ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: ಬಿಜೆಪಿ ಮಣಿಸಲು ಕಾಂಗ್ರೆಸ್‌ ಜತೆ ಕೈ ಜೋಡಿಸಿದ ಕಮ್ಯುನಿಸ್ಟ್‌ ಪಕ್ಷ

|
Google Oneindia Kannada News

ಬಳ್ಳಾರಿ, ಅಕ್ಟೋಬರ್ 24: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಪಕ್ಷದ ಜೊತೆ ಕಮ್ಯುನಿಷ್ಟ್‌ ಪಕ್ಷ (ಸಿಪಿಐ) ಕೈ ಜೋಡಿಸಿದ್ದು, ಬಿಜೆಪಿಯನ್ನು ಸೋಲಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಫ್ಯಾಸಿಸ್ಟ್‌ ಶಕ್ತಿಗಳನ್ನು ಸೋಲಿಸಲು ಈ ಕಮ್ಯುನಿಸ್ಟ್‌ ಪಕ್ಷ ಕಾಂಗ್ರೆಸ್‌ ಜತೆ ಕೈಜೋಡಿಸಿದೆ ಎಂದು ಹೇಳಿದರು.

ಬಳ್ಳಾರಿಯಲ್ಲಿ ಪ್ರಚಾರ ಮಾಡಲು ಕೋರ್ಟ್‌ ಮೊರೆ ಹೋದ ರೆಡ್ಡಿ, ಹೈಕಮಾಂಡ್‌ ಒಪ್ಪುತ್ತಾ?ಬಳ್ಳಾರಿಯಲ್ಲಿ ಪ್ರಚಾರ ಮಾಡಲು ಕೋರ್ಟ್‌ ಮೊರೆ ಹೋದ ರೆಡ್ಡಿ, ಹೈಕಮಾಂಡ್‌ ಒಪ್ಪುತ್ತಾ?

ಕಮ್ಯುನಿಸ್ಟ್‌ ಪಕ್ಷ ಶಿಸ್ತಿನ ಪಕ್ಷ. ಅದರ ಬೆಂಬಲ ಕಾಂಗ್ರೆಸ್‌ಗೆ ಸಿಕ್ಕಿರುವುದು ಲಕ್ಷ ವೋಟುಗಳನ್ನು ಹೆಚ್ಚಿಸಲಿದೆ. ಸಿಪಿಐನ ಸದಸ್ಯರಾಗಿರುವ ಕಾರ್ಮಿಕರ ಬೆಂಬಲ ಸಿಕ್ಕಿರುವುದು ನಮಗೆ ಬಲ ನೀಡಿದೆ. ಆ ಮೂಲಕ ಉಗ್ರಪ್ಪ ಅವರ ಗೆಲುವು ನಿಶ್ಚಿತಾಗಲಿದೆ ಎಂದು ಅವರು ಹೇಳಿದರು.

Bellary: communist party (cpi) joins hands with congress

ರಾಮುಲು ಅವರು ಕಾಂಗ್ರೆಸ್‌ ಕುಟುಂಬ, ಅವರ ಅಣ್ಣ ಪಕ್ಷದ ಕಾರ್ಯಕರ್ತರಾಗಿದ್ದರು: ಡಿಕೆಶಿರಾಮುಲು ಅವರು ಕಾಂಗ್ರೆಸ್‌ ಕುಟುಂಬ, ಅವರ ಅಣ್ಣ ಪಕ್ಷದ ಕಾರ್ಯಕರ್ತರಾಗಿದ್ದರು: ಡಿಕೆಶಿ

ಅಕ್ಟೋಬರ್ 31ರಂದು ಬಳ್ಳಾರಿಯಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಜಂಟಿಯಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದರು.

ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ

ಸಿಪಿಐ ಮುಖಂಡ ಲೋಕೇಶ್ ಮಾತನಾಡಿ, ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ನಿರ್ಧಾರ ಮಾಡಲಾಗಿದೆ ಎಂದರು.

English summary
Communist party (cpi) joins hands with congress in Bellary for by election 2018. KPCC president Dinesh Gundurao said cpi will get 1 lakh extra votes for congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X