• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿಯಲ್ಲಿ 13 ಕೊರೊನಾ ಸೋಂಕಿತರ ಪೈಕಿ 5 ಮಂದಿ ಡಿಸ್ಚಾರ್ಜ್!

|

ಬಳ್ಳಾರಿ, ಏಪ್ರಿಲ್.26: ಕೊರೊನಾ ವೈರಸ್ ಎಂಬ ಸಾವಿನ ಮನೆಯನ್ನು ದಾಟಿ ಗುಣಮುಖರಾದ ಇಬ್ಬರು ಸೋಂಕಿತರಿಗೆ ಬಳ್ಳಾರಿ ಜಿಲ್ಲಾಸ್ಪತ್ರೆಯ ವೈದ್ಯರು ಅತ್ಯಂತ ಹೃದಯಸ್ಪರ್ಶಿಯಾಗಿ ಬಿಳ್ಕೋಡಿಗೆ ನೀಡಿದ್ದಾರೆ.

ಕೊರೊನಾ ಸೊಂಕಿನಿಂದ ಗುಣಮುಖರಾದ ಹೊಸಪೇಟೆಯ ಪೇಶೆಂಟ್ ನಂಬರ್.90 ಹಾಗೂ ಬಳ್ಳಾರಿಯ ಗುಗ್ಗರಹಟ್ಟಿ ಪೇಶೆಂಟ್ ನಂಬರ್.151ರನ್ನು ಭಾನುವಾರ ಮಧ್ಯಾಹ್ನ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರ ಪೈಕಿ ಈ ಹಿಂದೆ ಕೂಡಾ ಮೂವರ ಆರೋಗ್ಯದಲ್ಲಿ ಚೇತರಿಸಿಕೊಂಡ ಹಿನ್ನೆಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತಿಬ್ಬರು ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಐವರು ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಉಳಿದ ಎಂಟು ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು ಅವರ ಆರೋಗ್ಯದಲ್ಲೂ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ತಿಳಿಸುತ್ತಿದ್ದಾರೆ.

ಬಳ್ಳಾರಿ; ಕೊರೊನಾದಿಂದ ಹೊರಬಂದ ಮೂವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮನೆ ಮಾಡಿದ್ದ ಆತಂಕ, ದುಗುಡ, ಭಯದ ವಾತಾವರಣ ಮಾಯವಾಗಿತ್ತು. ಕೊರೊನಾ ವೈರಸ್ ಕೂಡ ಸಾಮಾನ್ಯ ರೋಗ ಎಂಬಂತೆ ವೈದ್ಯರು ಪರಿಗಣಿಸುತ್ತಿದ್ದಾರೆ. ಕೊರೊನಾ ಅಷ್ಟೇ ಅಲ್ಲ, ಯಾವುದೇ ಆರೋಗ್ಯ ಸಮಸ್ಯೆಯಾದ್ರೂ ನಾವಿದ್ದೇವೆ ಡೊಂಟ್ ವರಿ" ಎಂದು ಹೇಳುವ ಮೂಲಕ ವೈದ್ಯರು ಧೈರ್ಯ ತುಂಬುತ್ತಿದ್ದಾರೆ.

ಕೊರೊನಾ ವೈರಸ್ ನಿಂದ ಗುಣಮುಖರಾದವರ ಕೈಗೆ ಹೂಗುಚ್ಛ,ಹಣ್ಣು-ಹಂಪಲು,ಮಾಸ್ಕ್ ಮತ್ತು ಸ್ಯಾನಟೈಸರ್ ಹಾಗೂ ರೇಶನ್ ಕಿಟ್ ನೀಡಿ ಆಂಬ್ಯುಲೆನ್ಸ್ ನಲ್ಲಿ ಕಳುಹಿಸಿಕೊಟ್ಟರು. ಇನ್ನು, ಇಂದು ಡಿಸ್ಚಾರ್ಜ್ ಆಗಿರುವ ಪೇಶೆಂಟ್ ನಂಬರ್.90 ಹಾಗೂ ಪೇಶೆಂಟ್ ನಂಬರ್.151ರನ್ನು 14 ದಿನ ಹೋಮ್ ಕ್ವಾರಂಟೈನ್ ಮತ್ತು 14 ದಿನ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು. ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರಿಸ್ಪಾನ್ಸ್ ತಂಡ 28 ದಿನ ಕಾಲ ನಿಗಾವಹಿಸಲಿವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. 13ರ ಪೈಕಿ ಐದು ಮಂದಿ ಗುಣಮುಖರಾಗಿದ್ದು, ಉಳಿದ 8 ಮಂದಿ ಇನ್ನು 15 ದಿನಗಳಲ್ಲೇ ಗುಣಮುಖರಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

English summary
Ballary: Two More Coronavirus Patients Cure And Discharge From Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more