ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Ballari utsav 2023: ಉತ್ಸವಕ್ಕೆ ಮೆರಗು ನೀಡಿದ ಶ್ವಾನ ಪ್ರದರ್ಶನ, ತಳಿಗಳ ವಿವರ ಇಲ್ಲಿದೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜನವರಿ, 22: ಬಳ್ಳಾರಿ ಉತ್ಸವ ಹಿನ್ನೆಲೆ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ವಿವಿಧ ತಳಿಗಳ ಶ್ವಾನಗಳ ವೈವಿಧ್ಯವೇ ಗಮನ ಸೆಳೆದಿದೆ.

ಜಿಲ್ಲಾಡಳಿತ, ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಬಳ್ಳಾರಿ ಉತ್ಸವದ ಅಂಗವಾಗಿ ಭಾನುವಾರ (ಜನವರಿ 22) ಹಮ್ಮಿಕೊಂಡಿದ್ದ "ಶ್ವಾನ ಪ್ರದರ್ಶನ" ಎಲ್ಲರ ಗಮನ ಸೆಳೆದಿದೆ.
ಶ್ವಾನಗಳು ಸ್ಪರ್ಧಾ ಅಂಕಣದಲ್ಲಿ ಮಾಲೀಕರ ಜೊತೆ ಓಡಾಡುತ್ತಿದ್ದವು. ಅವುಗಳ ಗತ್ತು, ಗೈಮ್ಮತ್ತನ್ನು ಕಣ್ತುಂಬಿಕೊಳ್ಳಲು ಜನರು ಇದೇ ಸಂದರ್ಭದಲ್ಲಿ ಉತ್ಸುಕರಾದರು. ದೇಶ- ವಿದೇಶಗಳ ವಿವಿಧ ತಳಿಗಳಿಂದಾಗಿ ಇಡೀ ವಾತಾವರಣ ಜನಾಕರ್ಷಣೆಯ ಕೇಂದ್ರವಾಗಿತ್ತು.

Puneeth Rajkumar; ಬಳ್ಳಾರಿಯಲ್ಲಿ 23 ಅಡಿಯ ಪ್ರತಿಮೆ ಅನಾವರಣPuneeth Rajkumar; ಬಳ್ಳಾರಿಯಲ್ಲಿ 23 ಅಡಿಯ ಪ್ರತಿಮೆ ಅನಾವರಣ

ಶ್ವಾನ ಪ್ರದರ್ಶನ ಆರಂಭಕ್ಕೂ ಮುನ್ನ ಅಳುಕುತ್ತಲೇ ಆಕರ್ಷಕ ಮೈಮಾಟದ ಶ್ವಾನಗಳ ಬಳಿ ನಿಂತು ಕೆಲ ಯುವಕ, ಯುವತಿಯರು ಸೆಲ್ಫೀ ತೆಗೆದುಕೊಳ್ಳಲು ಸಹ ಮುಂದಾದರು. ಮಾಲೀಕರು ಶ್ವಾನಗಳನ್ನು ವಿಶಿಷ್ಟ ಹೆಸರುಗಳಿಂದ ಕರೆಯುತ್ತಾ ಮುದ್ದಿಸುತ್ತಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು. ಶ್ವಾನಗಳನ್ನು ನೋಡಲಿಕ್ಕಾಗಿ ಜನ ದಂದೇ ನೆರೆದಿತ್ತು. ಆರು ತಿಂಗಳ ಮರಿಗಳಿಂದ ಹಿಡಿದು ಕೆಲ ದೈತ್ಯಾಕಾರದ ಶ್ವಾನಗಳ ದೇಹದಾಡ್ಯ ಕಂಡು ಜನ ಹುಬ್ಬೇರಿಸಿದರು.

 ವಿವಿಧ ತಳಿಯ ಶ್ವಾನಗಳ ಆಗಮನ

ವಿವಿಧ ತಳಿಯ ಶ್ವಾನಗಳ ಆಗಮನ

ಮುಧೋಳ, ಗೋಲ್ಡನ್ ರೆಡ್ ರಿವರ್, ಸೈಬೇರಿಯನ್ ಹಸ್ಕಿ, ಹಲಾಸ್ಕ್ ಪೊಮೋರಿಯನ್, ಸೈಂಟ್ ವರ್ನಾಡೋ, ಗ್ರೇಟ್ ಫೆಲ್, ಸೇನ್ ಪಾರ್ಲರ್, ಗೋಲ್ಡನ್ ರಿಟ್ರೀವರ್, ಡ್ಯಾಶ್ ಹೌಡ್, ಗ್ರೇಟ್ ಡೇನ್, ಡಾಬರಮನ್, ಬೀಗಲ್, ಜರ್ಮನ್ ಶಫರ್ಡ್, ರ್ಯಾಟ್ ವಿಲ್ಲರ್, ಅಮೆರಿಕನ್ ಬುಲ್ಲಿ ಡಾಗ್, ಲ್ಯಾಬ್ರ ಡಾರ್ ರಿಟ್ರೀವರ್, ಪಗ್, ಇಟಾಲಿಯನ್ ಮ್ಯಾಸಕಾಟ್, ಡಾಲ್‍ಮಿಷನ್ ಸೇರಿ ಅನೇಕ ತಳಿಗಳ ಶ್ವಾನಗಳು ನೋಡುಗರವನ್ನು ಮನಸೋರೆಗೊಳಿಸಿದವು.

