ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಮಪಾತ; ಹೊಸಪೇಟೆ, ಹುಬ್ಬಳ್ಳಿ ಪ್ರವಾಸಿಗರನ್ನು ರಕ್ಷಿಸಿದ ಸೇನೆ

|
Google Oneindia Kannada News

ಹೊಸಪೇಟೆ, ಮಾರ್ಚ್ 14; ಪ್ರವಾಸಕ್ಕೆ ತೆರಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತದಿಂದಾಗಿ ಹೋಟೆಲ್‌ನಲ್ಲಿ ಸಿಲುಕಿದ್ದ ವಿಜಯನಗರ, ಹುಬ್ಬಳ್ಳಿ ಮೂಲದ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ.

ಹಿಮಪಾತದಿಂದಾಗಿ ಹೊಸಪೇಟೆ ಮತ್ತು ಹುಬ್ಬಳ್ಳಿ ಮೂಲದ ಪ್ರವಾಸಿಗರು ಕಾಶ್ಮೀರದ ಸೋನಾಮಾರ್ಗದ ಹೊಟೇಲ್‌ನಲ್ಲಿ ಸಿಲುಕಿದ್ದರು. ಕಾಶ್ಮೀರದ ಸ್ಥಳೀಯ ಆಡಳಿತ, ಮಿಲಿಟರಿ ಪಡೆಯಿಂದ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ.

ಉತ್ತರಾಖಂಡ್ ಹಿಮಪಾತ: ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಉತ್ತರಾಖಂಡ್ ಹಿಮಪಾತ: ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ

ಹೊಸಪೇಟೆಯ ಪ್ರಕಾಶ್ ಮೆಹರವಾಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ಹೊಟೇಲ್‌ನಿಂದ ರಕ್ಷಣೆ ಮಾಡಿದ ಎಲ್ಲರಿಗೂ ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲಿ ಉಪಹಾರ, ಟೀ ವ್ಯವಸ್ಥೆ ಮಾಡಲಾಗಿದೆ. ಯೋಧರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.

ಉತ್ತರಾಖಂಡ್ ಹಿಮಪಾತ: 3 ಮೃತದೇಹ ಪತ್ತೆ, 16 ಜನರ ರಕ್ಷಣೆ ಉತ್ತರಾಖಂಡ್ ಹಿಮಪಾತ: 3 ಮೃತದೇಹ ಪತ್ತೆ, 16 ಜನರ ರಕ್ಷಣೆ

Army Rescued Hospet, Hubballi Tourists Stranded In Kashmir

ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಪ್ರಕಾಶ್ ಮತ್ತವರ ಕುಟುಂಬದ 15 ಜನರು, ಹುಬ್ಬಳ್ಳಿಯ ಕೇಶ್ವಾಪುರದ ಅಂಬಿಕಾ ನಗರದ ವೆಂಕಟೇಶ ಜಲಭಂಜನ್ ಕುಟುಂಬದ 8 ಜನರು ಹಿಮಪಾತದಿಂದಾಗಿ ಮೂರು ದಿನಗಳಿಂದ ಹೋಟೆಲ್‌ನಲ್ಲಿ ಸಿಲುಕಿದ್ದರು.

ಶ್ರೀನಗರ ಹಿಮಪಾತ: ಮೂರನೇ ದಿನವೂ ವಿಮಾನಗಳ ಹಾರಾಟ ಸ್ಥಗಿತ ಶ್ರೀನಗರ ಹಿಮಪಾತ: ಮೂರನೇ ದಿನವೂ ವಿಮಾನಗಳ ಹಾರಾಟ ಸ್ಥಗಿತ

ಈ ಕುರಿತು ಸಚಿವ ಆನಂದ್ ಸಿಂಗ್ ಸೇರಿದಂತೆ ಹಲವರಿಗೆ ಮಾಹಿತಿ ನೀಡಲಾಗಿತ್ತು. ಜಮ್ಮು ಕಾಶ್ಮೀರದ ಪೊಲೀಸ್ ಆಯುಕ್ತರು ಹೋಟೆಲ್‌ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಯೋಧರ ಸಹಾಯದಿಂದ ಹೋಟೆಲ್‌ನಲ್ಲಿ ಸಿಲುಕಿದ್ದ ಎಲ್ಲರನ್ನೂ ರಕ್ಷಣೆ ಮಾಡಲಾಗಿತ್ತು.

ಮೊದಲ ಐದು ದಿನಗಳ ಕಾಲ ಕಾಶ್ಮೀರದ ಸುತ್ತಮುತ್ತಲಿನ ಪ್ರದೇಶಗಳನ್ನು ಎಲ್ಲರೂ ವೀಕ್ಷಿಸಿದ್ದರು. ಬಳಿಕ ಹಿಮಪಾತ ಆರಂಭವಾದ ಕಾರಣ ಹೋಟೆಲ್‌ನಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಹೋಟೆಲ್‌ನಲ್ಲಿ ಸಿಲುಕಿದ್ದರು.

English summary
Indian army rescued Hospet and Hubballi tourists who stranded at a private hotel in Sonmarg in Jammu and Kashmir following heavy snowfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X