ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಜೀನ್ಸ್‌ಗೆ ವಿದೇಶದಲ್ಲೂ ಬೇಡಿಕೆ, ಆದರೆ...

By ಭೀಮರಾಜ. ಯು. ವಿಜಯನಗರ
|
Google Oneindia Kannada News

ಹೌದು. ಬಳ್ಳಾರಿ ಎಂದರೆ ಇಡೀ ರಾಜ್ಯದಲ್ಲಿಯೇ ತನ್ನದೇ ಆದ ವಿವಿಧ ರೀತಿಯಲ್ಲಿ ಹೆಸರು ಪಡೆದುಕೊಂಡಿದೆ. ಅಕ್ರಮ ಗಣಿಗಾರಿಕೆ, ರಾಜ್ಯ ರಾಜಕೀಯ ಕೇಂದ್ರ ಬಿಂದು, ರೆಡ್ಡಿ ಸಹೋದರರ ಪ್ರಾಬಲ್ಯ, ರಿಯಲ್ ಎಸ್ಟೇಟ್ ಉದ್ಯಮ, ಬಿಸಿಲ ನಗರಿ ಹೀಗೆ ಹಲವು ರೀತಿಯಲ್ಲಿ ಹೆಸರನ್ನು ಪಡೆದುಕೊಂಡಿದೆ.

ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಒಂದು ಕಾಲ ಘಟ್ಟದಲ್ಲಿ ಇಡೀ ದೇಶದ ಗಮನ ಸೆಳೆದಿತ್ತು. ಈಗ ಅದೆಲ್ಲ ಬದಲಾಗಿ ಇಡೀ ದೇಶಕ್ಕೆ ಹೆಸರು ತರುವಂತಹ ಜೀನ್ಸ್ ಉದ್ಯಮ ವಿದೇಶ ಮಟ್ಟದಲ್ಲಿ ಬೆಳೆದು ನಿಂತಿದೆ. ಬಳ್ಳಾರಿಯಲ್ಲಿ ಉತ್ಪಾದನೆಯಾಗುವ ಜೀನ್ಸ್‌ಗೆ ವಿದೇಶದಲ್ಲೂ ಬೇಡಿಕೆ ಹೆಚ್ಚಾಗಿದೆ. ದಕ್ಷಿಣ ಭಾರತವಲ್ಲದೇ ದುಬೈ ಮತ್ತು ಶ್ರೀಲಂಕಾ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು.

 ಬಳ್ಳಾರಿ ಜಿಲ್ಲೆಯಲ್ಲಿರುವ ಒಟ್ಟು ಜೀನ್ಸ್ ಘಟಕಗಳು

ಬಳ್ಳಾರಿ ಜಿಲ್ಲೆಯಲ್ಲಿರುವ ಒಟ್ಟು ಜೀನ್ಸ್ ಘಟಕಗಳು

ಜೀನ್ಸ್ ಉತ್ಪಾದನೆಯಲ್ಲಿ ಬಳ್ಳಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಒಟ್ಟು 500 ಜೀನ್ಸ್ ಘಟಕಗಳಿವೆ. ಕಳೆದ ಒಂದು ವರ್ಷದಿಂದ ಸಾಕಷ್ಟು ಸವಾಲು ಎದುರಿಸುತ್ತ ಮಂದಗತಿಯಲ್ಲಿ ಸಾಗುತ್ತಾ ಜೀನ್ಸ್ ಉದ್ಯಮ ಮುಚ್ಚುವ ಅಂತ ತಲುಪುತ್ತಿದೆ. ಬಳ್ಳಾರಿಯ ಜೀನ್ಸ್ 500 ಘಟಕಗಳಲ್ಲಿ ಈಗಾಗಲೇ 20 ಘಟಕಗಳು ಕೊರೊನಾ ಸೋಂಕು, ಲಾಕ್‌ಡೌನ್ ಹೊಡೆತಕ್ಕೆ ಮುಚ್ಚಿ ಹೋಗಿವೆ. ಇನ್ನುಳಿದ ಘಟಕಗಳು ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳದಿಂದಾಗಿ ಮುಚ್ಚುವ ಹಂತಕ್ಕೆ ತಲುಪಿವೆ.