 ಶ್ವಾನಗಳ ತಪಾಸಣೆ ಮಾಡಿದ ವೈದ್ಯರು

ಶ್ವಾನಗಳ ತಪಾಸಣೆ ಮಾಡಿದ ವೈದ್ಯರು

ಪ್ರದರ್ಶನದಲ್ಲಿ ಭಾಗವಹಿಸಲು ಆಗಮಿಸಿದ ಶ್ವಾನಗಳ ಆರೋಗ್ಯ ತಪಾಸಣೆಯನ್ನು ಕೂಡ ನಡೆಸಲಾಯಿತು. ಈ ವೇಳೆ ಶ್ವಾನಗಳ ವಿವಿಧ ತಳಿಗಳು, ವಯೋಮಿತಿ, ಇತರೆ ಮಾನದಂಡ ಆಧಾರಿಸಿ ಸ್ಪರ್ಧೆಗೆ ಅಣಿಗೊಳಿಸಲಾಯಿತು. ಪಶು ಇಲಾಖೆ ವತಿಯಿಂದ ಸ್ಪರ್ಧೆಗೆ ಆಗಮಿಸಿದ ಶ್ವಾನಗಳಿಗೆ ಬಿಸಿ ನೀರು, ಹಾಲು, ಜಂತುಹುಳು ನಿವಾರಣೆ ಮಾತ್ರೆ ಹಾಗೂ ಆಹಾರ ಉಣಿಸುವ ಬೌಲ್‍ಗಳನ್ನು ನೀಡಲಾಯಿತು. ಪಾಲಿಕ್ಲಿನಿಕ್ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಸಂತ್ ಪ್ರಭುರಾಜ್ ಶ್ವಾನಗಳ ಆರೋಗ್ಯವನ್ನು ತಪಾಸಣೆ ನಡೆಸಿದರು.
ಶ್ವಾನಗಳ ತಳಿಗಳ ಗುಣ, ವಿದೇಯತೆ, ಮಾಲೀಕರೊಂದಿಗಿನ ಒಡನಾಟ, ಸ್ವಚ್ಚತೆ ನಿರ್ವಹಣೆ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

 ಹೈದರ್ ಶ್ವಾನದ ವಿಶೇಷತೆ ಏನು?

ಹೈದರ್ ಶ್ವಾನದ ವಿಶೇಷತೆ ಏನು?

ಬಳ್ಳಾರಿ ಉತ್ಸವದ ವಿಶೇಷ ಆಕರ್ಷಣೆ ಆಗಿರುವ ಶ್ವಾನ ಪ್ರದರ್ಶನದಲ್ಲಿ ಬೆಂಗಳೂರು ಉದ್ಯಮಿ ಸತೀಶ್ ಅವರ ರಷ್ಯನ್ ಮೂಲದ 100 ಕೆ.ಜಿ. ತೂಕದ 20 ಕೋಟಿ ರೂಪಾಯಿ ಮೌಲ್ಯದ ಕಕೇಶಿಯನ್ ಶಫರ್ಡ್ ತಳಿಯ ಶ್ವಾನ ಗಮನ ಸೆಳೆದಿದೆ. ಈ ಹೈದರ್ ನೋಡಲು ಜನರು ಮುಗಿಬಿದ್ದ ಪ್ರಸಂಗವೂ ಕಂಡುಬಂದಿತು.
ಮಾಲೀಕರೊಂದಿಗೆ ಹವಾನಿಯಂತ್ರಿತ ಐಷಾರಾಮಿ ಕಾರಿನಲ್ಲಿ ಬಂದ ಹೈದರ್ ನೋಡಲು ವಾಡ್ರ್ಲಾ ಮುಖ್ಯ ದ್ವಾರದ ಬಳಿಯೇ ಜನರು ಜಮಾಯಿಸಿದ್ದರು.

 ಹೈದರ್‌ ಜೊತೆ ಸೆಲ್ಫೀ ತೆಗೆದುಕೊಂಡ ಶಾಸಕ

ಹೈದರ್‌ ಜೊತೆ ಸೆಲ್ಫೀ ತೆಗೆದುಕೊಂಡ ಶಾಸಕ

ಕಾರಿನ ಕಿಟಕಿಯ ಮೂಲಕ ಹೈದರ್‌ ನನ್ನು ನೋಡಿ ಜನರು ಸೋಜಿಗಕ್ಕೆ ಒಳಗಾಗುತ್ತಿದ್ದರು. ಈ ಕಾರಣದಿಂದ ಕಾಲೇಜಿನ ಎದುರಿನ ರಸ್ತೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವೇದಿಕೆಗೆ ಆಗಮಿಸಿದ ಹೈದರ್‌ನನ್ನು ತಲೆಮುಟ್ಟಿ ಸವರಿ ತಮ್ಮ ಮೊಬೈಲ್‍ನಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸೆಲ್ಪೀ ತೆಗೆದುಕೊಂಡು ಸಂತಸಪಟ್ಟರು.

ಶ್ವಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Ballari utsav 2023, Attracted attention Dog show, Here see details of the breeds, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X