ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಅಂತರದಿಂದ ಗೆಲುವು ನಿರೀಕ್ಷಿತ: ವಿಎಸ್ ಉಗ್ರಪ್ಪ

|
Google Oneindia Kannada News

Recommended Video

Bellary By-elections 2018 Results : ಬಳ್ಳಾರಿಯಲ್ಲಿ ಗೆಲುವು ನನ್ನದೇ ಎಂದ ವಿ ಎಸ್ ಉಗ್ರಪ್ಪ |Oneindia Kannada

ಬಳ್ಳಾರಿ, ನವೆಂಬರ್ 06: ನಾನು ತುಂಬಾ ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿದ್ದೇನೆ, ಚುನಾವಣಾ ರಾಜಕೀಯ ಹೊಸದಿರಬಹುದು. ಆದರೆ, ನನಗೆ ಯಾವ ಟೆನ್ಷನ್​ ಇಲ್ಲ. ನಾನು ನಿನ್ನೆ, ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ಭಾರಿ ಅಂತರದಿಂದ ಗೆಲುವು ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿದ ಉಗ್ರಪ್ಪ ಅವರು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತ್ತು ಮತದಾನದ ನಂತರ ಜನಾಭಿಪ್ರಾಯಗಳನ್ನು ನೋಡಿದರೆ ನನ್ನ ಗೆಲುವು ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾನು ಅತ್ಯಂತ ಹೆಚ್ಚು ಬಹುಮತದಿಂದ ಈ ಚುನಾವಣೆಯಲ್ಲಿ ಆಯ್ಕೆಯಾಗುತ್ತೇನೆ. ಈ ಭರವಸೆ ನನಗೆ ಹಾಗೂ ನನ್ನ ಪಕ್ಷದ ನಾಯಕತ್ವಕ್ಕಿದೆ ಎಂದಿದ್ದಾರೆ.

Bellary LS by poll : I have no tension expecting huge victory : VS Ugrappa

ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರರು ಬಹಳ ಪ್ರಬುದ್ಧರಾಗಿದ್ದಾರೆ. ಅಭ್ಯರ್ಥಿ ಹಿನ್ನೆಲೆಯನ್ನು ತಿಳಿದುಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ, ಅಭಿವೃದ್ಧಿ ದೃಷ್ಟಿ, ಸಾಮಾಜಿಕ ಕಾರ್ಯದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಕೊಡುಗೆಗಳೇನು ಎಂದು ಅರಿತು ಮತ ಹಾಕಿದ್ದಾರೆ ಎಂದರು.

ಬಳ್ಳಾರಿ ಚುನಾವಣೆ LIVE: 'ಶಾಂತ' ವಾದ ಬಿಜೆಪಿ, ಕೈ ಪಡೆಯ 'ಉಗ್ರ' ಕೇಕೆಬಳ್ಳಾರಿ ಚುನಾವಣೆ LIVE: 'ಶಾಂತ' ವಾದ ಬಿಜೆಪಿ, ಕೈ ಪಡೆಯ 'ಉಗ್ರ' ಕೇಕೆ

ನವೆಂಬರ್ 03ರಂದು ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ನಡೆದ ಮತದಾನದಲ್ಲಿ 63.85 % ರಷ್ಟು ದಾಖಲಾಗಿತ್ತು. ಬಳ್ಳಾರಿಯಲ್ಲಿ ಬಿಜೆಪಿ ಪ್ರಾಬಲ್ಯ ಎಂದೆನಿಸಿದರೂ ಕಾಂಗ್ರೆಸ್​ ಅಭ್ಯರ್ಥಿ ಉಗ್ರಪ್ಪ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಕಾಂಗ್ರೆಸ್​- 50.5% ಬಿಜೆಪಿ -46.5 % ಇದೆ.

5 ಕ್ಷೇತ್ರಗಳ ಉಪ ಚುನಾವಣೆ 2018ರ ಲೈವ್ ಅಪ್ಡೇಟ್5 ಕ್ಷೇತ್ರಗಳ ಉಪ ಚುನಾವಣೆ 2018ರ ಲೈವ್ ಅಪ್ಡೇಟ್

ಹೊಸ ದಾಖಲೆ ಮುರಿಯುವತ್ತ ಉಗ್ರಪ್ಪ, 85144 ಮತಗಳ ಅಂತರದಿಂದ ಗೆದ್ದಿದ್ದ ಶ್ರೀರಾಮುಲು, ಈ ಅಂತರ ದಾಟುವ ನಿರೀಕ್ಷೆಯಿದೆ. ಆರ್​ವೈಎಂಇಸಿ ಕಾಲೇಜಿನಲ್ಲಿ ನಡೆದಿರ ಮತ ಎಣಿಕೆ ಕಾರ್ಯ ನಡೆದಿದ್ದು, 14 ಸುತ್ತಿನ ಮತ ಎಣಿಕೆಯಾಗಬೇಕಿದೆ. ಉಗ್ರಪ್ಪ ಅವರು ಮತ ಎಣಿಕೆ ಕೇಂದ್ರದ ಬಳಿ ಬೀಡು ಬಿಟ್ಟಿದ್ದರೆ, ಶಾಂತಾ ಅವರು ಇತ್ತ ಸುಳಿದಿಲ್ಲ.

English summary
Bellary Lok Ssabha by poll results 2018 : I have no tension expecting huge victory says Congress candidate VS Ugrappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X