ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ

|
Google Oneindia Kannada News

ಬಳ್ಳಾರಿ, ಜನವರಿ 27; ಬಳ್ಳಾರಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು 800 ಎಂ. ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದ್ದಾರೆ. ಪ್ರತಿ ಬೇಸಿಗೆಯಲ್ಲಿ ಬಳ್ಳಾರಿ ನಗರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿತ್ತು.

ಬುಧವಾರ ಬಳ್ಳಾರಿ ‌ನಗರದಲ್ಲಿ‌ ಕುಡಿಯುವ ನೀರಿನ ಕೊರತೆ ಆಗದಂತೆ ಸಂರಕ್ಷಿಸಲು 65 ಲಕ್ಷ ಲೀಟರ್ ಸಾಮರ್ಥ್ಯದ ಮದರ್ ಟ್ಯಾಂಕ್ ಕಂಫಾರ್ಟ್ ಮೆಂಟ್ ಹಾಗೂ ನಗರಕ್ಕೆ ಕುಡಿಯುವ ನೀರಿನ ಸಲುವಾಗಿ 800 ಎಂ.ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬುವ ಕಾರ್ಯಕ್ರಮಕ್ಕೆ ತಾಲೂಕಿನ ಶಿವಪುರ ಬಳಿ ಸಚಿವರು ಚಾಲನೆ ನೀಡಿದರು.

ಅಣ್ಣನ ಸಾಲಕ್ಕೆ ತಮ್ಮನ ಮನೆ ಬರೆಸಿಕೊಂಡು ಬಳ್ಳಾರಿ ಕಾಂಗ್ರೆಸ್ ನಾಯಕನ ದಾದಾಗಿರಿ ಅಣ್ಣನ ಸಾಲಕ್ಕೆ ತಮ್ಮನ ಮನೆ ಬರೆಸಿಕೊಂಡು ಬಳ್ಳಾರಿ ಕಾಂಗ್ರೆಸ್ ನಾಯಕನ ದಾದಾಗಿರಿ

ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ್ ರೆಡ್ಡಿ, ಬಿ. ನಾಗೇಂದ್ರ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೊಳಚೆ ನೀರು ನುಗ್ಗುವುದು ತಡೆಯಲು ಮನೆ 3 ಅಡಿ ಮೇಲೆತ್ತಿದ ಮಾಲೀಕ!ಕೊಳಚೆ ನೀರು ನುಗ್ಗುವುದು ತಡೆಯಲು ಮನೆ 3 ಅಡಿ ಮೇಲೆತ್ತಿದ ಮಾಲೀಕ!

Ballari City To Get 24*7 Drinking Water

ಈ ಕಾರ್ಯಕ್ರಮಕ್ಕೂ ಮೊದಲು 73 ನೇ ಗಣರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಬಿ. ಶ್ರೀರಾಮುಲು ಗಣರಾಜ್ಯೋತ್ಸವ ಸಂದೇಶ ನೀಡಿದರು.

ಕೃಷ್ಣಾ ನದಿ ನೀರು ಹಂಚಿಕೆ; ಸುಪ್ರೀಂ ಮೊರೆ ಹೋದ ಕರ್ನಾಟಕ ಕೃಷ್ಣಾ ನದಿ ನೀರು ಹಂಚಿಕೆ; ಸುಪ್ರೀಂ ಮೊರೆ ಹೋದ ಕರ್ನಾಟಕ

"ಇಂದಿನ ಧ್ವಜಾರೋಹಣದೊಂದಿಗೆ ನವ ಬಳ್ಳಾರಿ ನಿರ್ಮಾಣದ, ಅಭಿವೃದ್ಧಿಯ ಹೊಸ ಶಖೆ ಆರಂಭ ಆಗಿದೆ. ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ನಮ್ಮ ಜಿಲ್ಲೆಯ ಶಕ್ತಿಯಾಗಿವೆ. ಜಗತ್ತಿನ ಶ್ರೇಷ್ಠ ದರ್ಜೆಯ ಕಬ್ಬಿಣ ಮತ್ತು ಉಕ್ಕಿನ ಕನಿಜ ಬಳ್ಳಾರಿ ಜಿಲ್ಲೆಯಲ್ಲಿದೆ" ಎಂದರು.

