ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಂಪ್ ಜತೆ ಬ್ರೇಕ್ ಫಾಸ್ಟಿಗೆ ಆಹ್ವಾನ ಶ್ರೀರಾಮುಲು ಏನಂತಾರೆ?

By ಜಿಎಂ ರೋಹಿಣಿ
|
Google Oneindia Kannada News

ಬಳ್ಳಾರಿ, ಫೆಬ್ರವರಿ 02: ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರನ್ನು ಅಮೆರಿಕಾದ 'ನ್ಯಾಷನಲ್ ಪ್ರೇಯರ್ ಫಾರ್ ಬ್ರೇಕ್‍ಫಾಸ್ಟ್' ಸಮಿತಿ ಟ್ರಂಪ್ ಜೊತೆಗಿನ ಉಪಹಾರದ ಔತಣದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ. ಭಾರತ ಸೇರಿದಂತೆ ವಿಶ್ವದ 160 ರಾಷ್ಟ್ರಗಳ ಮುಖಂಡರಿಗೆ ಈ ರೀತಿಯ ಆಹ್ವಾನ ನೀಡಲಾಗಿದೆ.

ಬಳ್ಳಾರಿ ಜಿಲ್ಲೆ, ಬಿ. ಶ್ರೀರಾಮುಲು ಮತ್ತು ಬಿಜೆಪಿಗೆ ಈ ಆಹ್ವಾನ ಮಹತ್ತರವಾಗಿದೆ. ಅಷ್ಟೇ ಅಲ್ಲ, ವೈಯಕ್ತಿಕವಾಗಿ ಬಿ. ಶ್ರೀರಾಮುಲು ಅವರಿಗೆ ಈ ಆಹ್ವಾನ ರಾಜಕೀಯ ತಿರುವು ತರಲಿದೆ ಎಂದೇ ಅವರ ಆಪ್ತರು ಲೆಕ್ಕಾಚಾರ ಹಾಕುತ್ತಿದ್ದಾರೆ.

B Sriramulu gets chance to breakfast with Donald Trump

ಆದರೆ, ಬಜೆಟ್ ಅಧಿವೇಶನದಲ್ಲಿ ಪ್ರತಿಯೊಬ್ಬ ಸಂಸದರೂ ತಪ್ಪದೇ ಹಾಜರಿರಬೇಕು ಎಂದು ಬಿಜೆಪಿ ಹೈಕಮಾಂಡ್ ವ್ಹಿಪ್ ಜಾರಿ ಮಾಡಿರುವ ಹಿನ್ನಲೆಯಲ್ಲಿ ಬಿ. ಶ್ರೀರಾಮುಲು ಈ ಔತಣಕೂಟದಲ್ಲಿ ಪಾಲ್ಗೊಳ್ಳುವ ವಿಶ್ವಾಸ ಹೊಂದಿಲ್ಲ.

ಆದರೂ, ಈ ಔತಣಕೂಟದ ಆಹ್ವಾನದ ಕುರಿತು ಬಿ. ಶ್ರೀರಾಮುಲು ಬಿಜೆಪಿಯ ಹೈಕಮಾಂಡ್‍ಗೆ ಮಾಹಿತಿ ನೀಡಿದ್ದಾರೆ.ಪಕ್ಷದ ಹೈಕಮಾಂಡ್ ಒಪ್ಪಿಗೆ ಸೂಚಿಸಿದಲ್ಲಿ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜೊತೆಯಲ್ಲಿ ಈ ಔತಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಭಾರತದಿಂದ ಬಿ. ಶ್ರೀರಾಮುಲು ಮತ್ತು ದೇವೇಂದ್ರ ಫಡ್ನವೀಸ್ ಅವರು ಆಹ್ವಾನಿತರು.

B Sriramulu gets chance to breakfast with Donald Trump

ಆಹ್ವಾನದ ಬಗ್ಗೆ ಒನ್ ಇಂಡಿಯಾ ಜೊತೆ ಮಾತನಾಡಿದ ಬಿ. ಶ್ರೀರಾಮುಲು, 'ಅಮೆರಿಕ ಅಧ್ಯಕ್ಷರ ಜೊತೆಗಿನ ಉಪಹಾರದ ಔತಣಕ್ಕೆ ನವೆಂಬರ್ 5 ರಂದೇ ಆಹ್ವಾನ ಸಿದ್ಧಗೊಂಡು, ನನಗೆ ನವೆಂಬರ್ ನಲ್ಲಿ ತಲುಪಿದೆ. ಪಕ್ಷ ಒಪ್ಪಿಗೆ ನೀಡಿದಲ್ಲಿ, ಅಮೆರಿಕಕ್ಕೆ ಹೋಗಲು ಅಗತ್ಯವಾದ ವೀಸಾ, ಕಾಗದಪತ್ರಗಳು ಮತ್ತು ಇನ್ನಿತರೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಪಕ್ಷ ಒಪ್ಪಿಗೆ ನೀಡಿದಲ್ಲಿ ಮಾತ್ರ, ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಗೈರು ಹಾಜರಿ ಆಗಿ, ಅಮೆರಿಕಾಕ್ಕೆ ತೆರಳುವೆ. ಇಲ್ಲವಾದಲ್ಲಿ ಬಜೆಟ್ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವೆ' ಎಂದು ತಿಳಿಸಿದರು.

ನ್ಯಾಷನಲ್ ಪ್ರೇಯರ್ ಬ್ರೇಕ್ ಫಾಸ್ಟ್​ನಲ್ಲಿ ಪಾಲ್ಗೊಳ್ಳಲು ಈ ಹಿಂದೆ ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಅವರು ಆಹ್ವಾನ ಬಂದಿತ್ತು.

1953ರಿಂದ ಪ್ರತಿವರ್ಷ ಫೆಬ್ರವರಿ ತಿಂಗಳ ಮೊದಲ ಗುರುವಾರ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಲವು ದೇಶಗಳ ಪ್ರತಿನಿಧಿ ಗಳೊಂದಿಗೆ ಸಂವಾದ ನಡೆಸಲಾಗುತ್ತದೆ. ಟ್ರಂಪ್ ಆವರು ಪ್ರೇಯರ್ ಬ್ರೇಕ್ ಫಾಸ್ಟ್ ಆಯೋಜಕರಾಗಿದ್ದಾರೆ.

English summary
Member of Parliament B Sriramulu has said he has been been invited to join President Donald Trump at the 66th annual national prayer breakfast meet to be held in Washington, DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X