರಿಬೊಮ್ಮನಹಳ್ಳಿ ಗಲಾಟೆ; ಶಾಸಕ ಭೀಮಾನಾಯ್ಕ ಸ್ಪಷ್ಟನೆ

ಮೇಲ್ಮನವಿಯಲ್ಲಿ ಸಕಾರಾತ್ಮಕ ಕಾರಣಗಳನ್ನು ನೀಡದ ಹಿನ್ನಲೆಯಲ್ಲಿ ಶಾಸಕ ಭೀಮಾನಾಯ್ಕ್‌ ನಿರ್ದೇಶಕ ಸ್ಥಾನಕ್ಕೆ ಅನರ್ಹ ಎಂದು ತೀರ್ಪು ಬಂದಿದೆ. ಭೀಮಾನಾಯ್ಕ್ ಪ್ರಕರಣವನ್ನ ಪರಿಶೀಲಿಸಿ ವರದಿ ನೀಡುವಂತೆ ಹೊಸಪೇಟೆ ಸಹಕಾರಿ ಸಂಘದ ನ್ಯಾಯಾಲಯಕ್ಕೆ ಕೋರ್ಟ್ ಸೂಚನೆ ನೀಡಿತ್ತು.

ಗೆಲುವನ್ನು ಹಂಚಿಕೊಳ್ಳುವ ಸಮಯದಲ್ಲೇ ಆರೋಪವೂ ಮಾಡಿದ ಭೀಮಾನಾಯ್ಕ ಗೆಲುವನ್ನು ಹಂಚಿಕೊಳ್ಳುವ ಸಮಯದಲ್ಲೇ ಆರೋಪವೂ ಮಾಡಿದ ಭೀಮಾನಾಯ್ಕ

Bheema Naik Disqualified For KMF Director Post

ವಿಚಾರಣೆ ನಡೆಸಿ, ಸೂಕ್ತ ದಾಖಲೆಗಳಿಲ್ಲದೇ ಇರುವುದರಿಂದ ಭೀಮಾನಾಯ್ಕ್ ಅವರನ್ನು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಹೊಸಪೇಟೆ ಸಹಕಾರಿ ಸಂಘದ ನ್ಯಾಯಾಲಯ ಆದೇಶ ಹೊರಡಿಸಿದೆ. ಮೂಲ ನಿವಾಸ ಪ್ರಮಾಣ ಪತ್ರಕ್ಕೆ ನಕಲಿ ದಾಖಲೆಯನ್ನು ಶಾಸಕರ ನೀಡಿದ್ದರು.

ಭೀಮಾನಾಯ್ಕ ಶಾಸಕ ಸ್ಥಾನಕ್ಕೆ ರಾಜೀನಾಮೆ, ಸಂಭ್ರಮವೋ ಸಂಭ್ರಮಭೀಮಾನಾಯ್ಕ ಶಾಸಕ ಸ್ಥಾನಕ್ಕೆ ರಾಜೀನಾಮೆ, ಸಂಭ್ರಮವೋ ಸಂಭ್ರಮ

ಶಾಸಕರು ಮೂಲತಃ ಹಗರಿಬೊಮ್ಮನಹಳ್ಳಿಯ ಮೂಲ ನಿವಾಸಿ. ಆದರೆ, ಅಡವಿನಹಳ್ಳಿ ಗ್ರಾಮದ ನಿವಾಸಿ ಎಂದು ನಕಲಿ ದಾಖಲೆಗಳನ್ನು ಸಲ್ಲಿಸಿ ಸಹಕಾರಿ ಸಂಘದ ಸದಸ್ಯತ್ವವನ್ನು ಶಾಸಕ ಭೀಮಾನಾಯ್ಕ್ ಪಡೆದಿದ್ದರು.

ಇದೇ ಸಂಘದ ಮೂಲಕ ರಾಯಚೂರು- ಬಳ್ಳಾರಿ- ಕೊಪ್ಪಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿ ಸಮ್ಮಿಶ್ರ ಸರ್ಕಾರದ ವೇಳೆ ಕೆಎಂಎಫ್ ಅಧ್ಯಕ್ಷ ಗಾಧಿ ಮೇಲೆಯೂ ಶಾಸಕರು ಕಣ್ಣಿಟ್ಟಿದ್ದರು. ನ್ಯಾಯಾಲಯದಿಂದ ಆದೇಶದಿಂದ ಶಾಸಕರಿಗೆ ಈಗ ಹಿನ್ನಡೆಯಾಗಿದೆ.

English summary
Hagaribommanahalli MLA Bheema Naik disqualified for KMF director post court ordered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X