ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋತಿ ವೃತ್ತ ಬಳಿಯ ರೈಲ್ವೆ ಸೇತುವೆ ಅಗಲೀಕರಣಕ್ಕೆ ಮನವಿ

|
Google Oneindia Kannada News

ಬಳ್ಳಾರಿ, ಆ.12: ನಗರದ ಮೋತಿ ವೃತ್ತದ ರೈಲ್ವೆ ಸೇತುವೆ ಅಗಲೀಕರಣ ಸೇರಿದಂತೆ ಬಳ್ಳಾರಿ ನಗರದ ಪ್ರಮುಖ ರೈಲ್ವೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರ ನೇತೃತ್ವದ ನಿಯೋಗವು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಬೆಳಗಾವಿಯಲ್ಲಿ ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿತು.

ಬಳ್ಳಾರಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಆದ್ಯತೆ ಮೇರೆಗೆ ಈ ರೈಲ್ವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವರಾದ ಸುರೇಶ್ ಅಂಗಡಿ ಅವರಲ್ಲಿ ಕೋರಿದರು.

ಬಳ್ಳಾರಿ ನಗರದ ಹೃದಯಭಾಗದಲ್ಲಿರುವ ಮೋತಿ ವೃತ್ತದ ಬಳಿಯ ರೈಲ್ವೆ ಬ್ರಿಡ್ಜ್ ನಿರ್ಮಾಣಗೊಂಡು ಸುಮಾರು 65 ವರ್ಷಗಳಷ್ಟು ಹಳೆಯದಾಗಿರುತ್ತದೆ. ಈ ಬ್ರಿಡ್ಜ್ ನ ಎರಡು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಿಂದ ಚತುಷ್ಪತ ರಸ್ತೆ ನಿರ್ಮಾಣವಾಗಿರುತ್ತದೆ. ಪ್ರಸ್ತುತ ಬಳ್ಳಾರಿ ನಗರವು ಅತಿವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕಾರಣ ದಿನೇದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ವಾಹನ ಸವಾರರಿಗೆ ತುಂಬಾ ಅನಾನುಕೂಲವಾಗುತ್ತಿದೆ. ಆದುದರಿಂದ ಮೋತಿ ವೃತ್ತದ ರೈಲ್ವೆ ಬ್ರಿಡ್ಜ್ ಅಗಲೀಕರಣ ಮಾಡಿದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ ಎಂದು ರೈಲ್ವೆ ರಾಜ್ಯಖಾತೆ ಸಚಿವ ಅಂಗಡಿ ಅವರಲ್ಲಿ ಕೇಳಿಕೊಂಡರು.

Ballari: Demand for Railway bridge expansion

ಸುಧಾ ಕ್ರಾಸ್ ನಲ್ಲಿ ಬರುವ ರೈಲ್ವೆ ಫ್ಲೈ ಒವರ್ ನಿರ್ಮಿಸಿ
ಸುಧಾಕ್ರಾಸ್‌ನಲ್ಲಿ ಬರುವ ರೈಲ್ವೆ ಫ್ಲೈಒವರ್ ನಿರ್ಮಿಸಬೇಕು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರ ನೇತೃತ್ವದ ತಂಡವು ಮನವಿ ಮಾಡಿತು.

