ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಬರುತ್ತಿದ್ದಂತೆಯೇ ಜಾರಕಿಹೊಳಿ ಜೂಟ್: ಡಿಕೆಶಿ ಮಾಡಿದ್ದೇನು ಗೊತ್ತಾ?

|
Google Oneindia Kannada News

Recommended Video

ಬಳ್ಳಾರಿ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನ | Oneindia Kannada

ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಮತ್ತು ಪೌರಾಡಳಿತ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ನಡುವೆ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ, ಮಗುದೊಮ್ಮೆ ಬುಧವಾರ (ಅ 24) ಸಾಬೀತಾಗಿ ಹೋಗಿದೆ.

ಬಳ್ಳಾರಿ ಲೋಕಸಭಾ ಉಪಚುನಾವಣಾ ಪ್ರಚಾರಕ್ಕಾಗಿ ಕೂಡ್ಲಿಗಿಗೆ ಡಿ ಕೆ ಶಿವಕುಮಾರ್ ಬರುತ್ತಿದ್ದಂತೆಯೇ, ರಮೇಶ್ ಜಾರಕಿಹೊಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಇದರಿಂದ, ಡಿಕೆಶಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಮುಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್‌ ಅಸಮಾಧಾನ, ಬೆಳಗಾವಿಯಲ್ಲಿ ಮತ್ತೆ ಬೆಂಕಿ?ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್‌ ಅಸಮಾಧಾನ, ಬೆಳಗಾವಿಯಲ್ಲಿ ಮತ್ತೆ ಬೆಂಕಿ?

ಬೆಳಗಾವಿ ರಾಜಕಾರಣದಲ್ಲಿನ ಹಸ್ತಕ್ಷೇಪ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಮನಸ್ತಾಪ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಬುಡವನ್ನೇ ಅಲುಗಾಡಿಸಿತ್ತು.

ರಮೇಶ್ ಜಾರಕಿಹೊಳಿಯನ್ನು ಕರೆಸಿ ವರಿಷ್ಠರು ಮಾತುಕತೆ ನಡೆಸಿ ಸಮಾಧಾನ ಪಡಿಸಿದ್ದರೂ, ಡಿಕೆಶಿ ಜೊತೆಗಿನ ಇವರ ಅಸಮಾಧಾನದ ಹೊಗೆ ಅಲ್ಲಲ್ಲಿ ಬಹಿರಂಗವಾಗುತ್ತಲೇ ಬರುತ್ತಿವೆ. ಅದಕ್ಕೆ ಕೂಡ್ಲಿಗೆ ಘಟನೆ ಸೇರ್ಪಡೆಯಾಗುವ ಮೂಲಕ, ಕಾಂಗ್ರೆಸ್ಸಿಗೆ ಮತ್ತೊಂದು ತಲೆನೋವು ತಂದೊಡ್ಡಿದೆ.

ರಾಮುಲು ಅವರು ಕಾಂಗ್ರೆಸ್‌ ಕುಟುಂಬ, ಅವರ ಅಣ್ಣ ಪಕ್ಷದ ಕಾರ್ಯಕರ್ತರಾಗಿದ್ದರು: ಡಿಕೆಶಿ ರಾಮುಲು ಅವರು ಕಾಂಗ್ರೆಸ್‌ ಕುಟುಂಬ, ಅವರ ಅಣ್ಣ ಪಕ್ಷದ ಕಾರ್ಯಕರ್ತರಾಗಿದ್ದರು: ಡಿಕೆಶಿ

ಬಳ್ಳಾರಿ ಲೋಕಸಭಾ ವ್ಯಾಪ್ತಿಗೆ ಬರುವ ಕೂಡ್ಲಿಗಿ ಕ್ಷೇತ್ರದ ಉಸ್ತುವಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ರಮೇಶ್ ಜಾರಕಿಹೊಳಿಗೆ ವಹಿಸಿತ್ತು. ಆದರೆ, ಪಕ್ಷದ ಪ್ರಚಾರಕ್ಕೆ ಸ್ಟಾರ್ ಕ್ಯಾಂಪೇನರ್ ಡಿಕೆಶಿ ಬಂದಾಗ, ರಮೇಶ್ ಗೈರಾಗಿದ್ದು ಕೆಪಿಸಿಸಿಗೆ ಇರಿಸುಮುರಿಸು ತಂದಿದೆ. ಡಿಕೆಶಿ ಮಾಡಿದ್ದೇನು, ಮುಂದೆ ಓದಿ..

ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್

ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್

ಬಳ್ಳಾರಿ ಕ್ಷೇತ್ರದ ಉಸ್ತುವಾರಿಯನ್ನು ಕಾಂಗ್ರೆಸ್ ತನ್ನ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಗೆ ವಹಿಸಿದೆ. ಹಾಗಾಗಿ, ಬಳ್ಳಾರಿ ಕ್ಷೇತ್ರದ ಚುನಾವಣೆ ಡಿಕೆಶಿ ಮತ್ತು ಶ್ರೀರಾಮುಲು ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಸೆಂಬ್ಲಿಯ ಮಾಹಿತಿಯನ್ನು ಪಡೆದು ರಣತಂತ್ರ ರೂಪಿಸುತ್ತಿರುವ ಡಿಕೆಶಿಗೆ ತಮ್ಮದೇ ಪಕ್ಷದ ರಮೇಶ್ ಜಾರಕಿಹೊಳಿ ಮತ್ತೆ ರಿವರ್ಸ್ ಆಗಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಯಾರದ್ದೋ ಬೆಂಬಲ ಸಿಗುತ್ತದೆ ಎಂದು ನಾನು ಹೇಳಿಕೆ ನೀಡಿಲ್ಲ: ಡಿ.ಕೆ. ಶಿವಕುಮಾರ್ ಯಾರದ್ದೋ ಬೆಂಬಲ ಸಿಗುತ್ತದೆ ಎಂದು ನಾನು ಹೇಳಿಕೆ ನೀಡಿಲ್ಲ: ಡಿ.ಕೆ. ಶಿವಕುಮಾರ್

ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಸಾರ್ವಜನಿಕ ಸಭೆ

ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಸಾರ್ವಜನಿಕ ಸಭೆ

ಸ್ಥಳೀಯ ಕಾಂಗ್ರೆಸ್ ಮುಖಂಡರು ಎರಡು ದಿನದ ಹಿಂದೆ ಸಭೆ ಸೇರಿ, ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಬುಧವಾರಕ್ಕೆ ಗೊತ್ತು ಪಡಿಸಿದ್ದರು. ಅದರಂತೆಯೇ, ಡಿ ಕೆ ಶಿವಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡುವುದೆಂದು ನಿಗದಿಯಾಗಿತ್ತು. ಡಿಕೆಶಿ ಬರುತ್ತಿರುವ ವಿಚಾರ ಗೊತ್ತಿದ್ದರೂ, ರಮೇಶ್ ಜಾರಕಿಹೊಳಿ ಅಲ್ಲಿಂದ ಹೊರಟು ಹೋಗಿದ್ದರು. ಇದು ಇಬ್ಬರು ಮುಖಂಡರ ನಡುವಿನ ಮನಸ್ತಾಪವನ್ನು ಮತ್ತೆ ಮತದಾರರಿಗೆ ನೆನಪಿಸುವಂತಾಯಿತು.

ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆ: ಡಿಕೆ ಶಿವಕುಮಾರ್ ಟಾರ್ಗೆಟ್ ಯಾರು?ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆ: ಡಿಕೆ ಶಿವಕುಮಾರ್ ಟಾರ್ಗೆಟ್ ಯಾರು?

