ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಸಂಕ್ಷಿಪ್ತ ಪರಿಚಯ

|
Google Oneindia Kannada News

Recommended Video

ವಿ ಎಸ್ ಉಗ್ರಪ್ಪ, ಕಾಂಗ್ರೆಸ್ ನಾಯಕ ಹಾಗು ಬಳ್ಳಾರಿ ಸಂಸದರ ಕಿರು ಪರಿಚಯ | Oneindia Kannada

ಬಳ್ಳಾರಿ, ನವೆಂಬರ್ 07 : ಹಿರಿಯ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ದಾಖಲೆಯ ಜಯಗಳಿಸಿದ್ದಾರೆ. ಮೊದಲ ಬಾರಿಗೆ ವಿ.ಎಸ್.ಉಗ್ರಪ್ಪ ಅವರು ಸಂಸತ್ ಪ್ರವೇಶಿಸುತ್ತಿದ್ದಾರೆ.

ವೆಂಕಟಪುರ ಸುಬ್ಬಯ್ಯ ಉಗ್ರಪ್ಪ (ವಿ.ಎಸ್.ಉಗ್ರಪ್ಪ) ಅವರು 628365 ಮತಗಳನ್ನು ಪಡೆದು ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಗಣಿಧಣಿ ಜನಾರ್ದನ ರೆಡ್ಡಿ ಪರಮಾಪ್ತರಾದ ಬಿ.ಶ್ರೀರಾಮುಲು ಅವರಿಂದ ಬಳ್ಳಾರಿಯನ್ನು ಕಸಿದುಕೊಂಡಿದ್ದಾರೆ.

ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ

'ನಾನು ಬಳ್ಳಾರಿ ಜನರ ಮನೆ ಮಗನಾಗಿ ತಮಗಾಗಿ ಕೆಲಸ ಮಾಡುವೆ. ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗೆ ಇದೆ. ನಾಲ್ಕು ತಿಂಗಳ ಅವಧಿಯಲ್ಲಿ ಏನು ಮಾಡಲು ಸಾಧ್ಯವಿದೆಯೋ? ಅದನ್ನು ಮಾಡುವೆ' ಎಂದು ಉಗ್ರಪ್ಪ ಸಂತಸ ಹಂಚಿಕೊಂಡಿದ್ದಾರೆ.

ಸೋನಿಯಾ-ಸುಷ್ಮಾ ಜಿದ್ದಾಜಿದ್ದಿ ನೆನಪಿಸಿದ ಬಳ್ಳಾರಿಯ ಉಗ್ರಪ್ಪ ಗೆಲುವುಸೋನಿಯಾ-ಸುಷ್ಮಾ ಜಿದ್ದಾಜಿದ್ದಿ ನೆನಪಿಸಿದ ಬಳ್ಳಾರಿಯ ಉಗ್ರಪ್ಪ ಗೆಲುವು

ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶ ಮಾಡಿದ ವಿ.ಎಸ್.ಉಗ್ರಪ್ಪ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ಉಗ್ರಪ್ಪ ಉತ್ತಮ ವಾಗ್ಮಿ. ಕಾಂಗ್ರಸ್ ಪಕ್ಷದಲ್ಲಿ ನಾನಾ ಹುದ್ದೆಗಳನ್ನು ಅವರು ನಿಭಾಯಿಸಿದ್ದಾರೆ.

ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 5 ಕಾರಣಗಳುಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 5 ಕಾರಣಗಳು

ಪಾವಗಡದವರು ಉಗ್ರಪ್ಪ

ಪಾವಗಡದವರು ಉಗ್ರಪ್ಪ

* ವೆಂಕಟಪುರ ಸುಬ್ಬಯ್ಯ ಉಗ್ರಪ್ಪ
* 64 ವರ್ಷ
* ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಪುರ ಗ್ರಾಮದವರು
* ತಂದೆ ದಿ.ಸುಬ್ಬಯ್ಯ
* ಪತ್ನಿ ಕೆ.ವಿ.ಮಂಜುಳಾ
* ಒಬ್ಬ ಪುತ್ರ, ಒಬ್ಬಳು ಪುತ್ರಿ ಇದ್ದಾರೆ

ವ್ಯಾಸಂಗ, ವಿಳಾಸ

ವ್ಯಾಸಂಗ, ವಿಳಾಸ

ಉಪ ಚುನಾವಣೆ ಸಂದರ್ಭದಲ್ಲಿ ವಿ.ಎಸ್.ಉಗ್ರಪ್ಪ ವಿಳಾಸದ ಬಗ್ಗೆ ಭಾರಿ ಚರ್ಚೆಯಾಗಿತ್ತು. ಖಾಯಂ ವಿಳಾಸ ಪಾವಗಡ ತಾಲೂಕಿನ ವೆಂಕಟಪುರ ಗ್ರಾಮ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿನೂ ನಿವಾಸ ಹೊಂದಿದ್ದಾರೆ.

* ಬೆಂಗಳೂರು ವಿವಿಯಿಂದ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ
* ಕೃಷಿಕರು ಹೌದು

ರಾಜಕೀಯ ಜೀವನ

ರಾಜಕೀಯ ಜೀವನ

ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಬಂದ ವಿ.ಎಸ್.ಉಗ್ರಪ್ಪ ಅವರು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.

* 1995-1998 ವಿಧಾನ ಪರಿಷತ್ ಸದಸ್ಯರು
* 2004-2010 ವಿಧಾನ ಪರಿಷತ್ ಸದಸ್ಯರು
* 1993-1998 ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಕರ್ನಾಟಕ ಪ್ರದೇಶ ಜನತಾದಳ ಪಕ್ಷ
* 2000 ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಕೆಪಿಸಿಸಿ

ಹಲವು ಸಮಿತಿಗಳಲ್ಲಿ ಕೆಲಸ

ಹಲವು ಸಮಿತಿಗಳಲ್ಲಿ ಕೆಲಸ

* ವಿ.ಎಸ್.ಉಗ್ರಪ್ಪ ಅವರು ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಕಾಂಗ್ರೆಸ್‌ ರಚನೆ ಮಾಡಿದ್ದ ಸತ್ಯಶೋಧನಾ ಸಮಿತಿಯ ಅಧ್ಯಕ್ಷರಾಗಿದ್ದರು.

* ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿದ್ದರು.

ಸರ್ ಎನ್ನಬೇಡಿ

ಸರ್ ಎನ್ನಬೇಡಿ

ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿಕ್ರಿಯೆ ನೀಡಿರು ಅವರು, 'ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನನ್ನನ್ನು ಸರ್ ಎನ್ನಬೇಡಿ. ನಿಮ್ಮಲ್ಲಿ ಒಬ್ಬನಾಗಿ ಕರೆದರೆ ಸಾಕು. ನನ್ನ ಕೊನೆಯ ಉಸಿರು ಇರುವ ತನಕ ಬಳ್ಳಾರಿಯಲ್ಲೇ ಇರುವೆ' ಎಂದು ಹೇಳಿದ್ದಾರೆ.

English summary
Senior Congress leader V.S.Ugrappa elected as member of parliament from Ballari Lok Sabha seat. First-time he elected as MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X