ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ-ಶಿರಗುಪ್ಪ-ಲಿಂಗಸುಗೂರು ರೈಲ್ವೇ ಮಾರ್ಗಕ್ಕೆ ಅನುದಾನ ನೀಡಿ

|
Google Oneindia Kannada News

ಬಳ್ಳಾರಿ ಸೆಪ್ಟೆಂಬರ್‌ 23: ಬಳ್ಳಾರಿ-ಶಿರಗುಪ್ಪ-ಲಿಂಗನಸೂರು ನೂತನ ರೈಲ್ವೇ ಮಾರ್ಗದ ಕಾಮಗಾರಿ ಆರಂಭಕ್ಕೆ 2014 - 15 ರ ಕೇಂದ್ರ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಅಗತ್ಯವಿರುವ ಅನುದಾನವನ್ನು ನೀಡಿ ಶೀಘ್ರ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಡುವಂತೆ ಬಳ್ಳಾರಿ ಸಂಸದರಾದ ವೈ ದೇವೇಂದ್ರಪ್ಪ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು ಈ ಬಗ್ಗೆ ಸಂಸತ್ತಿನ ಶೂನ್ಯ ವೇಳೆಯಲ್ಲಿ ವಿಷಯವನ್ನು ಅವರು ಪ್ರಸ್ಥಾಪಿಸಿದರು. 2014-15 ರ ಆಯವ್ಯಯದಲ್ಲಿ ನೂತನ ರೈಲ್ವೇ ಮಾರ್ಗದ ಪ್ರಾರಂಭಕ್ಕೆ ಘೋಷಣೆ ಮಾಡಲಾಗಿತ್ತು. ಈ ಬಗ್ಗೆ 1160 ಕೋಟಿ ರೂಪಾಯಿಗಳ ಅಂದಾಜನ್ನು 2019 ರ ಜನವರಿಯಲ್ಲಿ ರೈಲ್ವೇ ಬೋರ್ಡ್‌ ಗೆ ಸಲ್ಲಿಸಲಾಗಿದೆ.

ನೇಗಿಲು ಹಿಡಿದು ಹೊಲಕ್ಕಿಳಿದ ಬಿಜೆಪಿ ಸಂಸದ ವೈ.ದೇವೇಂದ್ರಪ್ಪನೇಗಿಲು ಹಿಡಿದು ಹೊಲಕ್ಕಿಳಿದ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ

ಆದರೆ 2019-20 ರ ಅಯವ್ಯಯದಲ್ಲಿ ಇದಕ್ಕೆ ಯಾವುದೇ ಅನುದಾನವನ್ನು ಘೋಷಿಸದೇ ಇರುವ ಹಿನ್ನಲೆಯಲ್ಲಿ ಇದು ರೈಲ್ವೇ ಬೋರ್ಡಿನಲ್ಲಿಯೇ ನೆನೆಗುದಿಗೆ ಬಿದ್ದಿದೆ. ಬಳ್ಳಾರಿ - ಶಿರಗುಪ್ಪ - ಸಿಂಧನೂರು - ಲಿಂಗನಸೂರು ರೈಲ್ವೇ ಮಾರ್ಗ ನಿರ್ಮಿಸುವುದರಿಂದ ವಾಡಿ, ಸೋಲಾಪೂರ್‌, ಉತ್ತರ ಭಾರತ ಈಶಾನ್ಯ ಭಾರತ ಮತ್ತು ಕಲ್ಯಾಣ ಕರ್ನಾಟಕ್ಕೆ ಸಂಕರ್ಪ ಕಲ್ಪಿಸಿದಂತಾಗುತ್ತದೆ. ಆದ್ದರಿಂದ ಈ ಕಾರ್ಯಕ್ಕೆ ಆರ್ಥಿಕ ಅನುದಾನ ನೀಡಿ ಕೆಲಸ ಪ್ರಾರಂಭಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

Ballari MP Y Devendrappa demands grant for Ballari-Siraguppa-Lingasugur Railway line

ಇದೇ ವೇಳೆ ದೇಶಾದ್ಯಂತ ರೈತರು ಉಪಯೋಗಿಸುವ ಯಂತ್ರೋಪಕರಣಗಳ ದರದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಆಯಾ ಯಂತ್ರೋಪಕರಣಗಳ ದರಪಟ್ಟಿಯನ್ನು ಕಿಸಾನ್‌ ವೈಬ್‌ಸೈಟಿನಲ್ಲಿ ನಮೂದಿಸುವಂತೆ ಮನವಿ ಮಾಡಿದರು.

Ballari MP Y Devendrappa demands grant for Ballari-Siraguppa-Lingasugur Railway line

"ಕೆಕೆಆರ್ ಡಿಬಿಯಿಂದ ಬಳ್ಳಾರಿ ಜಿಲ್ಲೆಗೆ 862 ಕೋಟಿ ರೂ ಅನುದಾನ"

Recommended Video

ಹಿಂಗ್ ಮಾಡಿದ್ರೆ ಕಳೆದು ಹೋಗಿರೊ ಫೋನ್ ಸಿಗತ್ತೆ | Oneindia Kannada

ಕನ್ನಡದಲ್ಲಿ ಮಾತನಾಡುವ ಮೂಲಕ ಸಕ್ರಿಯವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಂತಹ ಹಲವಾರು ಸಮಸ್ಯೆಗಳನ್ನು ಸಂಸತ್ತಿನ ಮುಂದಿಟ್ಟರು.

English summary
Ballari MP Y Devendrappa today(Sept 23) during the monsoon session at Lok Sabha demanded Union government to prs grant for Ballari-Siraguppa-Lingasugur Railway line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X