ಈ ಪ್ರದೇಶವು ಹೊಸಪೇಟೆ ನಗರದಿಂದ ಬರುವ ವಾಹನಗಳು ಹಾಗೂ ನಗರದ ಟಿ.ಬಿ.ಸ್ಯಾನಿಟೋರಿಯಂ, ಒಪಿಡಿ ಆಸ್ಪತ್ರೆ, ಬೆಳಗಲ್ಲು ಕ್ರಾಸ್, ಕಂಟೋನ್ಮೆಟ್ ಹಾಗೂ ರೇಡಿಯೋ ಪಾರ್ಕ್ ನಲ್ಲಿನ ವಸತಿ ಜನಸಂದಣಿಯಿರುವ ಬರುವ ವಾಹನಗಳು ಹಾಲಿಯಿರುವ ಸುಧಾ ಕ್ರಾಸ್ ರೈಲ್ವೆಗೇಟ್ ಮುಖಾಂತರ ಬಳ್ಳಾರಿ ನಗರಕ್ಕೆ ಪ್ರವೇಶ ಪಡೆಯುತ್ತಿದ್ದು, ಸುಧಾ ಕ್ರಾಸಿನಲ್ಲಿರುವ ರೈಲ್ವೆ ಗೇಟನ್ನು ಮುಚ್ಚುವುದರಿಂದ ಉದ್ದವಾದ ವಾಹನದಟ್ಟನೆ ಆಗುತ್ತದೆ. ಅಲ್ಲದೆ ಸದರಿ ಪ್ರದೇಶದಲ್ಲಿ ಹಲವಾರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿದ್ದು ಸದರಿ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳ ಅನಾನುಕೂಲ ಆಗುತ್ತಿರುತ್ತದೆ. ಆದರಿಂದ ಸದರಿ ರೈಲ್ವೆ ಹಳಿ ಮೇಲ್ಭಾಗದಲ್ಲಿ ರೈಲ್ವೆ ಫ್ಲೈಓವರ್ ನಿರ್ಮಿಸುವುದು ಸೂಕ್ತ ಎಂಬುದನ್ನು ರೈಲ್ವೆ ಸಚಿವರಿಗೆ ವಿವರಿಸಿದರು.

ರಂಗಮಂದಿರ ಹತ್ತಿರವಿರುವ ಹಾಲಿ ರೈಲ್ವೆ ವೆಂಟ್‌ನ್ನು ಎತ್ತರಿಸಿ
ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಹತ್ತಿರವಿರುವ ರೈಲ್ವೆ ವೆಂಟ್‌ನ್ನು ಎತ್ತರಿಸಬೇಕು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರು ಸಚಿವರಲ್ಲಿ ಕೋರಿದರು.

ಬೆಂಗಳೂರು ಬಳ್ಳಾರಿ ಮುಖ್ಯರಸ್ತೆಯಿಂದ ಖಾಸಗಿ ಬಸ್ ತಂಗುದಾಣ, ಮಹಾನಗರಪಾಲಿಕೆಯ ಘನತಾಜ್ಯ ವಿಂಗಡಣಾ ಘಟಕ, ರೇಡಿಯೋ ಪಾರ್ಕ್ ಮತ್ತು ಹೊಸಪೇಟೆ ನಗರಕ್ಕೆ ಪ್ರಮುಖ ರಸ್ತೆಯಾಗಿದ್ದು ಈ ರಸ್ತೆಯಲ್ಲಿನ ಹಾಲಿ ಇರುವ ಎರಡು ರೈಲ್ವೆ ವೆಂಟ್ ಗಳಲ್ಲಿ ಒಂದು ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ ಅಲ್ಲದೆ ಮತ್ತೊಂದು ರೈಲ್ವೆ ವೆಂಟ್ ನಲ್ಲಿ ಮಳೆಗಾಲದಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಆಡಚಣೆ ಉಂಟಾಗುತ್ತದೆ. ಆದುದರಿಂದ ಹಾಲಿ ಎತ್ತರ ಕಡಿಮೆ ಇರುವ ರೈಲ್ವೆ ವೆಂಟ್ ನ್ನು ಸೂಕ್ತವಾಗಿ ಎತ್ತರಿಸಿದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರಕ್ಕೆ ಯೋಗ್ಯವಾಗಲಿದೆ ಎಂದು ವಿವರಿಸಿದರು.

Ballari: Demand for Railway bridge expansion

ಅನಂತಪುರ ರಸ್ತೆಯಿಂದ ಸಂಗನಕಲ್ಲು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗದಲ್ಲಿನ ರೈಲ್ವೆ ಹಳಿಗೆ ಅಂಡರ್ ಬ್ರಿಡ್ಜ್ ನಿರ್ಮಿಸಬೇಕು ಎಂದು ಸಚಿವರಿಗೆ ಇದೇ ಸಂದರ್ಭದಲ್ಲಿ ಕೋರಿದರು.

