ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಲಾರ, ಉಚ್ಚೆಂಗಿದುರ್ಗ ಕ್ಷೇತ್ರಕ್ಕೆ ಭಕ್ತಾದಿಗಳ ಪ್ರವೇಶ ನಿರ್ಬಂಧ

|
Google Oneindia Kannada News

ಬಳ್ಳಾರಿ/ವಿಜಯನಗರ, ಜ.14: ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ರೂಪಾಂತರ ಓಮಿಕ್ರಾನ್ ವೈರಸ್ ಹರಡದಂತೆ ಮುನ್ನಚ್ಚರಿಕೆ ಸಲುವಾಗಿ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಹರಪನಳ್ಳಿ ತಾಲೂಕಿನ ಉಚ್ಚೆಂಗಿದುರ್ಗದ ಉತ್ಸವಾಂಬ ದೇವಿ ದೇವಸ್ಥಾನಕ್ಕೆ ಜ.17ರಂದು ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಮತ್ತು ಹೆಚ್ಚಿನ ಜನಸಂದಣಿ ಸೇರದಂತೆ ನಿಷೇಧಾಜ್ಞೆ ಜಾರಿಗೊಳಿಸಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಆದೇಶ ಹೊರಡಿಸಿದ್ದಾರೆ.

ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ ಪತ್ರ ಆದರಿಸಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಈ ಆದೇಶ ಹೊರಡಿಸಿದ್ದಾರೆ.

ಮೈಲಾರ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಜ.17ರಂದು ಹುಣ್ಣಿಮೆ ಪ್ರಯುಕ್ತ ಸುಮಾರು 30ರಿಂದ 40 ಸಾವಿರ ಭಕ್ತಾದಿಗಳು ಬಂದು ದರ್ಶನ ಪಡೆದುಕೊಳ್ಳುವ ಸಂಭವವಿರುತ್ತದೆ. ಅದೇ ರೀತಿ ಹರಪನಳ್ಳಿ ತಾಲೂಕಿನ ಉಚ್ಚೆಂಗಿದುರ್ಗದ ಉತ್ಸವಾಂಬ ದೇವಿ ದೇವಸ್ಥಾನಕ್ಕೂ ಸಹ ಹುಣ್ಣಿಮೆ ದಿನವಾದ ಜ.17ರಂದು ಸುಮಾರು 30ರಿಂದ 40 ಸಾವಿರ ಭಕ್ತಾದಿಗಳು ಬಂದು ದರ್ಶನ ಪಡೆದುಕೊಳ್ಳುವ ಸಂಭವವಿರುತ್ತದೆ.

Ballari: COVID Norms Restricts Devotees From Visiting Mylara and Uchchangi Durga Temple

ಅಲ್ಲದೇ ಭಕ್ತಾದಿಗಳು ಕರ್ನಾಟಕ ರಾಜ್ಯ ಹಾಗೂ ನೆರೆರಾಜ್ಯಗಳಿಂದ ಬರುವ ಸಂಭವವಿದ್ದು,ಈ ಸಮಯದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆಯ ನಿಯಮಗಳನ್ನು ಭಕ್ತಾದಿಗಳು ಅನುಸರಿಸುವುದಿಲ್ಲ, ಕೋವಿಡ್ ರೂಪಾಂತರ ಓಮಿಕ್ರಾನ್ ವೈರಸ್ ಹರಡುವ ಸಂಭವವಿರುವ್ಯದರಿಂದ ದೇವಸ್ಥಾನಕ್ಕೆ ಪ್ರವೇಶಕ್ಕೆ ಭಕ್ತಾದಿಗಳನ್ನು ನಿರ್ಬಂಧಿಸುವುದು ಅವಶ್ಯಕವಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ballari: COVID Norms Restricts Devotees From Visiting Mylara and Uchchangi Durga Temple

ಹಂಪಿ ಸುತ್ತಾ ಮುತ್ತಾ ನಿಷೇಧಾಜ್ಞೆ
ವೈಕುಂಠ ಏಕದಾಶಿ ಮತ್ತು ಮಕರ ಸಂಕ್ರಾಂತಿ ಹಿನ್ನೆಲೆ ಹಂಪಿಯಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎನ್ನುವ ಕಾರಣಕ್ಕಾಗಿ ಜ.13ರಿಂದ 17ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಂಪಿಯಲ್ಲಿರುವ ಯಾವುದೇ ಸ್ಮಾರಕಗಳು ಒಪನ್ ಮಾಡದಂತೆ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಕೋವಿಡ್ ಪ್ರಕರಣಗಳು ಬಂದಿರುವುದು ವರದಿಯಾಗಿಲ್ಲ; ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳನ್ನು ಬಂದ್ ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಆಕ್ಸಿಜನ್ ಸಮರ್ಪಕ ಸಂಗ್ರಹ: ಕೋವಿಡ್ ಸೊಂಕಿತರ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಸಮರ್ಪಕ ಪ್ರಮಾಣದಲ್ಲಿ ಆಕ್ಸಿಜನ್ ಸಂಗ್ರಹಿಸಿಡಲಾಗಿದೆ; ಇನ್ನೂ ಆಕ್ಸಿಜನ್ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬೆಡ್‍ಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದರು.