Ballari City To Get 24*7 Drinking Water

ಕುಡಿಯುವ ನೀರು; "ಬಳ್ಳಾರಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಇನ್ಮುಂದೆ ಮುಕ್ತಿ ಸಿಗಲಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮೋಕಾ ಗ್ರಾಮದ ಹತ್ತಿರ 800 ದಶಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಸಂಗ್ರಹಗಾರ ಹಾಗೂ 13.50 ದಶಲಕ್ಷ ಲೀಟರ್ ಸಾಮರ್ಥ್ಯದ ಮದರ್ ಟ್ಯಾಂಕ ಅನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ; ತುಂಗಭದ್ರಾ ಜಲಾಶಯವಿದ್ದರೂ, ಅದು ಭರ್ತಿಯಾದರೂ ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಎದುರಾಗುತ್ತಿತ್ತು. 2019ರಲ್ಲಿ 15 ದಿನಕ್ಕೊಮ್ಮೆ ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಬಳ್ಳಾರಿ ಮಹಾನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಜವಾಬ್ದಾರಿ ಹೊಂದಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲು ಅಲ್ಲೀಪುರ ಕೆರೆಗೆ ನೀರು ತುಂಬಿಸಬೇಕಿತ್ತು.

ಕಳೆದ 7-8 ವರ್ಷಗಳಿಂದ ನಗರಕ್ಕೆ 24 ಗಂಟೆ ನೀರು ಪೂರೈಕೆ ಮಾಡುವ ಕುಡಿಯುವ ನೀರಿನ ಯೋಜನೆ ಕುಂಟುತ್ತಾ ಸಾಗಿತ್ತು. ಆದ್ದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ.

2020ರ ಜೂನ್‌ನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಬಳ್ಳಾರಿ ನಗಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ 12 ವಲಯಗಳನ್ನು ಲೋಕಾರ್ಪಣೆ ಮಾಡಿದ್ದರು.

ಬಳಿಕ ಮಾತನಾಡಿದ್ದ ಸಚಿವರು, '12 ವಲಯಗಳನ್ನು ಲೋಕಾರ್ಪಣೆ ಮಾಡಿದ್ದು ಸಂತಸ ತಂದಿದೆ. ಇನ್ನೂ 15 ವಲಯಗಳನ್ನು ಡಿಸೆಂಬರ್‌ನಲ್ಲಿ ಉದ್ಘಾಟನೆ ಮಾಡಲಾಗುತ್ತದೆ" ಎಂದು ಹೇಳಿದ್ದರು.

ಬಳ್ಳಾರಿ ನಗರದ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, "2008ರಲ್ಲಿ ಬಳ್ಳಾರಿ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡುವ ಕನಸು ಕಂಡಿದ್ದೆ. ಅದು ಈಗ ಜಾರಿಯಾಗುತ್ತಿರುವುದು ಸಂತಸ ತಂದಿದೆ" ಎಂದು ತಿಳಿಸಿದ್ದರು.

ಬಳ್ಳಾರಿ ನಗರಕ್ಕೆ ಅಲ್ಲೀಪುರ ಮತ್ತು ಮೋಕಾ ಕೆರೆಗಳಿಂದ ನೀರು ಪೂರೈಕೆ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಕೆರೆಗಳ ಭತ್ತಿದರೆ ನೀರಿನ ಸಮಸ್ಯ ಎದುರಾಗುತ್ತಿತ್ತು. ಈಗ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

English summary
Ballari city to get 24*7 drinking water. District in-charge minister B. Sriramulu launched lake filling project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X