ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಲೋಕಸಭಾ ಕ್ಷೇತ್ರ ಫಲಿತಾಂಶ: ವಿಎಸ್ ಉಗ್ರಪ್ಪಗೆ ಸೋಲು

|
Google Oneindia Kannada News

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಗೆದ್ದಿರುವ ಹಾಲಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಬಿಜೆಪಿಯ ವೈ ದೇವೇಂದ್ರಪ್ಪ ನಡುವಿನ ಜಿದ್ದಾಜಿದ್ದಿನ ಪೈಪೋಟಿಯ ಚಿತ್ರಣ ಇಲ್ಲಿದೆ. ಬಳ್ಳಾರಿಯಲ್ಲಿ ಏಪ್ರಿಲ್ 23ರಂದು ಮತದಾನವಾಗಿತ್ತು. ಮೇ 23ರಂದು ಫಲಿತಾಂಶ ಹೊರಬಂದಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರ ಫಲಿತಾಂಶ: ವಿಎಸ್ ಉಗ್ರಪ್ಪಗೆ ಸೋಲುಬಳ್ಳಾರಿ ಲೋಕಸಭಾ ಕ್ಷೇತ್ರ ಫಲಿತಾಂಶ: ವಿಎಸ್ ಉಗ್ರಪ್ಪಗೆ ಸೋಲು

ಬಳ್ಳಾರಿ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಸ್ವಾತಂತ್ರ್ಯ ಬಂದ ಬಳಿಕ ಮದ್ರಾಸ್, ಮೈಸೂರು ಆನಂತರ ಕರ್ನಾಟಕ ರಾಜ್ಯಗಳಲ್ಲಿ ಈ ಕ್ಷೇತ್ರ ಸೇರಿಕೊಂಡಿದೆ.

ಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVEಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE

11.23: ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪಗೆ 34 ಸಾವಿರಗಳ ಮತಗಳ ಅಂತರದಿಂದ ಮುನ್ನಡೆ
10.53: ಬಿಜೆಪಿಯ ವೈ ದೇವೇಂದ್ರಪ್ಪಗೆ 8 ಸಾವಿರ ಮತಗಳ ಅಂತರದಿಂದ ಮುನ್ನಡೆ

* ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ 92761 ಮತ, ಬಿಜೆಪಿಯ ವೈ.ದೇವೆಂದ್ರಪ್ಪಗೆ 97945 ಮತ, ಬಿಜೆಪಿ ಅಭ್ಯರ್ಥಿಗೆ 5184 ಮತಗಳಿಂದ ಮುನ್ನಡೆ.

Bellary Lok Sabha (MP) Election Result 2019 trends

* 9.03: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ 12552 ಮತ, ಬಿಜೆಪಿಯ ವೈ.ದೇವೆಂದ್ರಪ್ಪ12863 ಮತಗಳು ಲಭಿಸಿವೆ.

ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎರಡು ಕ್ಷೇತ್ರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕ್ಷೇತ್ರಗಳು ಪರಿಶಿಷ್ಟ ಜಾತಿ(ಎಸ್ ಸಿ) ಅಥವಾ ಪರಿಶಿಷ್ಟ ಪಂಗಡ(ಎಸ್ ಟಿ)ಕ್ಕೆ ಸೇರಿದ್ದಾಗಿದೆ.

ಎಂಟು ಕ್ಷೇತ್ರಗಳ ಪೈಕಿ ಬಳ್ಳಾರಿ, ಬಳ್ಳಾರಿ ನಗರ, ಕೂಡ್ಲಿಗಿ ಬಿಜೆಪಿ ವಶದಲ್ಲಿದ್ದರೆ, ಕಂಪ್ಲಿ, ವಿಜಯನಗರ, ಸಂಡೂರು, ಹಗರಿ ಬೊಮ್ಮನಹಳ್ಳಿ, ಹಡಗಲಿ ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿವೆ.

ಲೋಕಸಭೆ ಚುನಾವಣೆ 2019 : ಬಳ್ಳಾರಿ ಕ್ಷೇತ್ರ ಪರಿಚಯ ಲೋಕಸಭೆ ಚುನಾವಣೆ 2019 : ಬಳ್ಳಾರಿ ಕ್ಷೇತ್ರ ಪರಿಚಯ

1980ರಿಂದ ಇಲ್ಲಿ ತನಕ ಸ್ಟ್ರೈಕ್ ರೇಟ್ ನೋಡಿದರೆ ಕಾಂಗ್ರೆಸ್ ಶೇ 70ರಷ್ಟು ಸರಾಸರಿಯೊಂದಿಗೆ 7 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಶೇ 30ರಷ್ಟು ಗೆಲುವಿನ ಸರಾಸರಿಯೊಂದಿಗೆ 3 ಬಾರಿ ಗೆಲುವು ಸಾಧಿಸಿದೆ.

ವಾಲ್ಮೀಕಿ ನಾಯಕ ಜನಾಂಗ, ಕುರುಬರು ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಮಿಕ್ಕಂತೆ ಲಿಂಗಾಯತ, ಪರಿಶಿಷ್ಟ ಜಾತಿ, ಅಲ್ಪ ಸಂಖ್ಯಾತರರು ಸಮಾನ ಅವಕಾಶವನ್ನು ಹೊಂದಿದ್ದಾರೆ.

2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿಎಸ್ ಉಗ್ರಪ್ಪ ಅವರು ಶೇ 59.99ರಷ್ಟು ಮತ (6,28,365 ಮತಗಳು) ಗಳಿಸಿ ಬಿಜೆಪಿಯ ಜೆ ಶಾಂತಾ ಅವರನ್ನು ಶೇ 36.78 ಮತ ಗಳಿಕೆ(3,85,204) ಸೋಲಿಸಿದರು.

English summary
Bellary Lok Sabha (MP) Election Result 2019: Y Devendrappa(BJP) vs V.S Ugrappa(Congress) fight will be decided today. Devendrappa gets initial lead in Postal voting count and after first round, Final table how the parties fared in the results declared on May 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X