 ಜೀನ್ಸ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ

ಜೀನ್ಸ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ

ಕೊರೊನಾ ಒಂದನೇ ಮತ್ತು ಎರಡನೇ ಅಲೆಯಿಂದಾಗಿ ಜೀನ್ಸ್ ಉದ್ಯಮ ಸಾಕಾಷ್ಟು ನಷ್ಟವನ್ನು ಅನುಭವಿಸುತ್ತಿದೆ. ಇದರ ಮಧ್ಯೆಯೂ ಚೇತರಿಸಿಕೊಂಡು ಮುನ್ನುಗ್ಗುತ್ತಿರುವಾಗಲೇ, ಈಗ ಮತ್ತೆ ಕೊರೊನಾ ಮೂರನೇ ಅಲೆ ರಾಜ್ಯಕ್ಕೆ ಕಾಲಿಡುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ. ಇದರಿಂದಾಗಿ ಜೀನ್ಸ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಲ್ಲಿ ತಯಾರಾಗುವ ಜೀನ್ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದೆ.

 ದುಬೈ ಮತ್ತು ಶ್ರೀಲಂಕಾ ದೇಶಕ್ಕೆ ರಫ್ತು

ದುಬೈ ಮತ್ತು ಶ್ರೀಲಂಕಾ ದೇಶಕ್ಕೆ ರಫ್ತು

ದಕ್ಷಿಣ ಭಾರತವಲ್ಲದೇ ದುಬೈ ಮತ್ತು ಶ್ರೀಲಂಕಾ ದೇಶಕ್ಕೂ ಹೇರಳವಾಗಿ ರಫ್ತು ಮಾಡಲಾಗುತ್ತಿದೆ. ಆದರೆ ಈಗ ರಫ್ತು ನಿಂತಿದ್ದರಿಂದ ವ್ಯಾಪಾರ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಕೊರೊನಾ ಮೊದಲ ಅಲೆ ಬಂದಾಗಲೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಜೀನ್ಸ್ ವ್ಯಾಪಾರಸ್ಥರಿಗೆ, ಎರಡನೇ ಅಲೆ ಅಪ್ಪಳಿಸಿದ ಬಳಿಕ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದಲ್ಲದೇ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗ ಮತ್ತೆ 80ಕ್ಕೂ ಹೆಚ್ಚು ಜೀನ್ಸ್ ಘಟಕಗಳು ಮುಚ್ಚುವ ಹಂತ ತಲುಪಿದೆ.

 ಬೀದಿಗೆ ಬಂದ ಕುಟುಂಬಗಳು

ಬೀದಿಗೆ ಬಂದ ಕುಟುಂಬಗಳು

ಜೀನ್ಸ್ ಉದ್ಯಮ ನಂಬಿ ಬದುಕುವ ಕುಟುಂಬಗಳು ಕೇವಲ ಬಳ್ಳಾರಿಯಲ್ಲಿಲ್ಲ. ಇದನ್ನೇ ನೆಚ್ಚಿ ಆಂಧ್ರಪ್ರದೇಶ, ಕರ್ನಾಟಕದ ಇತರೆ ಜಿಲ್ಲೆಗಳಲ್ಲೂ ಇವೆ. ಒಂದೊಂದು ಘಟಕದಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಾರೆ. ಆಂಧ್ರದ ಅನಂತಪುರ, ಕರ್ನೂಲ್ ಜಿಲ್ಲೆಯಿಂದ ನೂರಾರು ಕಾರ್ಮಿಕರು, ಬಳ್ಳಾರಿಯ ಮಧ್ಯಮ ಹಾಗೂ ಬಡ ವರ್ಗದ ಅನೇಕ ಕುಟುಂಬಗಳು ಇಲ್ಲಿ ಕೆಲಸ ನಿರ್ವಹಿಸಿ ಜೀವನದ ಬಂಡಿ ಸಾಗಿಸುತ್ತಿವೆ. ಕೊರೊನಾದ ಹೊಡೆತದಿಂದ ದೂರದಿಂದ ಬರುವ ಕಾರ್ಮಿಕರು ಕೆಲಸಕ್ಕೆ ಬರುವುದನ್ನು ನಿಲ್ಲಿಸಿ, ತಮ್ಮ ತಮ್ಮ ಗ್ರಾಮಗಳಲ್ಲೇ ಬೇರೊಂದು ಕಾಯಕ ಹುಡುಕಿಕೊಂಡಿದ್ದಾರೆ. ಒಂದೆಡೆ ಕಾರ್ಮಿಕರ ಕೊರತೆ, ಇನ್ನೊಂದೆಡೆ ಉತ್ಪಾದನಾ ವೆಚ್ಚ ಹೆಚ್ಚಳ, ಮಾರುಕಟ್ಟೆಯಿಲ್ಲದ ಸ್ಥಿತಿ ನಿರ್ಮಾಣವಾಗಿ ಜೀನ್ಸ್ ಘಟಕಗಳು ಮುಚ್ಚುವ ಹಂತ ತಲುಪಿವೆ.