ಈ ರಸ್ತೆಯು ಬಳ್ಳಾರಿ ನಗರದ ಅನಂತಪುರ ಮುಖ್ಯರಸ್ತೆಯಿಂದ ಬಳ್ಳಾರಿ ಸಂಗನಕಲ್ಲು ಸಂಪರ್ಕವಿದ್ದು ಈ ರಸ್ತೆಯು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಯಲ್ಲಿ 24 ಮೀ ಅಗಲಕ್ಕೆ ಉದ್ದೇಶಿಸಲಾಗಿದ್ದು,ಸದರಿ ಪಥದಲ್ಲಿ ಈಗಾಗಲೇ ಪ್ರಾಧಿಕಾರದ ವಸತಿ ವಿನ್ಯಾಸ ಹಾಗೂ ಖಾಸಗಿ ವಸತಿ ವಿನ್ಯಾಸಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಮಧ್ಯದಲ್ಲಿರುವ ರೈಲ್ವೆ ಹಳಿಗೆ ಸಣ್ಣ ವೆಂಟ್ ಇದ್ದು ಈ ವೆಂಟ್ ಅನ್ನು ಮಹಾ ಯೋಜನೆಯಲ್ಲಿನ ರಸ್ತೆಗೆ ಅನುಗುಣವಾಗಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಿಸಬೇಕಾಗುತ್ತದೆ. ಇಲ್ಲಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಿಸುವುದರಿಂದ ಹಾಲಿ ಅನಂತಪುರ ರಸ್ತೆಯಿಂದ ಬರುವ ವಾಹನ ದಟ್ಟನೆಯು ಬಳ್ಳಾರಿ ನಗರಕ್ಕೆ ಪ್ರವೇಶಿಸದೆ ಉದ್ದೇಶಿತ ರಸ್ತೆ ಮುಖಾಂತರ ಬಳ್ಳಾರಿ ಅನಂತಪುರ ಮುಖ್ಯರಸ್ತೆಯಿಂದ ಬಳ್ಳಾರಿ ಸಂಗನಕಲ್ಲು ರಸ್ತೆಗೆ ಸಂಪರ್ಕ ಕಲ್ಪಿಸಿದಂತೆ ಆಗುವುದರಿಂದ ಈ ಕಾಮಗಾರಿಯನ್ನು ಕೈಗೊಳ್ಳುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಈ ಪ್ರಮುಖ ರೈಲ್ವೆ ಕಾಮಗಾರಿಗಳನ್ನು ಹಾಗೂ ಇನ್ನಿತರ ರೈಲ್ವೆ ಕಾಮಗಾರಿಗಳನ್ನು ಬಳ್ಳಾರಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಪ್ರಮುಖವೆಂದು ಪರಿಗಣಿಸಬೇಕು ಎಂದು ಸಚಿವ ಸುರೇಶ ಅಂಗಡಿ ಅವರಲ್ಲಿ ಕೋರಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್,ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಘೂಳಪ್ಪ ಬಿ.ಹೊಸಮನಿ, ರಾಯಚೂರು ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ್ ರೆಡ್ಡಿ, ರೈಲ್ವೆ ಎಂಜಿನಿಯರ್ ಸೋಮಶೇಖರ್ ಹಾಗೂ ಬುಡಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಶಂಕರ್, ಮುಖಂಡರಾದ ರಾಜು ಚಿಕ್ಕನಗೌಡ, ವಿಜಯ ಪಾಟೀಲ್ ಉಪಸ್ಥಿತರಿದ್ದರು. (ಮಾಹಿತಿ ಕೃಪೆ: ವಾರ್ತಾ ಇಲಾಖೆ)

English summary
Ballari: MLA Somashekhar Reddy and MP Y Devedrappa submitted a request demanding expansion of Railway bridge off Moti circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X