ಸೊಂಕಿತರ ಮನೆಗೆ ಪೋಸ್ಟರ್‌ಗಳನ್ನು ಲಗತ್ತಿಸಲಾಗುತ್ತಿದೆ; ಅವರು ಹೊರಗಡೆ ಓಡಾಡಬಾರದು ಮತ್ತು ಸುತ್ತಮುತ್ತಲಿನವರಿಗೂ ಆ ಕಡೆ ಸುಳಿಯಬಾರದು ಎನ್ನುವ ದೃಷ್ಟಿಯಿಂದ ಎಂದರು.

ಹೋಂ ಐಸೋಲೇಶನ್ ಒಳಗಾಗುವವರಿಗೆ ಆರೋಗ್ಯ ಕಿಟ್ ನೀಡಲಾಗುತ್ತಿದ್ದು, ಈಗಾಗಲೇ ರಚಿಸಲಾಗಿರುವ ಆರ್‍ಆರ್‌ಟಿ ತಂಡಗಳು ಸೊಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿವೆ ಮತ್ತು ಆರೋಗ್ಯ ವಿಷಮಿಸಿದಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಲಾಗುತ್ತಿದೆ ಎಂದರು.

ಗ್ರಾಪಂ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಗಳು ವಾರಂತ್ಯ ಕಫ್ರ್ಯೂ ಜಾರಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವಿಕೆ ಸೇರಿದಂತೆ ಇನ್ನಿತರ ಕೋವಿಡ್ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದರು.

Ballari: COVID Norms Restricts Devotees From Visiting Mylara and Uchchangi Durga Temple

ಮೈಲಾರ ಲಿಂಗೇಶ್ವರ ದೇವಾಲಯ
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನೈಋತ್ಯಕ್ಕಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ತುಂಗಭದ್ರಾ ನದಿ ತಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಜಗತ್ಪ್ರಸಿದ್ದ. ಹಾಗೇ, ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.

Recommended Video

ಭಾರತೀಯ ಸೇನೆಯಿಂದ ಸ್ಪೆಷಲ್ ವಿಡಿಯೋ ಬಿಡುಗಡೆ | Oneindia Kannada

ಬಳ್ಳಾರಿ ಜಿಲ್ಲೆ ಹಡಗಲಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಸ್ ಸೌಕರ್ಯವಿದೆ. ಹಡಗಲಿಯಿಂದ ಈ ಕ್ಷೇತ್ರಕ್ಕೆ 40 ಕಿ.ಮೀ ಹಾಗೂ ರಾಣೆ ಬೆನ್ನೂರಿನಿಂಡ 34 ಕಿ.ಮೀ ಆಗುತ್ತದೆ. ಗೊರವ ಸಮುದಾಯದ ಅಧಿದೇವತೆ ಪರಮ ಶಿವನನ್ನು ಇಲ್ಲಿ ಮೈಲಾರ ಲಿಂಗರೂಪಿಯಾಗಿ ಪೂಜಿಸಲಾಗುತ್ತದೆ. ಕಂಬಳಿ ಹೊದ್ದು, ಢಮರುಗ ಹಿಡಿದು ಹಣೆಯಲ್ಲಿ ಭಂಡಾರ ತೊಟ್ಟು ಮೈಲಾರಿ ವೇಷಧಾರಿಯಾಗಿ ಶಿವನನ್ನು ಪೂಜಿಸಲಾಗುತ್ತದೆ. ಮಲ್ಲಾಸುರ, ಮಣಿಕಾಸುರನನ್ನು ಮೈಲಾರ ರೂಪದಲ್ಲಿ ಅವತರಿಸಿದ ಶಿವ ಕೊಂದು ಹಾಕಿದ್ದು ಪೌರಣಿಕ ಕಥೆಗಳಲ್ಲಿ ಓದಬಹುದು.

English summary
According to guidelines issued by the Ballari District administration Devotees are restricted from visiting Mylara and Uchchangi durga Temple on Jan 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X