 ಚೀನಾ ಮತ್ತು ಪಾಕಿಸ್ತಾನದಿಂದ ಆಮದು ಸ್ಥಗಿತ

ಚೀನಾ ಮತ್ತು ಪಾಕಿಸ್ತಾನದಿಂದ ಆಮದು ಸ್ಥಗಿತ

ಬಳ್ಳಾರಿಯಲ್ಲಿ ಉತ್ಪಾನೆಯಾಗುವ ಜೀನ್ಸ್ ತಯಾರಿಕೆಗೆ ಹತ್ತಿಯಿಂದ ತಯಾರಾಗುವ ಲೇಯರ್ ಬೇಕು. ಇದನ್ನು ಪಾಕಿಸ್ತಾನ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. 2019ರಲ್ಲಿ ಗಡಿಭಾಗದಲ್ಲಿ ಚೀನಾದ ಸೈನಿಕರು ಭಾರತದ 22 ಸೈನಿಕರನ್ನು ಹತ್ಯೆ ಮಾಡಿದಾಗ, ಚೀನಾ ವಸ್ತುಗಳ ತಿರಸ್ಕಾರದ ಆಂದೋಲನ ಇಡೀ ದೇಶ ವ್ಯಾಪಿ ಹಬ್ಬಿತ್ತು. ಈ ಸಮಯದಲ್ಲಿ ಬಳ್ಳಾರಿ ಜೀನ್ಸ್ ಮಾಲೀಕರು ಪಾಕಿಸ್ತಾನ ಮತ್ತು ಚೀನಾದಿಂದ ಅಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರು. ವ್ಯಾಪಾರಕ್ಕಿಂತ ದೇಶ ಮುಖ್ಯ ಎಂದು ಘೋಷಿಸಿ ಪಾಕಿಸ್ತಾನ ಮತ್ತು ಚೀನಾಕ್ಕೆ ಸೆಡ್ಡು ಹೊಡೆದಿದ್ದರು. ಈಗಲೂ ಅದರಂತೆ ನಡೆದುಕೊಳ್ಳುತ್ತಿದ್ದಾರೆ.

 ಜೀನ್ಸ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ

ಜೀನ್ಸ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ

"ಕೊರೊನಾ ಸೋಂಕು ಬಂದ ಬಳಿಕ ಜೀನ್ಸ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಈಗಾಗಲೇ ಶೇ.30 ಘಟಕಗಳು ಮುಚ್ಚುವ ಹಂತಕ್ಕೆ ಬಂದಿವೆ.

ಮೂರನೇ ಅಲೆ ಬರುವ ಮುನ್ಸೂಚನೆ ಗೋಚರಿಸುತ್ತಿರುವುದರಿಂದ ಉತ್ಪಾದನೆ ಕಡಿಮೆ ಮಾಡುತ್ತಿದ್ದೇವೆ. ಯಾವುದೇ ಸಮಯದಲ್ಲಾದರೂ ಲಾಕ್‌ಡೌನ್ ಮಾಡುವ ಆತಂಕ ಕಾಡುತ್ತಿದೆ. ಇದರ ಬೆನ್ನಲ್ಲೇ ಕೋವಿಡ್ ಮೂರನೇ ಅಲೆಯ ಆತಂಕ ಕಾಡುತ್ತಿರುವುದರಿಂದ ಮತ್ತಷ್ಟು ಘಟಕಗಳು ಮುಚ್ಚುವ ಸಾಧ್ಯತೆ ಇದೆ," ಎಂದು ಬಳ್ಳಾರಿಯ ಜೀನ್ಸ್ ಉದ್ಯಮಿ ಭರತ್ ಜೈನ್ ಹೇಳಿದರು.

English summary
Ballari is internationally recognized for its production of jeans with a total of 500 jeans Units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X