ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬಳ್ಳಾರಿಯ VIMS ಆಸ್ಪತ್ರೆಯ ವಿದ್ಯಾರ್ಥಿ, ಸಿಬ್ಬಂದಿ ಸೇರಿ 21 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಬಳ್ಳಾರಿ, ಜನವರಿ 05: ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯ ವಿದ್ಯಾರ್ಥಿ, ಸಿಬ್ಬಂದಿ ಸೇರಿ 21 ಮಂದಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಒಂದೇ ಆಸ್ಪತ್ರೆಯ 21 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ 3ನೇ ಅಲೆಗೆ ಮುನ್ನುಡಿ ಎಂಬಂತೆ ಒಂದೇ ದಿನ ಬರೋಬ್ಬರಿ 2,479 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ ಮಂಗಳವಾರ 2053 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇನ್ನು ರಾಜ್ಯದಲ್ಲಿ ಈವರೆಗೆ 226 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ.

Ballari: 21 Staff And Students Of VIMS Hospital Tested Positive For Covid-1

ಜಿಲ್ಲಾವಾರು ಲೆಕ್ಕಾಚಾರ: ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2053 ಪ್ರಕರಣಗಳು ಪತ್ತೆಯಾಗಿರೋದನ್ನು ಹೊರತುಪಡಿಸಿದರೆ, ಮತ್ಯಾವ ಜಿಲ್ಲೆಯಲ್ಲೂ ಮಂಗಳವಾರ ಒಂದೇ ದಿನ ದೃಢಪಟ್ಟ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಮೂರಂಕಿ ದಾಟಿಲ್ಲ.

ಬೆಂಗಳೂರಿನ ನಂತರದ ಸ್ಥಾನದಲ್ಲಿ ಮಂಗಳೂರು ಇದ್ದು 75 ಪ್ರಕರಣಗಳು ದೃಢಪಟ್ಟಿವೆ. ಉಡುಪಿ 72, ಮೈಸೂರು 48, ಬೆಳಗಾವಿ 45, ಧಾರವಾಡ 29, ಹಾಸನ 18, ಮಂಡ್ಯ 17, ಕಲಬುರಗಿ 16, ಬೆಂಗಳೂರು ಗ್ರಾಮಾಂತರ 15, ಕೋಲಾರ 14, ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 11 ಪ್ರಕರಣಗಳು ಮಂಗಳವಾರ ದೃಢಪಟ್ಟಿವೆ.

ಇನ್ನುಳಿದಂತೆ ಬಾಗಲಕೋಟೆ 02, ಬಳ್ಳಾರಿ 09, ಬೀದರ್ 02, ಚಾಮರಾಜನಗರ 02, ಚಿಕ್ಕಬಳ್ಳಾಪುರ 05, ಚಿಕ್ಕಮಗಳೂರು 04, ಚಿತ್ರದುರ್ಗ 02, ದಾವಣಗೆರೆ 03, ಗದಗ 02, ಕೊಡಗು 07, ಕೊಪ್ಪಳ 01, ರಾಯಚೂರು 03, ರಾಮನಗರ 05, ಶಿವಮೊಗ್ಗ 03, ಉತ್ತರ ಕನ್ನಡ 04, ಯಾದಗಿರಿಯಲ್ಲಿ 01 ಪ್ರಕರಣ ದೃಢಪಟ್ಟಿದ್ದು, ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮಂಗಳವಾರ ಯಾವುದೇ ಹೊಸ ಕೊರೊನಾ ಪ್ರಕರಣ ದೃಢಪಟ್ಟಿಲ್ಲ.

ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 2.59ಕ್ಕೆ ಏರಿಕೆ ಕಂಡಿದೆ. ಮಂಗಳವಾರ ಕೂಡಾ 4 ಕೊರೊನಾ ಸೋಂಕಿತರು ರಾಜ್ಯದ ಹಲವೆಡೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ಪ್ರಕರಣಗಳ ಸಂಖ್ಯೆ 30,13,326ಕ್ಕೆ ಏರಿಕೆ ಕಂಡಿದ್ದು, ಸದ್ಯ ರಾಜ್ಯಾದ್ಯಂತ 13,532 ಸಕ್ರಿಯ ಕೊರೊನಾ ಸೋಂಕು ಪ್ರಕರಣಗಳಿವೆ.

Recommended Video

ತಜ್ಞರ ಜೊತೆ ಮಹತ್ವದ ಸಭೆ ಮಾಡಲಿರುವ ಮುಖ್ಯ ಮಂತ್ರಿ! | Oneindia Kannada

ರಾಜ್ಯದಲ್ಲಿ ಈವರೆಗೆ 29,61,410 ಕೊರೊನಾ ಸೋಂಕಿತರು ಮಾರಕ ವೈರಸ್‌ ಸೋಂಕಿನಿಂದ ಗುಣಮುಖರಾಗಿದ್ದು, ಮಂಗಳವಾರ ಕೂಡಾ 288 ಸೋಂಕಿತರು ಗುಣಮುಖರಾಗಿದ್ದಾರೆ.

ದುರಾದೃಷ್ಟವಶಾತ್, ಈವರೆಗೆ ರಾಜ್ಯದಲ್ಲಿ 38,355 ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಮರಣ ಪ್ರಕರಣ 0.16ರಷ್ಟಿದ್ದು, ಕೊರೊನಾ ಪಾಸಿಟಿವಿಟಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ, ಬೆಡ್, ಆಕ್ಸಿಜನ್ ಸಮಸ್ಯೆ ಎದುರಾದರೆ ಮರಣ ಪ್ರಮಾಣದಲ್ಲೂ ಏರಿಕೆಯಾಗುವ ಭೀತಿ ಎದುರಾಗಿದೆ.

English summary
In Ballari 21 Staff And Students Of VIMS Hospital Tested Positive For Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X