ಸಭೆಗೆ ಆಗಮಿಸುವ ಮುನ್ನವೇ ಮಾಹಿತಿ ಪಡೆದುಕೊಂಡಿದ್ದ ಡಿಕೆಶಿ

ಸಭೆಗೆ ಆಗಮಿಸುವ ಮುನ್ನವೇ ಮಾಹಿತಿ ಪಡೆದುಕೊಂಡಿದ್ದ ಡಿಕೆಶಿ

ರಮೇಶ್ ಜಾರಕಿಹೊಳಿ ಕೂಡ್ಲಿಗಿಯಿಂದ ಹೊರಟಿರುವ ಮಾಹಿತಿಯನ್ನು ಸಭೆಗೆ ಆಗಮಿಸುವ ಮುನ್ನವೇ ಪಡೆದುಕೊಂಡಿದ್ದ ಡಿಕೆಶಿ, ಜಿಲ್ಲೆಯ ಮತ್ತೊಂದು ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ದಿನೇಶ್ ಗುಂಡೂರಾವ್ ಅವರನ್ನು ತುರ್ತಾಗಿ ಕೂಡ್ಲಿಗಿಗೆ ಬರಮಾಡಿಕೊಳ್ಳುವ ಮೂಲಕ, ಜಾರಕಿಹೊಳಿಗೆ ಡಿಕೆಶಿ ಟಕ್ಕರ್ ನೀಡಿದ್ದಾರೆ. ಆ ಮೂಲಕ, ಕೆಪಿಸಿಸಿ ಅಧ್ಯಕ್ಷರನ್ನೇ ಕರೆಸಿಕೊಳ್ಳುವ ತಾಕತ್ ನನಗಿದೆ ಎಂದು ಜಾರಕಿಹೊಳಿ ಗ್ರೂಪಿಗೆ ಸಂದೇಶವನ್ನು ಡಿಕೆಶಿ ರವಾನಿಸಿದ್ದಾರೆ ಎಂದು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿರುವ ವಿಚಾರ.

ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುವುದಾಗಿ ಜೂಟ್ ಆದ ರಮೇಶ್

ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುವುದಾಗಿ ಜೂಟ್ ಆದ ರಮೇಶ್

ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುವುದಾಗಿ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ರಮೇಶ್ ಜಾರಕಿಹೊಳಿ ಹೇಳಿ ಹೊರಟು ಹೋಗಿದ್ದರು. ಹಾಗಾಗಿ, ಡಿಕೆಶಿ ಮತ್ತು ಗುಂಡೂರಾವ್ ಬರುವವರೆಗೆ ಪಕ್ಷದ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಏಕಾಂಗಿಯಾಗಿ ಪ್ರಚಾರದಲ್ಲಿ ತೊಡಗಿದ್ದರು. ಡಿಕೆಶಿ ಬುಲಾವ್ ಮೇರೆಗೆ ಕೂಡ್ಲಿಗಿಗೆ ಆಗಮಿಸಿದ್ದ ಗುಂಡೂರಾವ್ ವಿರುದ್ದ ಸ್ಥಳೀಯ ಮುಖಂಡರ ಮುಂದೆಯೇ, ಡಿಕೆಶಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಉಸ್ತುವಾರಿಯನ್ನು ನೇಮಿಸಿದ್ದು ಕೆಪಿಸಿಸಿ ಅಧ್ಯಕ್ಷರು

ಉಸ್ತುವಾರಿಯನ್ನು ನೇಮಿಸಿದ್ದು ಕೆಪಿಸಿಸಿ ಅಧ್ಯಕ್ಷರು

ಕೂಡ್ಲಿಗಿಯ ಸಾರ್ವಜನಿಕ ಸಭೆಗೂ ಮುನ್ನ, ಏನ್ ಸಾರ್, ನೀವು ಬರುತ್ತಿದ್ದಂತೆಯೇ ಉಸ್ತುವಾರಿ ರಮೇಶ್ ಜಾರಕಿಹೊಳಿ ಗೈರಾಗಿದ್ದಾರಲ್ಲಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ ಡಿಕೆ ಶಿವಕುಮಾರ್, ಉಸ್ತುವಾರಿಯನ್ನು ನೇಮಿಸಿದ್ದು ಕೆಪಿಸಿಸಿ ಅಧ್ಯಕ್ಷರು. ಅವರು ಇಲ್ಲಿಗೆ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಬರ್ತಾ ಇದ್ದಾರೆ, ಅವರನ್ನೇ ಈ ಪ್ರಶ್ನೆಯನ್ನು ಕೇಳಿ ಎಂದು ಡಿಕೆಶಿ ಹೊರಟು ಹೋದರು.

English summary
Bellary Lok Sabha bypoll: DK Shivakumar entered into Kudligi constituency his cabinet colleague Ramesh Jarkihili moved away from the constituency. A emberassing movement for Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X